Sunday, May 29, 2022
Powertv Logo
Homeರಾಜ್ಯಮುಂದಿನ ಸಾರ್ವತ್ರಿಕ ಚುನಾವಣೆ ಮೇಲೆ ಬಿಜೆಪಿ ಕಣ್ಣು..!

ಮುಂದಿನ ಸಾರ್ವತ್ರಿಕ ಚುನಾವಣೆ ಮೇಲೆ ಬಿಜೆಪಿ ಕಣ್ಣು..!

ಹೊಸಪೇಟೆ : ಮುಂದಿನ ಸಾರ್ವತ್ರಿಕ ಚುನಾವಣೆ ಮೇಲೆ ಎಲ್ಲಾ ರಾಜಕೀಯ ಪಕ್ಷಗಳು ಕಣ್ಣಿಟ್ಟಿವೆ. ಅದರಲ್ಲೂ ಆಡಳಿತ ಪಕ್ಷ ಬಿಜೆಪಿ, ಅಧಿಕಾರ ಉಳಿಸಕೊಳ್ಳಬೇಕು ಅಂತ ಪಣ ತೊಟ್ಟಿದೆ. ಹಾಗಾಗಿ ಪಕ್ಷದ ಸಂಘಟನೆ, ಸರ್ಕಾರದ ಸಾಧನೆಗಳನ್ನು ಜನರಿಗೆ ತಲುಪಿಸಬೇಕಾದ ಅನಿವಾರ್ಯತೆಯಲ್ಲಿದೆ. ಈ ನಿಟ್ಟಿನಲ್ಲಿ ರಾಜ್ಯ ಬಿಜೆಪಿ ಕಾರ್ಯಕಾರಣಿ ಸಭೆ ಹೊಸಪೇಟೆಯಲ್ಲಿ ಆಯೋಜಿಸಿತ್ತು. ಎರಡು ದಿನಗಳ ಕಾಲ ನಡೆದ ಚಿಂತನ ಮಂಥನದಲ್ಲಿ ಬಿಜೆಪಿ ಪದಾಧಿಕಾರಿಗಳು ಮತ್ತು ಶಾಸಕರು, ಸಚಿವರು ಭಾಗವಹಿಸಿದ್ರು. ಸದ್ಯ ಪಂಚರಾಜ್ಯಗಳ ಫಲಿತಾಂಶದಿಂದ ಬಿಗುತ್ತಿರುವ ಬಿಜೆಪಿಗೆ, ರಾಜ್ಯದ ಚುನಾವಣೆ ಮಹತ್ವವಾಗಿದ್ದು, ಆಡಳಿತ ಉಳಿಸಿಕೊಳ್ಳುವ ನಿಟ್ಟಿನಲ್ಲಿ ತಂತ್ರಗಾರಿಕೆಯನ್ನು ಕಾರ್ಯಕಾರಣಿಯಲ್ಲಿ ಹೆಣೆಯಲಾಯಿತು. ಬೊಮ್ಮಾಯಿ ಸರ್ಕಾರದ ಸಾಧನೆ ಮತ್ತು ಮೋದಿ ಸರ್ಕಾರದ ಸಾಧನೆಗಳನ್ನು ಜನರಿಗೆ ತಲುಪಿಸುವ ನಿಟ್ಟಿನಲ್ಲಿ ಕಾರ್ಯಗತವಾಗಬೇಕು ಅಂತ ಕಾರ್ಯಕರ್ತರಿಗೆ ಟಾಸ್ಕ್ ನೀಡಲಾಯ್ತು.

ಬಿಜೆಪಿ ರಾಜ್ಯ ಕಾರ್ಯಕಾರಿಣಿಯಲ್ಲಿ ರಾಷ್ಟ್ರೀಯ ಅಧ್ಯಕ್ಷ ಜೆ. ಪಿ ನಡ್ಡಾ ಭಾಗವಹಿಸಿ ಸಮಾರೋಪ ಭಾಷಣ ಮಾಡಿದ್ರು. ಯಡಿಯೂರಪ್ಪ ಮತ್ತು ಬೊಮ್ಮಾಯಿ ನೇತೃತ್ವದ ಸರ್ಕಾರಗಳು ಉತ್ತಮ ಸಾಧನೆ ಮಾಡಿವೆ. ಎನ್‌ಇಪಿ, ಜಲಜೀವನ್ ಮಿಷನ್ ಯೋಜನೆಯ ಅನುಷ್ಠಾನ ರಾಜ್ಯದಲ್ಲಿ ಅತ್ಯುತ್ತಮವಾಗಿದೆ. ಇದರ ಜೊತೆಗೆ ಪ್ರಧಾನಿ ಮೋದಿ ಆಡಳಿತ ಇಡಿ ಪ್ರಪಂಚವೇ ತಿರುಗಿ ನೋಡುವಂತೆ ಮಾಡಿದೆ. ಬೇರೆ ದೇಶಗಳು ಭಾರತದ ಸ್ನೇಹ ಬೆಳೆಸಲು ಹಾತೊರೆಯುತ್ತಿವೆ. ಪ್ರಪಂಚದ ನಾಯಕತ್ವ ಭಾರತ ವಹಿಸಿಕೊಳ್ಳುವ ದಿನಗಳು ದೂರವಿಲ್ಲ.

ಇದೆಕ್ಕೆಲ್ಲಾ ಕಾರಣ ಮೋದಿ ಆಡಳಿತ. ಹಾಗಾಗಿ ದೇಶದಲ್ಲಿ ಕಾಂಗ್ರೆಸ್ ಮಾಡಲಾಗದ ಯೋಜನೆಯನ್ನು ಬಿಜೆಪಿ ಮಾಡಿ ತೊರಿಸಿದೆ. ಡಬಲ್ ಇಂಜಿನ್ ಸರ್ಕಾರ ಕರ್ನಾಟಕದ ಅಭಿವೃದ್ಧಿಗೆ ಸಾಕಷ್ಟು ಕೊಡುಗೆ ನೀಡಿದೆ. ಇದನ್ನು ಜನರಿಗೆ ತಲುಪಿಸುವ ಕೆಲಸ ನಿಷ್ಠೆಯಿಂದ ಮಾಡಿ. ಪಂಚ ರಾಜ್ಯಗಳ ಚುನಾವಣೆ ಫಲಿತಾಂಶದಂತೆ, ಮತ್ತೆ ರಾಜ್ಯದಲ್ಲಿ ಆಡಳಿತಕ್ಕೆ ಬರುವಂತೆ ಶ್ರಮ ಹಾಕಿ ಅಂತ ರಾಜ್ಯದ ನಾಯಕರಿಗೆ ಜೆ.ಪಿ.ನಡ್ಡಾ ಕಿವಿಮಾತು ಹೇಳಿದ್ರು.

ಬಿಜೆಪಿ ಕೋರ್‌ ಕಮಿಟಿ ಸಭೆಯಲ್ಲಿ ರಾಜ್ಯ ಬಿಜೆಪಿ ನಾಯಕರಿಗೆ ನಡ್ಡಾ ಮೂರು ಟಾಸ್ಕ್‌ ಕೊಟ್ಟಿದ್ದಾರೆ.. ಮಿಷನ್ 150 ಗುರಿ ತಲುಪುವ ಗುರಿ, ಕಷ್ಟದ ವಿಧಾನಸಭೆ ಕ್ಷೇತ್ರಗಳನ್ನು ರಿಸ್ಕ್‌ ಆಧಾರದಲ್ಲಿ ವಿಂಗಡಿಸಿಕೊಂಡು ಫೋಕಸ್‌ ಮಾಡಬೇಕು.. ಜೊತೆಗೆ, ಕಾಂಗ್ರೆಸ್‌, ಜೆಡಿಎಸ್‌ ಕೋಟೆಗಳಲ್ಲಿ ವಿಶೇಷ ಗಮನ ಹರಿಸಿ ಎಂದು ಟಾಸ್ಕ್‌ ಕೊಟ್ಟಿದ್ದಾರೆ.
ಒಟ್ಟಿನಲ್ಲಿ ಕಾರ್ಯಕಾರಣಿ ಮೂಲಕ ಬಿಜೆಪಿ ಪಕ್ಷದ ಪದಾಧಿಕಾರಿಗಳಿಗೆ ಬಲ ತುಂಬಿದ್ರೆ, ಸಮಾವೇಶದ ಮೂಲಕ ಕೇಸರಿ ಕಾರ್ಯಕರ್ತರಿಗೆ ಹುಮ್ಮಸ್ಸು ಹೆಚ್ಚಿಸಲಾಯ್ತು. ಈ ಮೂಲಕ ಮುಂದಿನ ವಿಧಾನಸಭೆ ಚುನಾವಣೆಗೆ ಬಿಜೆಪಿ ಪಕ್ಷ ಸಂಘಟನೆಗೆ ವಿಜಯನಗರ ಜಿಲ್ಲೆಯಿಂದ ಚಾಲನೆ ನೀಡಲಾಯ್ತು.

- Advertisment -

Most Popular

Recent Comments