Home ರಾಜ್ಯ ಇನ್ನು ಆರು ತಿಂಗಳಲ್ಲಿ ರಾಜ್ಯ ಬಿಜೆಪಿ ಸರ್ಕಾರ ಪತನ : ಬೇಳೂರು ಗೋಪಾಲಕೃಷ್ಣ ಭವಿಷ್ಯ !

ಇನ್ನು ಆರು ತಿಂಗಳಲ್ಲಿ ರಾಜ್ಯ ಬಿಜೆಪಿ ಸರ್ಕಾರ ಪತನ : ಬೇಳೂರು ಗೋಪಾಲಕೃಷ್ಣ ಭವಿಷ್ಯ !

ಶಿವಮೊಗ್ಗ : ರಾಜ್ಯದಲ್ಲಿ ಅಧಿಕಾರ ಇನ್ನಾರು ತಿಂಗಳಲ್ಲಿ ಅಲ್ಲೋಲ ಕಲ್ಲೋಲವಾಗಲಿದೆ ಅಂತಾ ಮಾಜಿ ಶಾಸಕ ಬೇಳೂರು ಗೋಪಾಲಕೃಷ್ಣ ಹೇಳಿದ್ದಾರೆ. ಇಂದು ತಮ್ಮನ್ನು ಭೇಟಿ ಮಾಡಿದ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇದೇ ವೇಳೆ, ವಿಶ್ವನಾಥ್ ವಿರುದ್ಧ ಏಕವಚನದಲ್ಲಿಯೇ ಸಂಭೋಧಿಸಿ, ವಾಗ್ದಾಳಿ ನಡೆಸಿದ್ದಾರೆ. ಆತನಿಗೆ ಬಿಜೆಪಿಯವರು ತಕ್ಕಪಾಠ ಕಲಿಸಿದ್ದಾರೆ ಎಂದು ಬೇಳೂರು ಹೇಳಿದ್ದಾರೆ. ಬಿಜೆಪಿ ಶಾಸಕರಲ್ಲಿಯೇ, ಅಸಮಾಧಾನವಿದೆ. ಕೊರೋನಾ ಅನ್ನುವ ಕಾರಣಕ್ಕೆ, ರಾಜ್ಯಸಭೆ ಹಾಗೂ ಪರಿಷತ್ ಚುನಾವಣೆ ಆಗಲಿ ಅಂತಾ ಅವರೆಲ್ಲರೂ ಸುಮ್ಮನ್ನಿದ್ದಾರೆ. ಈ ವಿಶ್ವನಾಥ್ ಎನ್ನುವ ವ್ಯಕ್ತಿಗೆ ಬಿಜೆಪಿಯವರು ಸರಿಯಾದ ಪಾಠ ಕಲಿಸಿದ್ದಾರೆ. ನಿಜವಾಗಲೂ ವಿಶ್ವನಾಥ್ ಹಳ್ಳಿಹಕ್ಕಿ ಅಲ್ಲ ಅವನು. ಅವನು ಹಳ್ಳಿ ಹಕ್ಕಿ ಎನ್ನುವುದಕ್ಕೆ ತಕ್ಕ ಹಾಗೆ ಇಲ್ಲ. ವಿಶ್ವನಾಥ್ ಗೆ ತಕ್ಕ ಶಿಕ್ಷೆಯಾಗಿದೆ. ಈ ಹಿಂದೆ, ಇದೇ ವಿಶ್ವನಾಥ್ ಎಲ್ಲಾ ಕಳೆದುಕೊಂಡಿದ್ದ. ಆತನಿಗೆ ಏನು ಇರಲಿಲ್ಲ. ಆಗ ಅಂತಹ ವ್ಯಕ್ತಿಯನ್ನು ಜೆಡಿಎಸ್ ವರಿಷ್ಠ ದೇವೇಗೌಡರು ಟಿಕೇಟ್ ಕೊಟ್ಟು ಗೆಲ್ಲಿಸಿದ್ರು. ಆದ್ರೆ ವಿಶ್ವನಾಥ್ ಗೆದ್ದ ನಂತರ ರಾಜೀನಾಮೆ ಕೊಟ್ಟು ಬಿಜೆಪಿಗೆ ಹೋದ್ರು. ಯಡಿಯೂರಪ್ಪನವರು ಕೂತಿರುವ ಖುರ್ಚಿ ಮುಳ್ಳಿನ ಖುರ್ಚಿಯಾಗಿದ್ದು, ಅವರು ಇನ್ನಾರು ತಿಂಗಳ ನಂತರ, ಖಂಡಿತ ಸಿಎಂ ಖುರ್ಚಿಯಲ್ಲಿ ಕೂರುವ ಪರಿಸ್ಥಿತಿಯಲ್ಲಿ ಇಲ್ಲ ಅಂತಾ ಬೇಳೂರು ಭವಿಷ್ಯ ನುಡಿದಿದ್ದಾರೆ. ಭವಿಷ್ಯ ಹೇಳೋದಕ್ಕೆ ನಾನು ಕೋಡಿಮಠ ಸ್ವಾಮೀಜಿ ಅಲ್ಲ. ಆದರೆ, ಈಗಾಗಲೇ, ಅವರು ಭವಿಷ್ಯ ಹೇಳಬೇಕಿತ್ತು. ಆದರೆ, ಅವರಿಗೂ ಹೇಳೋದಕ್ಕೆ ಯಾಕೋ ಆಸಕ್ತಿ ಇಲ್ಲ ಅನ್ಸುತ್ತೆ ಅಂತಾ ಟೀಕೆ ಮಾಡಿದ್ದಾರೆ. ಬಹಳಷ್ಟು ಜನ ಶಾಸಕರು ತಮ್ಮ ತಮ್ಮಲ್ಲೇ ಅಸಮಾಧಾನ ಇಟ್ಟುಕೊಂಡು ಕುಳಿತಿದ್ದಾರೆ. ಅವರು ಯಾವಾಗ ವಾಪಸ್ ಬರುತ್ತಾರೋ ಗೊತ್ತಿಲ್ಲ ಎಂದಿರುವ ಬೇಳೂರು ಗೋಪಾಲಕೃಷ್ಣ, ರಾಜಕೀಯದಲ್ಲಿ ಬದಲಾವಣೆ ಆಗುವ ಸೂಚನೆ ಕಾಣುತ್ತಿದ್ದೇವೆ. ಈಗಾಗಲೇ, ಸಿ.ಎಂ. ಖುರ್ಚಿಗಾಗಿ, ಬಿಜೆಪಿಯಲ್ಲಿ ಮೂವರು ರೇಸ್ ನಲ್ಲಿದ್ದಾರೆ. ಯಡಿಯೂರಪ್ಪ ಅವರನ್ನು ನಾವು ಖಂಡಿತ ಇಳಿಸಲು ಹೋಗುವುದಿಲ್ಲ. ಅವರ ಪಕ್ಷದವರೇ ಇಳಿಸುತ್ತಾರೆ ಎಂದು ಬೇಳೂರು ಹೊಸ ಬಾಂಬ್ ಸಿಡಿಸಿದ್ದಾರೆ. ಅವರ ಮಾನಸ‌ ಪುತ್ರರೇ ಇನ್ನು ಸ್ವಲ್ಪ ದಿನದಲ್ಲಿ ಎದ್ದು ಕೂರುತ್ತಾರೆ ನೋಡ್ತಾ ಇರಿ ಎಂದಿರುವ ಬೇಳೂರು, ಯಡಿಯೂರಪ್ಪ ಅವರ ಕೈಯಲ್ಲಿ ಆಡಳಿತ ಇಲ್ಲ. ಎಲ್ಲವೂ, ವಿಜಯೇಂದ್ರ ಹಾಗೂ ಶೋಭ ಕರಂದ್ಲಾಜೆ ಕೈಯಲ್ಲಿದೆ. ಉದಾಹರಣೆಗೆ, ಉಪ್ಪಾರಪೇಟೆ ಠಾಣೆಯ ಇನ್ಸ್ ಪೆಕ್ಟರ್ ವರ್ಗಾವಣೆಗೆ ವಿಜಯೇಂದ್ರ 50 ಲಕ್ಷ ಪಡೆದಿದ್ದಾರೆ ಎಂದು ಬೇಳೂರು ಗಂಭೀರ ಆರೋಪ ಮಾಡಿದ್ದಾರೆ. ಈ ಎಲ್ಲಾ ಕಾರಣದಿಂದ ಜನರು ಬೇಸತ್ತು ಹೋಗಿದ್ದಾರೆ. ಹೀಗಾಗಿ ಅವರ ಅಧಿಕಾರ ಕಳೆದುಕೊಳ್ಳಲಿದ್ದಾರೆ ಎಂದು ಬೇಳೂರು ಭವಿಷ್ಯ ನುಡಿದಿದ್ದಾರೆ.

LEAVE A REPLY

Please enter your comment!
Please enter your name here

- Advertisment -

Most Popular

ಅಪಮಾನದಿಂದ ಶೋಕ್ದಾರ್ ಮುಕ್ತ.. ನೋ ಮಿಸ್ಟೇಕ್..?!

ನೈಟ್ ಸಫಾರಿಯಿಂದ ಹೊಸ ವಿವಾದದಲ್ಲಿ ಸಿಲುಕಿಕೊಂಡಿದ್ದ ಸ್ಯಾಂಡಲ್​ವುಡ್​ನ ಶೋಕ್ದಾರ್, ಟಾಕ್ ಆಫ್ ದ ಟೌನ್ ಆಗಿದ್ರು. ಆದ್ರೀಗ ಅರಣ್ಯಾಧಿಕಾರಿಗಳು ಆ ಕೇಸ್​ನ ಟ್ರೇಸ್ ಮಾಡಿದ್ದಾರೆ. ಅವಮಾನ ಹಾಗೂ ಅಪಮಾನಗಳಿಂದ ಬಜಾರ್ ಹುಡ್ಗನಿಗೆ ಮುಕ್ತಿ...

ಡಿಕೆಶಿ ಗೂಂಡಾ ರಾಜಕಾರಣ ನಡೆಯುವುದಿಲ್ಲ : ಶೋಭಾ ಕರಂದ್ಲಾಜೆ

ಮೈಸೂರು :  ಶಿರಾ, ಆರ್ ಆರ್​ ನಗರ ವಿಧನಾಸಭಾ ಉಪ ಚುನಾವಣೆಯಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ . ಕೆ ಶಿವಕುಮಾರ್​ ಅವರ ಗೂಂಡಾ ರಾಜಕಾರಣ  ನಡೆಯುವುದಿಲ್ಲ ಅಂತ ಬಿಜೆಪಿ ಸಂಸದೆ ಶೋಭಾ ಕರಂದ್ಲಾಜೆ ...

ಕಾಡಾನೆ ದಾಳಿಗೆ ಸಕ್ರೆಬೈಲು ಬಿಡಾರದ ದೈತ್ಯ ಆನೆ `ರಂಗ’ ಸಾವು

ಶಿವಮೊಗ್ಗ :  ಕಾಡಾನೆ ದಾಳಿಯಿಂದ ಸಕ್ರೆಬೈಲು ಬಿಡಾರದ ಆನೆ ರಂಗ ಮೃತಪಟ್ಟಿದೆ. 35 ವರ್ಷದ ಆನೆ ರಂಗ ಸಕ್ರೆಬೈಲು ಬಿಡಾರದ ಪ್ರಮುಖ ಆಕರ್ಷಣೆಯಾಗಿತ್ತು. ಕಳೆದ ರಾತ್ರಿ ಬಿಡಾರಕ್ಕೆ ನುಗ್ಗಿದ ಕಾಡೆನೆಯೊಂದು ಏಕಾಏಕಿ ರಂಗನ ಮೇಲೆರಗಿದೆ....

ದೇವೇಂದ್ರ ಫಡ್ನವಿಸ್​​ಗೆ ಕೊರೋನಾ

ಮುಂಬೈ : ಮಹಾರಾಷ್ಟ್ರ ಮಾಜಿ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್​ ಅವರಿಗೆ ಕೊರೋನಾ ಸೋಂಕು ತಗುಲಿದೆ. ಫಡ್ನವೀಸ್ ಅವರು ಬಿಹಾರದ ಬಿಜೆಪಿ ಚುನಾವಣಾ ಪ್ರಚಾರ ಉಸ್ತುವಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದರು. ಇನ್ನೇನು ಕೆಲವೇ ಕೆಲವು ದಿನಗಳಲ್ಲಿ ಬಿಹಾರ ವಿಧಾನಸಭಾ...

Recent Comments