ಬಜೆಟ್​ ಪ್ರತಿ ಹಂಚದಿರುವ ಸಿಎಂ ನಿರ್ಧಾರವೇ ಬಿಜೆಪಿಗೆ ಅಸ್ತ್ರ..?

0
225

ಬೆಂಗಳೂರು: ಮೊದಲೆರೆಡು ದಿನದ ಅಧಿವೇಶನ ಬಿಜೆಪಿ ಗದ್ದಲಕ್ಕೆ ಬಲಿಯಾಗಿದೆ. ಇಂದು ಮುಖ್ಯಮಂತ್ರಿ ಕುಮಾರಸ್ವಾಮಿ ಬಜೆಟ್‌ ಮಂಡಿಸಲಿದ್ದು, ಅದಕ್ಕೂ ಕೇಸರಿ ಪಡೆ ಅಡ್ಡಿಪಡಿಸುವ ಸಾಧ್ಯತೆ ಹೆಚ್ಚಿದೆ. ಬಜೆಟ್‌ ಮಂಡನೆಗೂ ಮುನ್ನ ಪ್ರತಿ ನೀಡದ ಸಿಎಂ ನಿರ್ಧಾರವನ್ನೇ ಅಸ್ತ್ರವಾಗಿ ಬಳಸಿಕೊಳ್ಳಲು ಬಿಜೆಪಿ ತಂತ್ರ ಹೆಣೆದಿದೆ. ಈ ಸಂಬಂಧ ಇಂದೂ ಸಹ ಬಿಜೆಪಿ ಶಾಸಕಾಂಗ ಸಭೆ ನಡೆಯಲಿದ್ದು, ಮೈತ್ರಿ ಸರ್ಕಾರಕ್ಕೆ ಮುಂದೆ ಹೇಗೆ ಶಾಕ್‌ ಕೊಡ್ಬೇಕು ಅನ್ನೋದ್ರ ಬಗ್ಗೆ ಗಂಭೀರ ಚರ್ಚೆಗಳು ನಡೆಯಲಿದೆ ಅಂತ ಹೇಳಲಾಗ್ತಿದೆ. ಬಜೆಟ್‌ ಮಂಡನೆಗೆ ಅವಕಾಶ ನೀಡಬೇಕೇ, ಬೇಡ್ವೇ.. ಅಡ್ಡಿಪಡಿಸುವುದಾದ್ರೆ ಅದು ಹೇಗೆ ಅನ್ನೋದ್ರ ಕುರಿತು ಬಿಜೆಪಿ ಶಾಸಕರು ಇಂದಿನ ಸಭೆಯಲ್ಲಿ ಚರ್ಚೆ ನಡೆಸಲಿದ್ದಾರೆ.

ಅಧಿವೇಶನದ ಆರಂಭದಲ್ಲೇ ಬಜೆಟ್‌ ಮಂಡನೆಗೆ ಅಡ್ಡಿಪಡಿಸುವ ಬಗ್ಗೆ ಇಂದಿನ ಬಿಜೆಪಿ ಸಭೆಯಲ್ಲಿ ಚರ್ಚೆ ನಡೆಯಲಿದೆ. ಯಾವ ರೀತಿ ಹೋರಾಟ ನಡೆಸುವುದಾಗಿ ಇಂದು ತೀರ್ಮಾನ ಕೈಗೊಳ್ಳಲಾಗುತ್ತದೆ. ಕಲಾಪಕ್ಕೂ ಮುನ್ನ ನಡೆಯುವ ಬಿಜೆಪಿ ಸಭೆಯಲ್ಲಿ ಈ ಬಗ್ಗೆ ಚರ್ಚೆ ನಡೆಯಲಿದ್ದು, ಬಿಜೆಪಿ ಶಾಸಕರಿಗೆ ಬಿಎಸ್‌ವೈ ಸೂಚನೆ ನೀಡಲಿದ್ದಾರೆ. ಇದರ ಜೊತೆಗೆ ಕೇಂದ್ರ ಬಜೆಟ್‌, ರಾಜ್ಯದ ಬಜೆಟ್‌ ಎದುರು ಮಂಕಾಗದಂತೆ ಎಚ್ಚರಿಕೆ ವಹಿಸುವ ಸವಾಲು ಬಿಜೆಪಿ ನಾಯಕರ ಮುಂದಿದೆ.

LEAVE A REPLY

Please enter your comment!
Please enter your name here