ಚಿಕ್ಕಮಗಳೂರು: 5ವರ್ಷದಿಂದ ನಾಪತ್ತೆಯಾಗಿದ್ದ ನೀವು ಈಗ ಮೋದಿ ಹೆಸರಲ್ಲಿ ಗೆಲ್ಲಲು ಬಂದಿದ್ದೀರಾ ಅಂತ ಬಿಜೆಪಿ ಕಾರ್ಯಕರ್ತರು ಸಂಸದೆ ಶೋಭಾ ಕರಂದ್ಲಾಜೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಬಿಜೆಪಿ ಸಂಸದೆ ಶೋಭಾ ಕರಂದ್ಲಾಜೆ ವಿರುದ್ಧ ಬಿಜೆಪಿ ಕಾರ್ಯಕರ್ತರು ‘ಗೋ ಬ್ಯಾಕ್ ಶೋಭಕ್ಕ” ಅಂತ ಕಿಡಿ ಕಾರಿದ್ದಾರೆ.
ಫೇಸ್ಬುಕ್ನಲ್ಲಿ ‘ಗೋ ಬ್ಯಾಕ್ ಶೋಭಕ್ಕ ಚಳವಳಿ’ ಅನ್ನೋ ಪೋಸ್ಟ್ ವೈರಲ್ ಆಗುತ್ತಿದ್ದು, ಬಜೆಪಿ ಕಾರ್ಯಕರ್ತರು ಆನ್ಲೈನ್ನಲ್ಲಿ ಸಂಸದೆ ವಿರುದ್ಧ ಅಸಮಧಾನ ವ್ಯಕ್ತಪಡಿಸಿದ್ದಾರೆ. “5 ವರ್ಷದಿಂದ ನಾಪತ್ತೆಯಾಗಿದ್ದವರು ಈಗ ಪ್ರತ್ಯಕ್ಷರಾಗಿದ್ದು, ಮೋದಿ ಹೆಸರಲ್ಲಿ ಗೆಲ್ಲಲು ಬಂದಿದ್ದಿರಾ ? ಈಗ ಮತ್ತೆ ನಿಮಗೆ ಕ್ಷೇತ್ರ ನೆನಪಾಯ್ತಾ ಎಂದು ಫುಲ್ ಕ್ಲಾಸ್ ತೆಗೆದುಕೊಂಡಿದ್ದಾರೆ.