ಬೆಂಗಳೂರು: ತಲ್ವಾರ್ನಿಂದ ಕೇಕ್ ಕತ್ತರಿಸಿದ್ದಕ್ಕೆ ನಟ ದುನಿಯಾ ವಿಜಯ್ ಕ್ಷಮೆಯಾಚಿಸಿದ್ದಾರೆ.
ವಿವಾದದ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, “ರಾತ್ರಿ ಕೇಕ್ ಕಟ್ ಮಾಡ್ಬೇಕಾದ್ರೆ ಯಾರೋ ನನ್ನ ಕೈಗೆ ಕತ್ತಿ ಕೊಟ್ಟಿದ್ರು. ಹಾಗಾಗಿ ನಾನು ಅದರಲ್ಲಿ ಕೇಕ್ ಕಟ್ ಮಾಡಿದ್ದೇನೆ. ಯಾರೇ ಆದ್ರೂ ಈ ರೀತಿ ಮಾಡೋದು ತಪ್ಪು. ಕಾನೂನು ಎಲ್ಲರಿಗೂ ಒಂದೇ. ಆದ್ದರಿಂದ ನಾನು ಮಾಡಿರುವುದು ತಪ್ಪೇ. ಅದನ್ನು ಒಪ್ಪಿಕೊಳ್ಳುತ್ತೇನೆ ಎಂದರು. ಅಲ್ಲದೆ ಇದರಿಂದ ಯಾರೂ ಪ್ರಚೋದನೆಗೆ ಒಳಗಾಗದಂತೆ ಮನವಿ ಮಾಡಿಕೊಂಡಿದ್ದಾರೆ.
ಸ್ಯಾಂಡಲ್ವುಡ್ ‘ಸಲಗ’ಗೆ 46ನೇ ಹುಟ್ಟುಹಬ್ಬದ ಸಂಭ್ರಮ ; ಜನ್ಮದಿನದ ಜೋಶ್ನಲ್ಲಿ ವಿಜಿ ವಿವಾದ!
46ನೇ ಹುಟ್ಟುಹಬ್ಬದ ಸಂಭ್ರದಮದಲ್ಲಿರುವ ವಿಜಿ ಅಭಿಮಾನಿಗಳ ಜೊತೆ ಹುಟ್ಟುಹಬ್ಬ ಆಚರಿಸಿಕೊಂಡ್ರು. ಈ ವೇಳೆ ಕತ್ತಿಯಿಂದ ಕೇಕ್ ಕತ್ತರಿಸಿದ್ರು. ಅದು ವಿವಾದಕ್ಕೆ ಎಡೆಮಾಡಿಕೊಟ್ಟಿದ್ದು, ಗಿರಿನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸ್ಯಾಂಡಲ್ವುಡ್ ‘ಸಲಗ’ಗೆ 46ನೇ ಹುಟ್ಟುಹಬ್ಬದ ಸಂಭ್ರಮ ; ಜನ್ಮದಿನದ ಜೋಶ್ನಲ್ಲಿ ವಿಜಿ ವಿವಾದ!
ಸುದೀಪ್ ‘ಸಲಗ’ ಇದ್ದಂತೆ ಅಂದಿದ್ದೇಕೆ ದುನಿಯಾ ವಿಜಿ?