ಬೆಂಗಳೂರು: ಪೌರತ್ವ ತಿದ್ದುಪಡಿ ಕಾಯ್ದೆ ವಿಚಾರಕ್ಕೆ ಸಂಬಂಧಿಸಿದಂತೆ ದೇಶವ್ಯಾಪಿ ಪರ – ವಿರೋಧ ಚರ್ಚೆ ನಡೀತಾ ಇದೆ. ಬಿಜೆಪಿ ಕಾಯ್ದೆಯನ್ನು ಸಮರ್ಥಿಸಿಕೊಂಡು ಜನರ ಮನವೊಲಿಸಲು ಪ್ರಯತ್ನಿಸುತ್ತಿದೆ. ಆ ಪ್ರಯತ್ನದ ಭಾಗವಾಗಿ ‘ಮಿಸ್ಡ್ಕಾಲ್’ ಅಭಿಯಾನ ಶುರುಮಾಡಿದೆ.
ನೇಕ ಕಡೆಗಳಲ್ಲಿ ಪರ ವಿರೋಧ ವ್ಯಕ್ತವಾಗಿದ್ದು, ಬಿಜೆಪಿ ಜನರ ಮನವೊಲಿಸಲು ಪ್ರಯತ್ನಿಸುತ್ತಲೇ ಇದೆ. ಇದೀಗ ಬಿಜೆಪಿ ಪೌರತ್ವ ಕಾಯ್ದೆ ಮಿಸ್ಡ್ಕಾಲ್ ಅಭಿಯಾನ ಆರಂಭಿಸಿದೆ. ಇಂಡಿಯಾ ಸಪೋರ್ಟ್ ಸಿಎಎ ಎಂಬ ಹ್ಯಾಶ್ ಟ್ಯಾಗ್ನೊಂದಿಗೆ ಅಭಿಯಾನ ಶುರುಮಾಡಿದ್ದು, ಇದರ ಮೂಲಕ ಜನರ ಅಭಿಪ್ರಾಯವನ್ನು ತಿಳಿಯಲು ಮುಂದಾಗಿದೆ.
ಸಿಎಎ ಬೆಂಬಲಿಸುವವರು 8866288662 ನಂಬರ್ಗೆ ಮಿಸ್ಡ್ಕಾಲ್ ಕೊಡಿ ಎಂದು ಸಚಿವ ಸಿ ಟಿ ರವಿ, ಸಂಸದೆ ಶೋಭಾ ಕರಂದ್ಲಾಜೆ ಟ್ವೀಟ್ ಮಾಡಿದ್ದು, ಹಲವು ಬಿಜೆಪಿ ಮುಖಂಡರು ಟ್ವೀಟ್ ಮಾಡಿದ್ದಾರೆ.
ಪೌರತ್ವ ತಿದ್ದುಪಡಿ ಕಾಯ್ದೆ (CAA) 2019 ಕ್ಕೆ ನಿಮ್ಮ ಬೆಂಬಲ ಸೂಚಿಸಲು 8866288662 ನಂಬರ್ಗೆ Missed Call ನೀಡಿ.
Please give a Missed Call to 8866288662 and extend Your support to #CitizenshipAmendmentAct.#IndiaSupportsCAA pic.twitter.com/hhHtYJdQ7h
— C T Ravi 🇮🇳 ಸಿ ಟಿ ರವಿ (@CTRavi_BJP) January 3, 2020
ಪೌರತ್ವ ತಿದ್ದುಪಡಿ ಕಾಯ್ದೆ, #CAA2019 ಕ್ಕೆ ನಿಮ್ಮ ಬೆಂಬಲ ಸೂಚಿಸಲು 8866288662 ನಂಬರ್ಗೆ Missed Call ನೀಡಿ.#IndiaSupportsCAA pic.twitter.com/o50YQEtFI4
— Shobha Karandlaje (@ShobhaBJP) January 3, 2020