Home ಸಿನಿ ಪವರ್ 'ಪವರ್​' Exclusive : ಇಲ್ಲಿದೆ ಬಿಗ್​ಬಾಸ್ ಸ್ಪರ್ಧಿಗಳ ಪಕ್ಕಾ ಪಟ್ಟಿ..!

‘ಪವರ್​’ Exclusive : ಇಲ್ಲಿದೆ ಬಿಗ್​ಬಾಸ್ ಸ್ಪರ್ಧಿಗಳ ಪಕ್ಕಾ ಪಟ್ಟಿ..!

ಜನಪ್ರಿಯ ರಿಯಾಲಿಟಿ ಶೋ ಬಿಗ್​ಬಾಸ್ ಸೀಸನ್ 7ಗೆ ಕ್ಷಣಗಣನೆ ಶುರುವಾಗಿದೆ. ಇಂದು ಯಾರೆಲ್ಲಾ ‘ದೊಡ್ಮನೆ’ ಪ್ರವೇಶಿಸ್ತಾರೆ ಅನ್ನೋ ಕುತೂಹಲಕ್ಕೆ ಇಲ್ಲಿದೆ ಉತ್ತರ. ಈ ಬಾರಿ ಸೆಲೆಬ್ರಿಟಿಗಳ ದಂಡೇ ಬಿಗ್​ಬಾಸ್ ಮನೆಗೆ ಹೋಗಲಿದ್ದು, ಇಲ್ಲಿದೆ ಸ್ಪರ್ಧಿಗಳ ಪಕ್ಕಾ ಪಟ್ಟಿ.

ನಟ, ನಿರೂಪಕ ರಾಹುಲ್ : ಜಿಗರ್​ಥಂಡಾ ಸಿನಿಮಾ ನಾಯಕ ನಟ, ನಿರೂಪಕ ರಾಹುಲ್ ಈ ಬಾರಿ ಬಿಗ್​ಬಾಸ್ ಮನೆ ಪ್ರವೇಶಿಸುತ್ತಿದ್ದಾರೆ. ಕಿಚ್ಚ ಸುದೀಪ್ ಆಪ್ತ ಬಳಗದಲ್ಲಿ ಗುರ್ತಿಸಿಕೊಂಡಿರುವ ರಾಹುಲ್ ಹೊಸ ಪ್ರಯೋಗದ ಚಿತ್ರಗಳಿಗೆ ತುಡಿಯುವ ಯುವನಟ. ದೊಡ್ಡ ದೊಡ್ಡ ಶೋಗಳ ವಿಶಿಷ್ಟ, ವಿಭಿನ್ನ ನಿರೂಪಣೆ ಮೂಲಕ ಕೂಡ ಗಮನಸೆಳೆದಿದ್ದಾರೆ. ಇವರು ಈ ಬಾರಿ ಬಿಗ್ ಬಾಸ್ ಮನೆ ಪ್ರವೇಶಿಸುವುದು ಪಕ್ಕಾ.

ವಾಸಕಿ ವೈಭವ್ : ಸಂಗೀತ ನಿರ್ದೇಶಕ ವಾಸುಕಿ ವೈಭವ್ ಈ ಬಾರಿ ದೊಡ್ಮನೆ ಪ್ರವೇಶಿಸಲಿದ್ದಾರೆ. ‘ರಾಮ ರಾಮಾ ರೇ’ ಚಿತ್ರ ಖ್ಯಾತಿಯ ವಾಸುಕಿ ವೈಭವ್​ ಬಿಗ್​​ಬಾಸ್ ಮನೆಗೆ ಹೋಗೋದ್ರಿಂದ ಸಂಗೀತ ರಸದೌತಣ ಫಿಕ್ಸ್.

ಚೈತ್ರಾ ವಾಸುದೇವ್​ : ಕಿರುತೆರೆ ನಿರೂಪಕಿ ಚೈತ್ರಾ ವಾಸುದೇವ್​ ಈ ಬಾರಿ ಬಿಗ್​ಬಾಸ್​ ಮನೆ ಪ್ರವೇಶಿಸುವ ಮತ್ತೋರ್ವ ಸ್ಪರ್ಧಿ. ಕಿರುತೆರೆಯಲ್ಲಿ ಸಾಕಷ್ಟು ಕಾರ್ಯಕ್ರಮಗಳ ನಿರೂಪಣೆ ಮಾಡಿರುವ ಇವರು ಕಿರಿತೆರೆ ವೀಕ್ಷಕರ ಮನೆಮಗಳು. ತಮ್ಮದೇಯಾದ ವಿಶಿಷ್ಟ ಶೈಲಿಯ, ಎಲ್ಲರಿಗೂ ಇಷ್ಟವಾಗುವ ರೀತಿ ನಿರೂಪಣೆ ಮಾಡುವ ಚೈತ್ರಾ ಈ ಸಲ ದೊಡ್ಮನೆಗೆ ಎಂಟ್ರಿ ಕೊಡುವ ಬೆಡಗಿ.

ನಟ ಶೈನ್ : ಕಿರುತೆರೆ ನಟ ಶೈನ್ ಕೂಡ ಈ ಬಾರಿ ಬಿಗ್​ಬಾಸ್ ಮನೆಗೆ ಹೋಗುವ ಮತ್ತೊಬ್ಬ ಸ್ಪರ್ಧಿ. ಕಿರುತೆರೆ ಮೂಲಕ ‘ಶೈನ್’ ಆಗಿರುವ ನಟ ಬಿಗ್​ಬಾಸ್ ಮನೆಯಲ್ಲೂ ಶೈನ್ ಆಗ್ತಾರಾ ಕಾದು ನೋಡ್ಬೇಕು.

ನಟ ಪಂಕಜ್ : ಜನಪ್ರಿಯ ನಟ, ನಿರ್ಮಾಪಕ, ನಿರ್ದೇಶಕ ಎಸ್​ ನಾರಾಯಣ್ ಅವರ ಪುತ್ರ ಪಂಕಜ್ ಬಿಗ್​ಬಾಸ್​ 7ನ ಮತ್ತೊಬ್ಬ ಸ್ಪರ್ಧಿ. ಪಂಕಜ್​ ಚೆಲುವಿನ ಚಿಲಿಪಿಲಿ, ಚೈತ್ರದ ಸಂಭ್ರಮ ಚಿತ್ರಗಳಲ್ಲಿ ನಾಯಕ ನಟನಾಗಿ ಅಭಿನಯಿಸಿದ್ದಾರೆ. ಚಾಲೆಂಜಿಗ್ ಸ್ಟಾರ್ ದರ್ಶನ್ ಅಭಿನಯದ ಬಹುನಿರೀಕ್ಷಿತ ‘ಒಡೆಯ’ ಚಿತ್ರದಲ್ಲೂ ನಟಿಸಿದ್ದಾರೆ.

ನಟಿ ಸುಜಾತಾ : ಕಿರುತೆರೆ ನಟಿ ಸುಜಾತಾ ಈ ಬಾರಿ ದೊಡ್ಮನೆಗೆ ಎಂಟ್ರಿ ಕೊಡ್ತಿರೋ ಮತ್ತೊಬ್ಬ ಸ್ಪರ್ಧಿ. ರಾಧಾ ರಮಣ ಧಾರವಾಹಿ ಮೂಲಕ ಸಿತಾರಾ ಎಂದೇ ಮನೆಮಾತಾಗಿದ್ದಾರೆ. ಸೀರಿಯಲ್​ನಲ್ಲಿ ನೆಗಿಟೀವ್ ಶೇಡ್​ನಲ್ಲಿ ಮಿಂಚಿರುವ ಇವರು ಈ ಬಾರಿ ಬಿಗ್​ಬಾಸ್​ ಪ್ರವೇಶಿಸುವವರ ಪಟ್ಟಿಯಲ್ಲಿ ಫ್ರಂಟ್​ಲೈನ್​ನಲ್ಲಿದ್ದಾರೆ.

ದುನಿಯಾ ರಶ್ಮಿ : ಬಿಗ್​ಬಾಸ್​​ ಮನೆಗೆ ಪ್ರವೇಶಿಸುವವರ ಪಟ್ಟಿಯಲ್ಲಿ ದುನಿಯಾ ರಶ್ಮಿ ಕೂಡ ಒಬ್ಬರು. ಮೊದಲ ಸಿನಿನಾ ದುನಿಯಾ ಮೂಲಕವೇ ಫೇಮಸ್​ ಆದವರು. ಸಿನಿಮಾದ ಹೆಸರು ಇವರ ಹೆಸರಿನೊಂದಿಗೆ ಸೇರಿಬಿಟ್ಟಿದೆ. ಈ ಬಾರಿ ಇವರು ಬಿಗ್​ಬಾಸ್​ಗೆ ಹೋಗುವುದು ಪಕ್ಕಾ.

ದೀಪಿಕಾ ದಾಸ್ : ನಾಗಿಣಿ ಧಾರವಾಹಿ ಖ್ಯಾತಿಯ ನಟಿ ದೀಪಿಕಾ ದಾಸ್ ಕೂಡ ಈ ಬಾರಿ ಬಿಗ್​ಬಾಸ್​ ಮನೆಗೆ ಎಂಟ್ರಿಕೊಡ್ತಿದ್ದಾರೆ. ಕಿರುತೆರೆಯಲ್ಲಿ ಕಮಾಲ್ ಮಾಡಿರುವ ದೀಪಿಕಾ ಬಿಗ್​ಬಾಸ್​​ನಲ್ಲಿ ಯಾವ ರೀತಿ ಮೋಡಿ ಮಾಡ್ತಾರೆ ನೋಡ್ಬೇಕು.

ರಾಜು ತಾಳಿಕೋಟಿ : ನಾಡಿನ ಜನರನ್ನು ಹೊಟ್ಟೆ ಹುಣ್ಣಾಗುವಷ್ಟು ನಗಿಸಿರುವ , ನಗಿಸುತ್ತಿರುವ ‘ಕಾಮಿಡಿ ಕಿಲಾಡಿ’ ರಾಜು ತಾಳಿಕೋಟಿ ಈ ಬಾರಿ ಬಿಗ್​ಬಾಸ್​ ಪ್ರವೇಶಿಸಲಿರುವ ಮತ್ತೊಬ್ಬ ಸ್ಪರ್ಧಿ. ಹಾಸ್ಯನಟ ರಾಜು ಎಂಟ್ರಿ ಬಿಗ್​ಬಾಸ್​ನ ಮಜಾ ಹೆಚ್ಚಿಸೋದಂತೂ ಗ್ಯಾರೆಂಟಿ.

ಹಿರಿಯ ನಟ ಜೈ ಜಗದೀಶ್ : ಸ್ಯಾಂಡಲ್​ವುಡ್​ನ ಜನಪ್ರಿಯ ನಟ ಜೈ ಜಗದೀಶ್​ ಈ ಬಾರಿ ದೊಡ್ಮನೆಯ ಯಜಮಾನ! ಕಿರಿ ಕಲಾವಿದರೊಂದಿಗೆ ಹಿರಿಯ ನಟ ಜಗದೀಶ್ ಬಿಗ್​ಬಾಸ್​ಗೆ ಹೋಗುತ್ತಿದ್ದಾರೆ. ಕಳೆದ ಮೂರು ದಶಕಗಳಿಂದ ಚಂದನವನದಲ್ಲಿ ಮಿಂಚಿರುವ ಜೈ ಜಗದೀಶ್ ಬಿಗ್​ಬಾಸ್​ನಲ್ಲಿ ಯಾವ ರೀತಿಯ ಕಮಾಲ್ ಮಾಡ್ತಾರೆ ಅನ್ನೋದನ್ನು ಕಾದುನೋಡಬೇಕು.

ಕುರಿ ಪ್ರತಾಪ್ : ಕಾಮಿಡಿ ಕಿಂಗ್, ‘ಕುರಿ’ ಅನ್ನೋ ರಿಯಾಲಿಟಿ ಶೋ ಮೂಲಕವೇ ಫೇಮಸ್ಸಾದ ಕಲಾವಿದ ಪ್ರತಾಪ್ ಅಲಿಯಾಸ್ ಕುರಿ ಪ್ರತಾಪ್ ಈ ಬಾರಿ ಬಿಗ್​ಬಾಸ್ ಮನೆ ಪ್ರವೇಶಿಸುತ್ತಿರುವ ಮತ್ತೊಬ್ಬ ಸ್ಟಾರ್. ಪ್ರತಾಪ್ ದೊಡ್ಮನೆಯಲ್ಲಿದ್ದರೆ ಪಕ್ಕಾ ನಕ್ಕು ನಕ್ಕು ಸುಸ್ತಾಗ್ತೀರಾ ಬಿಡಿ.

ರವಿ ಬೆಳಗೆರೆ : ಬರವಣಿಗಯಿಂದಲೇ ಬೃಹತ್ ಓದುಗ ಸಾಮ್ರಾಜ್ಯವನ್ನು ಕಟ್ಟಿರುವ ಸೆಲೆಬ್ರಿಟಿ ಪತ್ರಕರ್ತ ರವಿಬೆಳಗೆರೆ ಈ ಬಾರಿ ಬಿಗ್​​ಬಾಸ್​ಗೆ ಹೋಗ್ತಿದ್ದಾರೆ. ಜನಪ್ರಿಯ ಪತ್ರಕರ್ತ ಬೆಳಗೆರೆ ಕಿರಿತೆರೆಯಲ್ಲೂ ಫೇಮಸ್. ಸಿನಿಮಾ ರಂಗದಲ್ಲೂ ಗುರುತಿಸಿಕೊಂಡಿದ್ದಾರೆ. ಇದೀಗ ಬಿಗ್​​ಬಾಸ್​ಗೆ ಹೋಗುತ್ತಿರುವುದು ಭಾರಿ ಕುತೂಹಲ.

LEAVE A REPLY

Please enter your comment!
Please enter your name here

- Advertisment -

Most Popular

5 ವರ್ಷದ ಬಾಲಕಿ ಕಾಣೆ

ಬೆಂಗಳೂರು : ನಗರದ ಮೆಜೆಸ್ಟಿಕ್ ಬಸ್ ನಿಲ್ದಾಣದಲ್ಲಿ 5 ವರ್ಷದ ಬಾಲಕಿ ಕಾಣೆಯಾಗಿದ್ದಾಳೆ. ಲೋಕಿತ ಕೆ.ಮರನ್ ಕಾಣೆಯಾಗಿರುವ ಬಾಲಕಿ‌. ಈಕೆ ತನ್ನ ತಾತನ ಜೊತೆ ಸೆ.18 ರಂದು ಮನೆಯಿಂದ ತೆರಳಿದ್ದಳು. ಮೆಜೆಸ್ಟಿಕ್ ನಿಲ್ದಾಣದಲ್ಲಿ...

ಅಕ್ಕ ಗೌರಿ ಲಂಕೇಶ್​ರನ್ನು ನೆನೆದು ಕಣ್ಣೀರಿಟ್ಟ ಇಂದ್ರಜಿತ್ ಲಂಕೇಶ್..!

ಬೆಂಗಳೂರು : ಸ್ಯಾಂಡಲ್​​ವುಡ್​ ಡ್ರಗ್ಸ್​ ಮಾಫಿಯಾ ವಿಚಾರಕ್ಕೆ ಸಂಬಂಧಿಸಿದಂತೆ ಸೋಮವಾರ ಸಿಸಿಬಿ ವಿಚಾರಣೆ ಎದುರಿಸಿದ್ದ ನಿರ್ದೇಶಕ ಇಂದ್ರಜಿತ್ ಲಂಕೇಶ್ ಇಂದು ಮತ್ತೊಮ್ಮೆ ಸಿಸಿಬಿ ಅಧಿಕಾರಿಗಳ ಮುಂದೆ ಹಾಜರಾಗುತ್ತಿದ್ದಾರೆ.  ಇಂದು ಸಿಸಿಬಿ ವಿಚಾರಣೆಗೆ ಹೋಗುವ...

ಸ್ಯಾಂಡಲ್​​ವುಡ್​​​​​ನಲ್ಲಿ ಡ್ರಗ್​ ಮಾಫಿಯಾ : ಇಂದು ಸಿಸಿಬಿಯಿಂದ ನಟಿ ರಾಗಿಣಿ ವಿಚಾರಣೆ

ಬೆಂಗಳೂರು :  ಸ್ಯಾಂಡಲ್​​​​ವುಡ್​​ನಲ್ಲಿ ಡ್ರಗ್​​ ಮಾಫಿಯಾದ ಬಗ್ಗೆ ಬಿಸಿಬಿಸಿ ಚರ್ಚೆ ನಡೀತಾ ಇದೆ. ಚಂದನವನಕ್ಕೆ ಮಾದಕ ಜಾಲ ಹಬ್ಬಿದೆಯೇ ಅಥವಾ ಇಲ್ಲವೇ ಅನ್ನೋದು ಸದ್ಯದ ಗಾಂಧಿನಗರದ ಹಾಟ್ ಸುದ್ದಿ. ಇದಕ್ಕೆ ಸಂಬಂಧಿಸಿದಂತೆ ನಟಿ ರಾಗಿಣಿ...

ಕೊರೋನಾದಿಂದ ಮಾಜಿ ಶಾಸಕ ಅಪ್ಪಾಜಿ ಗೌಡ ನಿಧನ

ಶಿವಮೊಗ್ಗ : ಭದ್ರಾವತಿಯ ಜೆಡಿಎಸ್ ನ ಮಾಜಿ ಶಾಸಕ ಅಪ್ಪಾಜಿಗೌಡ ವಿಧಿವಶರಾಗಿದ್ದಾರೆ. ಕಳೆದ ಕೆಲ ದಿನಗಳಿಂದ ಕೊರೋನಾ ಸೋಂಕಿಗೆ ಒಳಗಾಗಿದ್ದ ಅವರು,  ಚಿಕಿತ್ಸೆ ಫಲಕಾರಿಯಾಗದೆ ನಿಧನರಾಗಿದ್ದಾರೆ. ಅಪ್ಪಾಜಿಗೌಡರಿಗೆ 69 ವರ್ಷ ವಯಸ್ಸಾಗಿತ್ತು. ಪತ್ನಿ...

Recent Comments