Homeದೇಶ-ವಿದೇಶಎರಡು ಮಕ್ಕಳಿಗಿಂತ ಹೆಚ್ಚು ಮಕ್ಕಳಿದ್ರೆ ಚುನಾವಣೆಯಲ್ಲಿ ಸ್ಪರ್ಧಿಸುವಂತಿಲ್ಲ..!

ಎರಡು ಮಕ್ಕಳಿಗಿಂತ ಹೆಚ್ಚು ಮಕ್ಕಳಿದ್ರೆ ಚುನಾವಣೆಯಲ್ಲಿ ಸ್ಪರ್ಧಿಸುವಂತಿಲ್ಲ..!

ಡೆಹರಾಡೂನ್ : ‘2ಕ್ಕಿಂತ ಹೆಚ್ಚು ಮಕ್ಕಳನ್ನು ಹೊಂದಿರುವವರು ಚುನಾವಣೆಯಲ್ಲಿ ಸ್ಪರ್ಧೆ ಮಾಡುವಂತಿಲ್ಲ’..! ಅಚ್ಚರಿಯಾದ್ರು ಇದು ಸತ್ಯ.. ಇಂಥಾ ಒಂದು ಮಹತ್ವದ ಮಸೂದೆ ಉತ್ತರಾಖಂಡ್​​​ ವಿಧಾನಸಭೆಯಲ್ಲಿ ಪಾಸಾಗಿದೆ.
ದೇಶದಲ್ಲಿ ಜನಸಂಖ್ಯೆ ನಿಯಂತ್ರಣಕ್ಕೆ ಅನೇಕ ಕಾರ್ಯಕ್ರಮಗಳನ್ನು ಜಾರಿಗೆ ತಂದಿದ್ದರೂ ನಿಯಂತ್ರಣ ಸಾಧ್ಯವಾಗಿಲ್ಲ. ಭಾರತದಲ್ಲಿ ಜನಸಂಖ್ಯಾ ಬೆಳವಣಿಗೆಯ ವೇಗ ನೋಡಿದ್ರೆ ಶೀಘ್ರದಲ್ಲೇ ಚೀನಾವನ್ನು ಹಿಂದಿಕ್ಕಿ ನಂಬರ್ 1 ಪಟ್ಟ ಅಲಂಕರಿಸಿದರೂ ಅಚ್ಚರಿಯಿಲ್ಲ.ಈ ನಡುವೆ ಉತ್ತರಖಾಂಡ್ ಸರ್ಕಾರ ಹೊಸ ಕಾನೂನ್ನು ಜಾರಿಗೆ ತಂದು ಜನಸಂಖ್ಯಾ ನಿಯಂತ್ರಣಕ್ಕೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಹೊಸ ಹೆಜ್ಜೆಯನ್ನಿಟ್ಟಿದೆ.
ಹೌದು, ಉತ್ತರಖಾಂಡ್​ ವಿಧಾನ ಸಭೆಯಲ್ಲಿ, 2 ಮಕ್ಕಳಿಗಿಂತ ಹೆಚ್ಚಿನ ಮಕ್ಕಳನ್ನು ಹೊಂದಿರುವವರು ಪಂಚಾಯತ್​ ಚುನಾವಣೆಗೆಗಳಿಗೆ ಸ್ಪರ್ಧೆ ಮಾಡುವಂತಿಲ್ಲ ಅನ್ನೋ ಮಸೂದೆಯನ್ನು ಪಾಸ್​ ಮಾಡಲಾಗಿದ್ದು, ಪಂಚಾಯತ್​ ರಾಜ್​ಗೆ ತಿದ್ದುಪಡಿ ತರುವ ಮೂಲಕ ಈ ಕಾನೂನನ್ನು ಜಾರಿಗೆ ತರಲು ಅನುಮೋದನೆ ಸಿಕ್ಕಿದೆ.
ಅಷ್ಟೇ ಅಲ್ಲದೆ ಕನಿಷ್ಠ ವಿದ್ಯಾರ್ಹತೆಯನ್ನು ಕೂಡ ಚುನಾವಣೆಯಲ್ಲಿ ಸ್ಪರ್ಧಿಸಲು ಮಾನದಂಡವಾಗಲಿದೆ. 10 ನೇ ತರಗತಿ (ಎಸ್​​​ಸಿ, ಎಸ್​​​​​ಟಿ ಕನಿಷ್ಠ 8ನೇ ತರಗತಿ ಪಾಸ್) ಪಾಸ್ ಆದವರು ಹಾಗೂ ಇಬ್ಬರಿಗಿಂತ ಕಡಿಮೆ ಮಕ್ಕಳನ್ನು ಹೊಂದಿರುವವರು ಮಾತ್ರ ಪಂಚಾಯತ್ ಮತ್ತು ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಸ್ಪರ್ಧಿಸಲು ಸಾಧ್ಯ.

LEAVE A REPLY

Please enter your comment!
Please enter your name here

- Advertisment -

Most Popular

Recent Comments