ಶಾಸಕಾಂಗ ಸಭೆಯಲ್ಲಿ ಮುಂದಿನ ಹೋರಾಟದ ಬಗ್ಗೆ ನಿರ್ಧಾರಿಸುತ್ತಾ ಬಿಜೆಪಿ..?

0
241

ಬೆಂಗಳೂರು: ಬಜೆಟ್‌ ಮುನ್ನಾ ದಿನ ಅಂದ್ರೆ ಇಂದು ಬಿಜೆಪಿ ಶಾಸಕಾಂಗ ಸಭೆ ನಡೆಸಲಿದೆ. ಬಹುಮತವಿಲ್ಲದ ಸರ್ಕಾರದ ವಿರುದ್ಧ ಸಭೆಯಲ್ಲಿ ಚರ್ಚಿಸಿ ಮುಂದಿನ ಹೋರಾಟದ ಬಗ್ಗೆ ಅಂತಿಮ ನಿರ್ಧಾರ ಪ್ರಕಟಿಸುವ ಸಾಧ್ಯತೆಗಳಿವೆ.

ಈಗಾಗಲೇ ಹಿರಿಯ ಶಾಸಕರು ಮಾತ್ರ ಸದನದಲ್ಲಿ ಮಾತನಾಡುವಂತೆ ಬಿ.ಎಸ್‌ ಯಡಿಯೂರಪ್ಪ ಸೂಚನೆ ನೀಡಿದ್ದಾರೆ ಎನ್ನಲಾಗಿದೆ. ಇನ್ನೊಂದೆಡೆ ಸದನಕ್ಕೆ ಗೈರಾದ ಕಾಂಗ್ರೆಸ್‌ ಅತೃಪ್ತರ ಮೇಲೆ ನಿಗಾ ಇಟ್ಟಿರುವ ಬಿಜೆಪಿ ಟೀಮ್‌, ಎಲ್ಲ ಅತೃಪ್ತರನ್ನು ಒಂದಡೆ ಸೇರಿಸುವ ಪ್ರಯತ್ನ ಮುಂದುವರಿಸಿದೆ. ಇದರ ಮಧ್ಯೆ ಕೇಸರಿ ಪಡೆಗೆ ರಿವರ್ಸ್ ಆಪರೇಷನ್‌ ಭೀತಿ ಎದುರಾಗಿದ್ದು, ಗೈರು ಹಾಜರಾದ ಎಲ್ಲ ಬಿಜೆಪಿ ಶಾಸಕರ ಕಡ್ಡಾಯ ಹಾಜರಿಗೆ ಬಿ.ಎಸ್.ಯಡಿಯೂರಪ್ಪ ಸೂಚನೆ ನೀಡಿದ್ದಾರೆ.

LEAVE A REPLY

Please enter your comment!
Please enter your name here