ಲೋಕಸಭಾ ಚುನಾವಣೆ – ಬಿಜೆಪಿ ಅಭ್ಯರ್ಥಿಗಳ ಪಟ್ಟಿ ಸಿದ್ಧ..!

0
174

ಬೆಂಗಳೂರು: ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಅವರು ಲೋಕಸಭಾ ಚುನಾವಣೆ ಅಭ್ಯರ್ಥಿಗಳ ಪಟ್ಟಿಯನ್ನು ಸಿದ್ಧಗೊಳಿಸಿದ್ದಾರೆ. ಅಭ್ಯರ್ಥಿಗಳ ಪಟ್ಟಿ ಹೈಕಮಾಂಡ್ ಅಂಗಳ ತಲುಪಲಿದ್ದು ಸಂಜೆ ರಾಜ್ಯ ಬಿಜೆಪಿಯಿಂದ ಅಧಿಕೃತ ಪಟ್ಟಿ ರವಾನೆ ಮಾಡಲಾಗುತ್ತದೆ. ಸ್ವತಃ ಯಡಿಯೂರಪ್ಪ ಅವರೇ ಪಟ್ಟಿಯೊಂದಿಗೆ ದೆಹಲಿಗೆ ತೆರಳಲಿದ್ದಾರೆ. ಸುಮಲತಾ ಸ್ಪರ್ಧೆ ಬಗ್ಗೆ ಪ್ರತಿಕ್ರಿಯಿಸಿ, ಸುಮಲತಾಗೆ ಬೆಂಬಲ ನೀಡುವುದು ಹೈಕಮಾಂಡ್​ಗೆ ಬಿಟ್ಟದ್ದು. ಈ ಬಗ್ಗೆ ಬಿಜೆಪಿ ಹೈಕಮಾಂಡ್‌ಗೆ ಮನವಿ ಮಾಡಲಿದೆ. ಗೊಂದಲ‌ ಇರುವ ಕ್ಷೇತ್ರಗಳಲ್ಲಿ 2-3‌ ಹೆಸರುಗಳನ್ನು ಸೂಚಿಸಲಾಗಿದ್ದು, ಅಂತಿಮ ನಿರ್ಧಾರವನ್ನು ಹೈಕಮಾಂಡ್​ಗೆ ಬಿಟ್ಟಿದ್ದಾರೆ.

ಕ್ಷೇತ್ರ ಹಾಗೂ ಅಭ್ಯರ್ಥಿಗಳು: ಚಿಕ್ಕೋಡಿ- ರಮೇಶ್ ಕತ್ತಿ, ಪ್ರಭಾಕರ್ ಕೋರೆ, ಬೆಳಗಾವಿ- ಸುರೇಶ್ ಅಂಗಡಿ, ಬಾಗಲಕೋಟೆ-ಪಿ.ಸಿ.ಗದ್ದಿಗೌಡರ್, ವಿಜಯಪುರ- ರಮೇಶ್ ಜಿಗಜಿಣಗಿ, ಕಲಬುರಗಿ-ಉಮೇಶ್ ಜಾಧವ್, ರಾಯಚೂರು- ತಿಪ್ಪರಾಜ ಹವಾಲ್ದಾರ್, ಅಮರೇಶ್ ನಾಯಕ್, ಫಕ್ಕೀರಪ್ಪ, ಬೀದರ್- ಭಗವಂತ ಖೂಬಾ, ಕೊಪ್ಪಳ- ಕರಡಿ ಸಂಗಣ್ಣ, ಬಳ್ಳಾರಿ- ದೇವೆಂದ್ರಪ್ಪ, ವೆಂಕಟೇಶ ಪ್ರಸಾದ್, ಹಾವೇರಿ- ಶಿವಕುಮಾರ ಉದಾಸಿ, ಧಾರವಾಡ- ಪ್ರಹ್ಲಾದ್ ಜೋಶಿ, ಉತ್ತರ ಕನ್ನಡ- ಅನಂತಕುಮಾರ್ ಹೆಗಡೆ, ದಾವಣಗೆರೆ-ಸಿದ್ದೇಶ್ವರ್, ಶಿವಮೊಗ್ಗ-ಬಿ.ವೈ.ರಾಘವೇಂದ್ರ, ಹಾಸನ – ಎ.ಮಂಜು, ಉಡುಪಿ & ಚಿಕ್ಕಮಗಳೂರು- ಶೋಭಾ ಕರಂದ್ಲಾಜೆ, ದಕ್ಷಿಣ ಕನ್ನಡ- ನಳೀನ್ ಕುಮಾರ್ ಕಟೀಲ್, ಚಿತ್ರದುರ್ಗ- ಆನೇಕಲ್ ನಾರಾಯಣ ಸ್ವಾಮಿ, ಜನಾರ್ದನ್ ಸ್ವಾಮಿ, ಮಾನಪ್ಪ ವಜ್ಜಲ್, ತುಮಕೂರು- ಜಿ.ಎಸ್. ಬಸವರಾಜು, ಮಂಡ್ಯ- ಸಿದ್ದರಾಮಯ್ಯ, ಮೈಸೂರು- ಪ್ರತಾಪ್ ಸಿಂಹ, ಚಿಕ್ಕಬಳ್ಳಾಪುರ-ಬಚ್ಚೇಗೌಡ, ಚಾಮರಾಜನಗರ-ವಿ. ಶ್ರೀನಿವಾಸ್ ಪ್ರಸಾದ್, ಬೆಂಗಳೂರು ಗ್ರಾಮಾಂತರ- ಸಿ.ಪಿ.ಯೋಗೇಶ್ವರ್, ರುದ್ರೇಶ್, ಬೆಂಗಳೂರು ಉತ್ತರ-ಡಿ.ವಿ.ಸದಾನಂದಗೌಡ, ಬೆಂಗಳೂರು ಸೆಂಟ್ರಲ್- ಪಿ.ಸಿ.ಮೋಹನ್, ಬೆಂಗಳೂರು ದಕ್ಷಿಣ-ತೇಜಸ್ವಿನಿ ಅನಂತಕುಮಾರ್, ಕೋಲಾರ- ಡಿ.ಎಸ್.ವೀರಯ್ಯ, ಚಿ.ನಾ.ರಾಮು.

LEAVE A REPLY

Please enter your comment!
Please enter your name here