ಅಯೋಧ್ಯೆಯಲ್ಲಿ ಹಸುಗಳಿಗೆ ಬ್ಲೇಜರ್..!

0
378

ಲಕ್ನೋ: ಅಯೋಧ್ಯೆಯಲ್ಲಿ ಹಸುಗಳಿಗೆ ಬಟ್ಟೆ ತೊಡಿಸೋಕೆ ಅಲ್ಲಿನ ಸ್ಥಳೀಯ ಆಡಳಿತ ಮುಂದಾಗಿದೆ. ಏನಿದು ಹಸುಗಳಿಗೂ ಬಟ್ಟೆನಾ ಅಂತ ಮೂಗಿನ ಮೇಲೆ ಬೆರಳಿಟ್ಟುಕೊಂಡರೂ ನೀವು ನಂಬಲೇ ಬೇಕು. ಚಳಿಯಿಂದ ಅವುಗಳನ್ನು ರಕ್ಷಿಸಲು ಸರ್ಕಾರ ಇಂತಹದ್ದೊಂದು ಮಹತ್ವದ ಕಾರ್ಯ ಯೋಜಿಸಿದೆ. 

ಉತ್ತರ ಪ್ರದೇಶದಲ್ಲಿ ಚಳಿಗಾಳಿ ಹೆಚ್ಚಾಗಿದ್ದು, ಭಾರಿ ಚಳಿಗಾಳಿಯಿಂದ ದನ-ಕರುಗಳು ನಲುಗಿವೆ. ಹೀಗಾಗಿ ಅವುಗಳಿಗೆ ಬಟ್ಟೆ ಹಾಕಲಾಗುತ್ತಿದೆ. ಮೊದಲು  ಬಟ್ಟೆ ಹಾಕಲು ನಿರ್ಧರಿಸಿದ್ದು, ಮುಂದಿನ ಹಂತದಲ್ಲಿ ಬ್ಲೇಜರ್ ರೀತಿಯ ಧರಿಸುಗಳನ್ನು ನೀಡಲಿದ್ದು, ನಗರ ಪಾಲಿಕೆಯೇ ಹಣವನ್ನು ವ್ಯಯಿಸುತ್ತಿದೆ. 

ಇತ್ತೀಚೆಗೆ ಪಾಲಿಕೆ ಅಧಿಕಾರಿಗಳನ್ನು ಭೇಟಿ ಮಾಡಿದ ಸಾಧು-ಸಂತರ ನಿಯೋಗ ಹಸುಗಳನ್ನು ಚಳಿಯಿಂದ ರಕ್ಷೀಸುವಂತೆ ಮನವಿ ಮಾಡಿದ್ದಾರೆ. ಇದಕ್ಕೆ ಪ್ರಾಧಿಕರವು ಸಕಾರಾತ್ಮಕವಾಗಿ ಸ್ಪಂದಿಸಿದೆ. ಅಯೋಧ್ಯೆ ನಗರದಲ್ಲಿ 7 ಸಾವಿರಕ್ಕೂ ಅಧಿಕ ಬೀದಿ ಹಸುಗಳಿವೆ . ಆದರೆ ಪಾಲಿಕೆ ನಿರ್ಧಾರಕ್ಕೆ ಕೆಲವರು ವಿರೋಧ ವ್ಯಕ್ತಪಡಿಸಿದ್ದಾರೆ. ನಗರದಲ್ಲಿ 40 ಸಾವಿರಕ್ಕೂ ಹೆಚ್ಚು ಭಿಕ್ಷುಕರು ಹಾಗೂ ನಿರ್ಗತಿಕರಿದ್ದಾರೆ ಅವರನ್ನು ಮೊದಲು ಚಳಿಯಿಂದ ರಕ್ಷಿಸಿ , ಮನುಷ್ಯರನ್ನು ಬಿಟ್ಟು ಗೋವುಗಳನ್ನು ರಕ್ಷಿಸುವ ಅಗತ್ಯವೇನಿದೆ? ಎಂಬುದು ಯೋಜನೆ ವಿರೋಧಿಗಳ ವಾದ. 

LEAVE A REPLY

Please enter your comment!
Please enter your name here