ಸಿಎಂ ಸೀಟಲ್ಲಿ ಕುಳಿತ ಕುಮಾರಸ್ವಾಮಿಗೆ ಕುಟುಂಬದ್ದೇ ಚಿಂತೆ: ಬಿಜೆಪಿ ವ್ಯಂಗ್ಯ..!

0
154

ಬೆಂಗಳೂರು: ಸಿಎಂ ಕುಮಾರಸ್ವಾಮಿ ವಿರುದ್ಧ ರಾಜ್ಯ ಬಿಜೆಪಿ ವ್ಯಂಗ್ಯವಾಗಿ ಟ್ವೀಟ್ ಮಾಡಿದೆ. ಸಿಎಂ ಕಾರ್ಯ ವೈಖರಿಯನ್ನು ವಿವರಿಸಿ ಟ್ವಿಟರ್​ನಲ್ಲಿ ವ್ಯಂಗ್ಯ ಮಾಡಲಾಗಿದೆ. ಸಿಎಂ ಕುರ್ಚಿಯಲ್ಲಿ ಕುಳಿತು ಕುಮಾರಸ್ವಾಮಿ ಕುಟುಂಬದ ಬಗ್ಗೆ ಯೋಚನೆ ಮಾಡೋದ್ರಲ್ಲೇ ಕಾಲ ಕಳೆದಿದ್ದಾರೆ ಅಂತ ಟೀಕಿಸಿದ್ದಾರೆ.

ಸಿಎಂ 9 ತಿಂಗಳ ಕಾರ್ಯವೈಖರಿ ಬಗ್ಗೆ ವ್ಯಂಗ್ಯವಾಗಿ ಟ್ವೀಟ್ ಮಾಡಿದ್ದು,  ಸಿಎಂ ಅಧಿಕಾರ ವಹಿಸಿಕೊಂಡ ಮೇಲೆ ಮೊದಲ 2 ತಿಂಗಳು ಸರ್ಕಾರ ರಚಿಸುವ ಯೋಚನೆಯಲ್ಲೇ ಕಳೆದಿದ್ರು. ನಂತರದ 3-4 ನೇ ತಿಂಗಳು ಪತ್ನಿ ಗೆಲುವಿನ ಬಗ್ಗೆ ಚಿಂತನೆ ನಡೆಸಿದ್ರು. ನಂತರದ 5-6 ತಿಂಗಳು ಮಗನ ಸಿನಿಮಾ ಪ್ರಮೋಷನ್​​​ನಲ್ಲಿ ಬ್ಯುಸಿಯಾಗಿದ್ರು. ಇನ್ನು 7-8 ತಿಂಗಳು ಲೋಕಸಭಾ ಚುನಾವಣೆಗೆ ಪುತ್ರನನ್ನು ಗೆಲ್ಲಿಸುವ ಯೋಚನೆಯಲ್ಲಿದ್ದಾರೆ. ಒಟ್ಟಿನಲ್ಲಿ ಅವರು ಸಿಎಂ ಕುರ್ಚಿಯಲ್ಲಿ ಕೂತು ಬರೀ ಕುಟುಂಬದ ಬಗ್ಗೆ ಯೋಚನೆ ಮಾಡೋದೆ ಆಯ್ತು ಅಂತ ವ್ಯಂಗ್ಯವಾಗಿ ಟೀಕಿಸಿದೆ.

LEAVE A REPLY

Please enter your comment!
Please enter your name here