Home ಸಿನಿ ಪವರ್ Bigg Boss 7 : 'ದೊಡ್ಮನೆ'ಗೆ ರವಿ ಬೆಳಗೆರೆ ವಾಪಸ್..!

Bigg Boss 7 : ‘ದೊಡ್ಮನೆ’ಗೆ ರವಿ ಬೆಳಗೆರೆ ವಾಪಸ್..!

ಅನಾರೋಗ್ಯದ ಹಿನ್ನೆಲೆಯಲ್ಲಿ ಬಿಗ್​​ ಬಾಸ್​ ಮನೆಯಿಂದ ಹೊರಬಂದಿದ್ದ ಖ್ಯಾತ ಪರ್ತಕರ್ತ ರವಿ ಬೆಳಗೆರೆ ಚಿಕಿತ್ಸೆ ಪಡೆದು ವಾಪಸ್​ ‘ದೊಡ್ಮನೆ’ ಗೆ ಹೋಗಿದ್ದಾರೆ.
ಬಿಗ್​ಬಾಸ್​ ಸೀಸನ್ 7ನಲ್ಲಿ ದೊಡ್ಮನೆ ಪ್ರವೇಶಿಸಿರುವ 18 ಮಂದಿಯಲ್ಲಿ ರವಿ ಬೆಳಗೆರೆ ಪ್ರಮುಖ ಆಕರ್ಷಣೆ. ಮನೆ ಪ್ರವೇಶಕ್ಕೆ ಮುನ್ನ ಹೋಸ್ಟ್, ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಜೊತೆ ಸಖತ್​ ಆಗಿ ಮಾತಾಡಿದ್ದ ರವಿ ಬೆಳಗೆರೆ, ಬಿಗ್​ಬಾಸ್​ ಮನೆಯಲ್ಲಿ ಕಿರಿಯರಿಗೆ ಜೀವನ ಪಾಠ, ತನ್ನ ಅನುಭವದ ಪಾಠ ಮಾಡ್ತೀನಿ. ಹಾಗೆಯೇ ಯಾರಿಗೂ ಗೊತ್ತಿಲ್ಲದ ವಿಷಯವಿದೆ. ನಂಗೆ ಜ್ಯೋತಿಷ್ಯ ಹೇಳೋಕೆ ಬರುತ್ತೆ. ಬಿಗ್​​ಬಾಸ್ ಮನೆಯಲ್ಲಿ ಜ್ಯೋತಿಷ್ಯ ಹೇಳ್ತೀನಿ ಅಂದಿದ್ದರು.
ಹೀಗೆ ಖುಷಿ ಖುಷಿಯಾಗಿ ಬಿಗ್​ಬಾಸ್​​ ಮನೆಗೆ ಹೋಗಿದ್ದ ರವಿ ಬೆಳಗೆರೆ, ಅನಾರೋಗ್ಯದ ಹಿನ್ನೆಲೆಯಲ್ಲಿ ಮೊದಲ ದಿನವೇ ವಾಪಸ್ ಆಗಿದ್ದರು. ಈ ನ್ಯೂಸ್ ಬಿಗ್​ಬಾಸ್​​ ವೀಕ್ಷಕರಿಗೆ, ಬೆಳಗೆರೆ ಅಭಿಮಾನಿಗಳಿಗೆ ಬೇಸರ ತಂದಿತ್ತು. ಆದರೆ, ಈಗ ಸಿಹಿ ಸುದ್ದಿ ಬಂದಿದ್ದು, ಬೆಳಗೆರೆ ಬಿಗ್​ಬಾಸ್​ ಮನೆಗೆ ವಾಪಸ್​ ಆಗುತ್ತಿದ್ದಾರೆ.

LEAVE A REPLY

Please enter your comment!
Please enter your name here

- Advertisment -

Most Popular

5 ವರ್ಷದ ಬಾಲಕಿ ಕಾಣೆ

ಬೆಂಗಳೂರು : ನಗರದ ಮೆಜೆಸ್ಟಿಕ್ ಬಸ್ ನಿಲ್ದಾಣದಲ್ಲಿ 5 ವರ್ಷದ ಬಾಲಕಿ ಕಾಣೆಯಾಗಿದ್ದಾಳೆ. ಲೋಕಿತ ಕೆ.ಮರನ್ ಕಾಣೆಯಾಗಿರುವ ಬಾಲಕಿ‌. ಈಕೆ ತನ್ನ ತಾತನ ಜೊತೆ ಸೆ.18 ರಂದು ಮನೆಯಿಂದ ತೆರಳಿದ್ದಳು. ಮೆಜೆಸ್ಟಿಕ್ ನಿಲ್ದಾಣದಲ್ಲಿ...

ಅಕ್ಕ ಗೌರಿ ಲಂಕೇಶ್​ರನ್ನು ನೆನೆದು ಕಣ್ಣೀರಿಟ್ಟ ಇಂದ್ರಜಿತ್ ಲಂಕೇಶ್..!

ಬೆಂಗಳೂರು : ಸ್ಯಾಂಡಲ್​​ವುಡ್​ ಡ್ರಗ್ಸ್​ ಮಾಫಿಯಾ ವಿಚಾರಕ್ಕೆ ಸಂಬಂಧಿಸಿದಂತೆ ಸೋಮವಾರ ಸಿಸಿಬಿ ವಿಚಾರಣೆ ಎದುರಿಸಿದ್ದ ನಿರ್ದೇಶಕ ಇಂದ್ರಜಿತ್ ಲಂಕೇಶ್ ಇಂದು ಮತ್ತೊಮ್ಮೆ ಸಿಸಿಬಿ ಅಧಿಕಾರಿಗಳ ಮುಂದೆ ಹಾಜರಾಗುತ್ತಿದ್ದಾರೆ.  ಇಂದು ಸಿಸಿಬಿ ವಿಚಾರಣೆಗೆ ಹೋಗುವ...

ಸ್ಯಾಂಡಲ್​​ವುಡ್​​​​​ನಲ್ಲಿ ಡ್ರಗ್​ ಮಾಫಿಯಾ : ಇಂದು ಸಿಸಿಬಿಯಿಂದ ನಟಿ ರಾಗಿಣಿ ವಿಚಾರಣೆ

ಬೆಂಗಳೂರು :  ಸ್ಯಾಂಡಲ್​​​​ವುಡ್​​ನಲ್ಲಿ ಡ್ರಗ್​​ ಮಾಫಿಯಾದ ಬಗ್ಗೆ ಬಿಸಿಬಿಸಿ ಚರ್ಚೆ ನಡೀತಾ ಇದೆ. ಚಂದನವನಕ್ಕೆ ಮಾದಕ ಜಾಲ ಹಬ್ಬಿದೆಯೇ ಅಥವಾ ಇಲ್ಲವೇ ಅನ್ನೋದು ಸದ್ಯದ ಗಾಂಧಿನಗರದ ಹಾಟ್ ಸುದ್ದಿ. ಇದಕ್ಕೆ ಸಂಬಂಧಿಸಿದಂತೆ ನಟಿ ರಾಗಿಣಿ...

ಕೊರೋನಾದಿಂದ ಮಾಜಿ ಶಾಸಕ ಅಪ್ಪಾಜಿ ಗೌಡ ನಿಧನ

ಶಿವಮೊಗ್ಗ : ಭದ್ರಾವತಿಯ ಜೆಡಿಎಸ್ ನ ಮಾಜಿ ಶಾಸಕ ಅಪ್ಪಾಜಿಗೌಡ ವಿಧಿವಶರಾಗಿದ್ದಾರೆ. ಕಳೆದ ಕೆಲ ದಿನಗಳಿಂದ ಕೊರೋನಾ ಸೋಂಕಿಗೆ ಒಳಗಾಗಿದ್ದ ಅವರು,  ಚಿಕಿತ್ಸೆ ಫಲಕಾರಿಯಾಗದೆ ನಿಧನರಾಗಿದ್ದಾರೆ. ಅಪ್ಪಾಜಿಗೌಡರಿಗೆ 69 ವರ್ಷ ವಯಸ್ಸಾಗಿತ್ತು. ಪತ್ನಿ...

Recent Comments