Home uncategorized ಬೀದಿಗೆ ಬಂತು ಬಿಜೆಪಿ ಆಂತರಿಕ ಒಳಜಗಳ

ಬೀದಿಗೆ ಬಂತು ಬಿಜೆಪಿ ಆಂತರಿಕ ಒಳಜಗಳ

ರಾಮನಗರ : ಬಿಜೆಪಿ ಜಿಲ್ಲಾಧ್ಯಕ್ಷ ಬದಲಾವಣೆ ಬೆನ್ನಲ್ಲೇ ಜಿಲ್ಲಾ ಬಿಜೆಪಿಯಲ್ಲಿನ ಆಂತರಿಕ ಕಚ್ಚಾಟ ಬೀದಿಗೆ ಬಂದಿದೆ. ಸಾಮಾಜಿಕ ಜಾಲತಾಣಗಳಲ್ಲಿ ಕೆಸರೆರೆಚಾಟ ಆರಂಭವಾಗಿದೆ.

ಚನ್ನಪಟ್ಟಣದಲ್ಲಿರುವ ನೂತನ ಜಿಲ್ಲಾಧ್ಯಕ್ಷ ಹುಲುವಾಡಿ ದೇವರಾಜು ಅವರು ಮನೆ ಎದುರು ಮಾಜಿ ಅಧ್ಯಕ್ಷ ಎಂ ರುದ್ರೇಶ್ ಬಣದ ಕಾರ್ಯಕರ್ತರು ಹಾಗೂ ದೇವರಾಜು ಅವರ ಪುತ್ರನ ಜೊತೆ ವಾಗ್ವಾದ ನಡೆಸಿದ್ದಾರೆ.

ಜಿಲ್ಲಾಧ್ಯಕ್ಷರ ನೇಮಕದ ನಂತರ ಜಿಲ್ಲೆಯ ಮುಖಂಡರು, ಕಾರ್ಯಕರ್ತರ ಗಮನಕ್ಕೆ ತರದೇ ಏಕಾಏಕಿ ಸ್ವಹಿತಾಸಕ್ತಿಯಿಂದ ಜಿಲ್ಲಾ ಮತ್ತು ತಾಲ್ಲೂಕು ಸಮಿತಿಗಳ ಪದಾಧಿಕಾರಿಗಳನ್ನು ನೇಮಕ ಮಾಡಲಾಗಿದೆ ಎಂದು ಅಸಮಾಧಾನಗೊಂಡ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ವಿಧಾನಪರಿಷತ್ ಮಾಜಿ ಸದಸ್ಯ ಅಶ್ವತ್ಥ್ ನಾರಾಯಣ್ ಗೌಡ ಅವರ ಸೂಚನೆಯಂತೆ ಏಕಪಕ್ಷೀಯವಾಗಿ ಪದಾಧಿಕಾರಿಗಳನ್ನು ನೇಮಕ ಮಾಡಲಾಗಿದೆ. ರಾಜ್ಯ ಸಮಿತಿ ಸಲಹೆ ಸೂಚನೆ, ಜಿಲ್ಲಾ ಕಾರ್ಯಕರ್ತರ ಅಭಿಪ್ರಾಯವನ್ನೂ ಪಡೆಯದೆ ತೀರ್ಮಾನ ತೆಗೆದುಕೊಂಡಿದ್ದಾರೆ.

ನಿನ್ನೆ ಮೊನ್ನೆ ಪಕ್ಷಕ್ಕೆ ಸೇರ್ಪಡೆಗೊಂಡವರನ್ನು ಪದಾಧಿಕಾರಿಗಳನ್ನಾಗಿ ನೇಮಿಸಲಾಗಿದೆ, ಇದು ಸರಿಯಲ್ಲ ಎಂದು ಕೆಲ ಕಾರ್ಯಕರ್ತರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಇದನ್ನು ಪ್ರಶ್ನಿಸಿ, ಚರ್ಚೆ ಮಾಡಲು ತೆರಳಿದ್ದ ವೇಳೆ ಅವರು ಮನೆಯಲ್ಲಿ ಇರಲಿಲ್ಲ. ಈ ವೇಳೆ ಪುತ್ರನೊಂದಿಗೆ ವಾಗ್ವಾದ ನಡೆದಿದೆ. ಪದಾಧಿಕಾರಿಗಳನ್ನು ನ್ಯಾಯ ಸಮ್ಮತವಾಗಿ ಆಯ್ಕೆ ಮಾಡಿ, ಇಲ್ಲದಿದ್ದರೆ ನಮ್ಮೆಲ್ಲರ ರಾಜೀನಾಮೆ ಸ್ವೀಕರಿಸಿ ಎಂದು ಒಂದು ಬಣದ ಬಿಜೆಪಿ ಕಾರ್ಯಕರ್ತರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಇಂದು ಜಿಲ್ಲೆಗೆ ಆಗಮಿಸಿದ್ದ ಜಿಲ್ಲಾ ಉಸ್ತುವಾರಿ ಸಚಿವರ ಬಳಿಯೂ ಈ ದೂರು ಹೋಗಿದ್ದು, ಡಿಸಿಎಂ ಅಶ್ವತ್ಥ್ ನಾರಾಯಣ್ ಅವರು ಗೊಂದಲ ಸರಿಪಡಿಸುವುದಾಗಿ ಭರವಸೆ ನೀಡಿದ್ದಾರೆ.

LEAVE A REPLY

Please enter your comment!
Please enter your name here

- Advertisment -

Most Popular

ಮುಳುಗಿದ ಶೆಟ್ಟಿಹಳ್ಳಿ ಚರ್ಚ್..!

ಹಾಸನ : ಜಿಲ್ಲೆಯ ಜೀವನದಿ ಹಾಗೂ ಕಾವೇರಿ ಕೊಳ್ಳದ ಪ್ರಮುಖ ಜಲಾಶಯಗಳಲ್ಲಿ ಒಂದಾಗಿರುವ ಹೇಮಾವತಿ ಜಲಾಶಯ, ವಾರದ ಅಂತರದಲ್ಲಿ ಸುರಿದ ಭಾರಿ ಮಳೆಯಿಂದಾಗಿ ಈ ಬಾರಿಯೂ ಭರ್ತಿ ಭಾಗ್ಯ ಕಂಡಿದೆ. ಇದರಿಂದ ಹೇಮೆಯನ್ನು...

ಚಿಕ್ಕಣ್ಣನಿಗೆ ರಾಖಿ ಕಟ್ಟಿದ ಮಲೆನಾಡಿನ ಹುಡುಗಿ

ಶಿವಮೊಗ್ಗ : ರಕ್ಷಾ ಬಂಧನದ ಹಿನ್ನೆಲೆಯಲ್ಲಿ ಹಾಸ್ಯನಟ ಚಿಕ್ಕಣ್ಣ ಅವರಿಗೆ ಯುವತಿಯೊಬ್ಬಳು ರಾಖಿ ಕಟ್ಟಿದ ಪ್ರಸಂಗ ನಡೆಯಿತು. ಎಸ್, ಶಿವಮೊಗ್ಗದ ಭದ್ರಾ ಜಲಾಶಯಕ್ಕೆ ನಟ ದರ್ಶನ್ ಜೊತೆ ಭೇಟಿ ನೀಡಿದ್ದ ಹಾಸ್ಯ ನಟ...

ತರಕಾರಿಗಳ ರೇಟು ಹೆಚ್ಚಳ:ಅನ್ನದಾತನ ಮುಖದಲ್ಲಿ ಮೂಡಿದೆ ಮಂದಹಾಸ

ಕೋಲಾರ: ಜಿಲ್ಲೆಯಲ್ಲಿ ತರಕಾರಿ ರೇಟು ಸುಧಾರಣೆಯಾಗಿದೆ. ಲಾಕ್ ಡೌನ್ ವೇಳೆಯಲ್ಲಿ ತರಕಾರಿಗಳನ್ನು ಚರಂಡಿಗೆ ಎಸೆಯಲಾಗಿತ್ತು. ಆದ್ರೆ, ಜಿಲ್ಲೆಯಲ್ಲಿ ಬೇಸಿಗೆ, ಮಳೆ ಹಾಗೂ ಟಮೊಟೋ ಬೆಳೆ ಜಾಸ್ತಿಯಾದ್ದರಿಂದ ತರಕಾರಿ ಬೆಳೆಗಳು ಕಡಿಮೆಯಾಗಿದೆ. ಇದ್ರಿಂದ ಏರಿಕೆ...

ನನಸಾಗಿದೆ ಶಂಕರ್​ನಾಗ್ ಕನಸು -ಸ್ಟೇಷನ್​ ಆಗಿದೆ ‘ಮಾಲ್ಗುಡಿ ಡೇಸ್’ ಮ್ಯೂಸಿಯಂ..!

ಶಿವಮೊಗ್ಗ: ದಿ. ಶಂಕರ್​ನಾಗ್ ಅವರ ಕಾಲ್ಪನಿಕ ಲೋಕದ ಕನಸು ಈಡೇರಿದೆ. ಹೊಲ-ಗದ್ದೆ, ಶಾಲೆ, ಹಳ್ಳಿ ಸೊಗಡಿನ ಮುಗ್ಧ ಜನರು ಹಳ್ಳಿಯಲ್ಲಿ ಹರಿಯುವ ಹೊಳೆ, ತೊರೆ ಇವೆಲ್ಲವೂ ಶಂಕರ್ ನಾಗ್ ಕಲ್ಪನೆ. ಈ ಕಲ್ಪನೆಯನ್ನಿಟ್ಟುಕೊಂಡು,...

Recent Comments