Sunday, May 29, 2022
Powertv Logo
Homeರಾಜ್ಯಭೂತದ ಬಾಯಲ್ಲಿ ಭಗವದ್ಗೀತೆ : ಶಾಸಕ ರೇಣುಕಾಚಾರ್ಯ

ಭೂತದ ಬಾಯಲ್ಲಿ ಭಗವದ್ಗೀತೆ : ಶಾಸಕ ರೇಣುಕಾಚಾರ್ಯ

ಬೆಂಗಳೂರು: ಕಾಂಗ್ರೆಸ್ ಮುಖಂಡರಿಗೆ ಬಿಜೆಪಿ ಪಕ್ಷದ ಬಗ್ಗೆ ಮೋದಿ ಬಗ್ಗೆ ಮಾತನಾಡುವ ನೈತಿಕ ಹಕ್ಕಿಲ್ಲ ಎಂದು ಬಿಜೆಪಿ ಶಾಸಕ ರೇಣುಕಾಚಾರ್ಯ ಕಿಡಿಕಾಡಿದ್ದಾರೆ.

ನಗರದಲ್ಲಿಂದು ಮಾಧ್ಯಮದೊಂದಿಗೆ ಮಾತನಾಡಿದ ಅವರು, ಸಿದ್ದರಾಮಯ್ಯ ಹಳೆಯದನ್ನು ಮರೆತಿದ್ದಾರೆ ಅನ್ಸುತ್ತೆ , ಜೆಡಿಎಸ್​ನಲ್ಲಿ ಇದ್ದಾಗ ಸೋನಿಯ ಗಾಂಧಿ, ಕಾಂಗ್ರೆಸ್ ಗೆ ಬಳಸಿದ ಭಾಷೆಯ ಬಗ್ಗೆ ದಾಖಲೆ ಇದೆ. ಕಾಂಗ್ರೆಸ್ ಕಿತ್ತೊಗೆಯಬೇಕು ಎಂದು ಇತ್ತೀಚೆಗೆ ನೀಡಿದ್ದ ಹೇಳಿಕೆ ಬಗ್ಗೆ ವಿಡಿಯೋ ದಾಖಲೆ ಇದೆ. ಎಲ್ಲೋ ಒಂದು ಕಡೆ ಸಿದ್ದರಾಮಯ್ಯ, ಡಿಕೆಶಿ ಮೋದಿಯವರನ್ನು ಟಾರ್ಗೆಟ್ ಮಾಡಿದ್ರೆ ನಾವು ಅಧಿಕಾರಕ್ಕೆ ಬರಬಹುದು ಎಂಬ ಭ್ರಮಾಲೋಕದಲ್ಲಿ ಇದ್ದಾರೆ ಎಂದರು.

ಮೋದಿ ಒಬ್ಬ ದೈವಿ ಪುರುಷ. ಭ್ರಷ್ಟಾಚಾರಕ್ಕೆ ಮತ್ತೊಂದು ಹೆಸರು ಕಾಂಗ್ರೆಸ್, ನ್ಯಾಷನಲ್ ಹೆರಾಲ್ಡ್, ಕಲ್ಲಿದ್ದಲು ವಿಚಾರ ಹೀಗೆ ಅನೇಕ ಬ್ರಹ್ಮಾಂಡ ಭ್ರಷ್ಟಾಚಾರ ಮಾಡಿದ್ರು. ಎರಡು ಬಾರಿ ಜನ ನಿಮ್ಮನ್ನು ಎಲ್ಲಿ ಇಟ್ಟಿದ್ದಾರೆ ನೋಡಿ. ಮೋದಿಯವರನ್ನು ವಿಶ್ವವೇ ಮೆಚ್ಚಿದೆ ಇವರ ಬಗ್ಗೆ ಮಾತಾಡ್ತಿರಲಾ ನಿಮಗೆ ಯಾವ ನೈತಿಕ ಹಕ್ಕು ಇದೆ ? ಎಂದು ಪ್ರಶ್ನೆ ಮಾಡಿದರು.

ನೀವು ಭ್ರಷ್ಟಾಚಾರದ ಪಿತಾಮಹ 40 ಪರ್ಸೆಂಟ್ ಅಂತಿರಲಾ ನೀವು ಸರ್ಕಾರದಲ್ಲಿ ಇದ್ದಾಗ ಏನಾಯ್ತು ?  ಗುತ್ತಿಗೆದಾರರನ್ನು ನಮ್ಮ ಪಕ್ಷದ ಮೇಲೆ ಎತ್ತಿ ಕಟ್ಟುತ್ತಿದ್ದೀರಾ ? ಸಂತೋಷ್ ಸಾವಿನ ಸತ್ಯ ತನಿಖೆಯಿಂದ ಹೊರ ಬರುತ್ತದೆ.  ಡ್ರಾಫ್ಟ್ ರೆಡಿಯಾದಿದೆ ಎಂದರು.

ಕಾಂಗ್ರೆಸ್ ಮುಖಂಡರ ಮನೆಯಲ್ಲಿ ಮಠಾಧೀಶರ ಬಗ್ಗೆ ಅಪಾರ ಗೌರವ ಇದೆ.  ದಿಂಗಾಲೇಶ್ವರ ಶ್ರೀಗಳಿಗೆ ತಲೆ ಸರಿ ಇಲ್ಲ.  ಕಾಂಗ್ರೆಸ್ ಏಜಂಟ್ ಅಂತೆ ಹೇಳಿಕೆ ಕೊಟ್ಟಿದ್ದಾರೆ ಎಂದು ಹೇಳಿದರು. ಕಾವಿ ಹಾಕಿದ ಮೇಲೆ ಧರ್ಮದ ಬೋಧನೆ ಮಾಡಬೇಕು. ಮಾನವ ಧರ್ಮಕ್ಕೆ ಜಯವಾಗಬೇಕು. ದಿಂಗಾಲೇಶ್ವರ ಸ್ವಾಮೀಜಿ ಹೇಳಿಕೆಯನ್ನ ಅನೇಕ ಸ್ವಾಮೀಜಿಗಳು ಖಂಡಿಸಿದ್ದಾರೆ. ಇಂಥ ವಿಚಾರ ಇದ್ದರೆ ಸಿಎಂ ಜೊತೆ ಚರ್ಚೆ ಮಾಡಬೇಕಿತ್ತು. ಹಿಂಗೆ ಮಾತಾಡೋವ್ರು ಕಾಂಗ್ರೆಸ್ ಪಾರ್ಟಿ ಸೇರಿಕೊಳ್ಳಿ ಎಂದು ಹೇಳಿದರು.

ಕೆಲವು ಗುತ್ತಿಗೆದಾರರು ಕಾಂಗ್ರೆಸ್ ಹೇಳಿದಂತೆ ಕೇಳ್ತಾ ಇದ್ದಾರೆ. 40 ಪರ್ಸೆಂಟ್ ಅಂತ ಡ್ರಾಫ್ಟ್ ಹಾಕಿಸಿದ್ದಾರೆ. ಭೂತದ ಬಾಯಲ್ಲಿ ಭಗವದ್ಗೀತೆ ಹೇಳಿದಂತಾಯ್ತು. ಭ್ರಷ್ಟಾಚಾರ ಹುಟ್ಟಿದ್ದೇ ಕಾಂಗ್ರೆಸ್ ಅವರಿಂದ ದಾಖಲೆ ಇದ್ದರೆ ಕೆಂಪಣ್ಣ ಬಿಡುಗಡೆ ಮಾಡಲಿ ಹಾವು ಬಿಡ್ತೀವಿ ಹಾವು ಬಿಡ್ತೀವಿ ಅಂದ್ರೆ ಹೇಗೆ ನಮ್ಮ ಸರ್ಕಾರಕ್ಕೆ ಯಾರನ್ನು ಕೇಳಿ ತನಿಖೆ ಮಾಡಬೇಕು ಅನ್ನೋದು ಗೊತ್ತು. ಲೋಕಸಭೆಯಲ್ಲಿ ನಿಮಗೆ ಅಡ್ರೆಸ್ ಇದ್ಯಾ ನಿಮಗೆ ಯತ್ನಾಳ್ ಅವರು ಯಾವ ಅರ್ಥದಲ್ಲಿ ಹೇಳ್ತಾ ಇದ್ದಾರೋ ಗೊತ್ತಿಲ್ಲ. ನಾನು ನಮ್ಮ ಕ್ಷೇತ್ರದ ವಿಚಾರವಾಗಿ ದೆಹಲಿಗೆ ಹೋಗಿದ್ದೆ. ನಾನು ಸಚಿವ ಆಕಾಂಕ್ಷಿಯಲ್ಲ ಪಕ್ಷ ಏನು ತೀರಾನ ಮಾಡುತ್ತೋ ಅದಕ್ಕೆ ಬದ್ದ ಸಚಿವ ಸ್ಥಾನ ಬೇಡ ಎಂದು ರೇಣುಕಾಚಾರ್ಯ ಹೇಳಿದರು.

- Advertisment -

Most Popular

Recent Comments