Friday, September 30, 2022
Powertv Logo
Homeರಾಜ್ಯನಾನು ಕೂಡ ಒರಿಜಿನಲ್ ಕನ್ನಡಿಗನೇ... ಕ್ಷಮಿಸಿ : ನಾರಾಯಣ ಗೌಡ

ನಾನು ಕೂಡ ಒರಿಜಿನಲ್ ಕನ್ನಡಿಗನೇ… ಕ್ಷಮಿಸಿ : ನಾರಾಯಣ ಗೌಡ

ಮಂಡ್ಯ: ಮಹಾರಾಷ್ಟ್ರಕ್ಕೆ ಜೈಕಾರ ಕೂಗಿ ವಿವಾದಕ್ಕೆ ಗುರಿಯಾಗಿದ್ದ ಬಿಜೆಪಿ ಸಚಿವ ನಾರಾಯಣ ಗೌಡ ‘ನಾನು ಕೂಡ ಒರಿಜಿನಲ್ ಕನ್ನಡಿಗನೇ, ಕ್ಷಮೆ ಇರಲಿ‘ ಎಂದು ಮಳವಳ್ಳಿಯಲ್ಲಿ ಕೇಳಿಕೊಂಡಿದ್ದಾರೆ.

ಮಹಾರಾಷ್ಟ್ರ ಜೈಕಾರ ಬಗ್ಗೆ ಸ್ಪಷ್ಟನೆ ನೀಡಿದ ಅವರು, ‘ಶಿವಾಜಿ ಜಯಂತಿ ಇದ್ದ ಕಾರಣ ಶಿವಾಜಿ ಮೇಲಿನ ಗೌರವದಿಂದ ಜೈ ಕಾರ ಕೂಗಿದ್ದೇನೆ. ಅಂದಿನ ಕಾರ್ಯಕ್ರಮದಲ್ಲಿ ಸುಮಾರು 17 ರಾಜ್ಯದ ವಿದ್ಯಾರ್ಥಿಗಳು ಬಂದಿದ್ದರು. ಅಂದೇ ಕರ್ನಾಟಕಕ್ಕೂ 16 ಬಾರಿ ಜೈಕಾರ ಕೂಗಿದ್ದೇನೆ. ಆದರೆ ಅದನ್ನು ಯಾರು ತೋರಿಸಲ್ಲ ಎಂದು ಆರೋಪಿಸಿದ್ದಾರೆ. ಒಂದು ವೇಳೆ ಮಹಾರಾಷ್ಟ್ರಕ್ಕೆ ಜೈಕಾರ ಹಾಕಿದ್ದಕ್ಕೆ  ಆ ರೀತಿ ಏನಾದ್ರೂ ನೋವಾಗಿದ್ರೆ, ದಯವಿಟ್ಟು ಕ್ಷಮಿಸಿ. ನಾನೂ ಕನ್ನಡಿಗನೇ‘ಎಂದು ಹೇಳಿದ್ದಾರೆ.

ಕರ್ನಾಟಕದ ಮಂತ್ರಿಯಾಗಿ ಮಹಾರಾಷ್ಟ್ರಕ್ಕೆ ಜೈಕಾರ ಹಾಕಿದ ಬಿಜೆಪಿ ಸಚಿವ ನಾರಾಯಣ ಗೌಡ

 

LEAVE A REPLY

Please enter your comment!
Please enter your name here

- Advertisment -

Most Popular

Recent Comments