ಚಿಕ್ಕಬಳ್ಳಾಪುರ: ಜಿಲ್ಲೆಯ ರಾಷ್ಟ್ರೀಯ ಹೆದ್ದಾರಿ 7ರ ನಾಗಾರ್ಜುನ ಕಾಲೇಜು ಬಳಿ ಬುಲೆಟ್ಗೆ ಟಿಪ್ಪರ್ ಲಾರಿ ಡಿಕ್ಕಿ ಹೊಡೆದ ಪರಿಣಾಮ ಮದುಮಗ ಹನುಮಂತೇಗೌಡ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಮತ್ತೊಬ್ಬ ಸವಾರ ಕಿಶೋರ್ ಗಂಭೀರ ಗಾಯಗೊಂಡು ಆಸ್ಪತ್ರೆಯಲ್ಲಿ ಸಾವು ಬದುಕಿನ ನಡುವೆ ಹೋರಾಡ್ತಿದ್ದಾರೆ.
ವಿಧಿ ಎಷ್ಟು ಕ್ರೂರ ಅಂದರೆ, ಆ ಮನೆಯಲ್ಲಿ ಮದುವೆಯ ಸಂಭ್ರಮ ಮನೆ ಮಾಡಬೇಕಾಗಿತ್ತು. ಆದರೆ ಮದುವೆ ಮೂರು ದಿನ ಇರಬೇಕಾದರೇನೆ ಮದುಮಗ ಭೀಕರ ಅಪಘಾತಕ್ಕೀಡಾಗಿದ್ದಾರೆ. ಮದುವೆ ನಿಮಿತ್ತ ಇನ್ವಿಟೇಷನ್ ಕಾರ್ಡ್ಗಳನ್ನು ಬಂಧು ಬಳಗ, ಆಪ್ತೇಷ್ಟರಿಗೆ ಕೊಡಲು ಚಿಕ್ಕಬಳ್ಳಾಪುರ ಕಡೆ ಹೋಗಿ ಮರಳಿ ತಮ್ಮೂರು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಸೋಮತನಹಳ್ಳಿಗೆ ತನ್ನ ಸ್ನೇಹಿತ ಕಿಶೋರ್ ಜೊತೆ ಬುಲೆಟ್ ನಲ್ಲಿ ವಾಪಸ್ ಆಗಬೇಕಾದರೆ ಈ ದುರಂತವಾಗಿದೆ. ಅಪಘಾತದ ಬಳಿಕ ಟಿಪ್ಪರ್ ಸ್ಥಳದಲ್ಲೇ ಬಿಟ್ಟು ಚಾಲಕ ಪರಾಗಿಯಾಗಿದ್ದಾನೆ. ಘಟನೆಗೆ ಸಂಬಂಧ ಚಿಕ್ಕಬಳ್ಳಾಪುರ ತಾಲ್ಲೂಕು ನಂದಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
-ಮಲ್ಲಪ್ಪ. ಎಂ.ಶ್ರೀರಾಮ್