Home ಸಿನಿ ಪವರ್ Bigg Boss 7 : ಮೊದಲ ದಿನವೇ 'ದೊಡ್ಮನೆ'ಯಿಂದ ಹೊರಬಂದ ರವಿ ಬೆಳಗೆರೆ..!

Bigg Boss 7 : ಮೊದಲ ದಿನವೇ ‘ದೊಡ್ಮನೆ’ಯಿಂದ ಹೊರಬಂದ ರವಿ ಬೆಳಗೆರೆ..!

ಕನ್ನಡ ಕಿರುತೆರೆಯ ಜನಪ್ರಿಯ ರಿಯಾಲಿಟಿ ಶೋ ಬಿಗ್​ಬಾಸ್​​ ಸೀಸನ್​ 7 ಆರಂಭವಾಗಿದೆ. ಹೋಸ್ಟ್, ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್​ 18 ಮಂದಿ ಕಂಟೆಸ್ಟೆಂಟ್​ಗಳನ್ನು ಬಿಗ್​ಬಾಸ್ ಮನೆಯೊಳಗೆ ಕಳಿಸಿಕೊಟ್ಟರು.
18 ಸ್ಪರ್ಧಿಗಳಲ್ಲಿ ಪತ್ರಕರ್ತ ರವಿಬೆಳಗೆರೆ ಪ್ರಮುಖ ಆಕರ್ಷಣೆಯಾಗಿದ್ದರು. ಅಕ್ಷರ ಬ್ರಹ್ಮ, ಖ್ಯಾತ ವಾಗ್ಮಿ, ಅದ್ಭುತ ಬರಗಾರ ರವಿ ಬೆಳಗೆರೆ ಬಿಗ್​​ ಬಾಸ್​ಗೆ ಹೋಗಿದ್ದರಿಂದ ಜನರ ನಿರೀಕ್ಷೆಯೂ ಬೆಟ್ಟದಷ್ಟಾಗಿತ್ತು. ರವಿ ಬೆಳೆಗೆರೆ ಬಿಗ್​ಬಾಸ್​ ಮನೆಯಲ್ಲಿ ಹೇಗಿರ್ತಾರೆ? ಟಾಸ್ಕ್​​ಗಳಲ್ಲಿ ಹೇಗೆ ಪಾಲ್ಗೊಳ್ಳುತ್ತಾರೆ? ಹೀಗೆ ಹತ್ತಾರು ಕುತೂಹಲಗಳು ಇದ್ದವು. ಬಿಗ್​ಬಾಸ್​ ಮನೆಯೊಳಗೆ ಹೋಗುವ ಮುನ್ನ ವೇದಿಕೆಯಲ್ಲಿ ಸುದೀಪ್​ ಜೊತೆ ಜಾಲಿ ಜಾಲಿಯಾಗಿ ಮಾತಾಡಿದ್ದ ಅವರು, ಸುದೀಪ್ ಅವರನ್ನು ಹಾಡಿಹೊಗಳಿದ್ದರು.
ಬಿಗ್​ಬಾಸ್ ಮನೆಯೊಳಗೆ ಪ್ರವೇಶಿಸುತ್ತಿದ್ದಂತೆ ಸಿಗರೇಟ್ ಕೇಳಿದ್ದರು. ಹಾಸ್ಯ ನಟ ಕುರಿಪ್ರತಾಪ್ ಜೊತೆ ಮನೆ ನೋಡುತ್ತಾ, ಕ್ಯಾಮರಾ ಮುಂದೆ, ಬಿಗ್​ ಬಾಸ್​ ನನ್ನ ಸಿಗರೇಟ್​ ಎಲ್ಲಿ? ನೀವು ಇನ್ನೂ ಕಳಿಸಿಲ್ಲ ಎಂದಿದ್ದರು ಬೆಳಗೆರೆ. ಹೀಗೆ ಸಖತ್ ಜೋಶ್​ನಲ್ಲಿ ಎಂಟ್ರಿಕೊಟ್ಟಿದ್ದ ಬೆಳಗೆರೆ ಬಿಗ್​​ಬಾಸ್​ ಮನೆಯಲ್ಲಿ ಕಮಾಲ್ ಮಾಡ್ತಾರೆ ಅಂತ ಹೇಳಲಾಗಿತ್ತು. ಆದರೆ, ರವಿ ಬೆಳಗೆರೆ ಮೊದಲ ದಿನವೇ ಮನೆಯಿಂದ ಹೊರಬಂದಿದ್ದಾರೆ.
ಅನಾರೋಗ್ಯದ ಹಿನ್ನೆಲೆಯಲ್ಲಿ ಬೆಳಗೆರೆ ‘ದೊಡ್ಮನೆ’ಯಿಂದ ವಾಪಸ್ ಆಗಿದ್ದಾರೆ. ಬಿಗ್​ಬಾಸ್​ಗೆ ಎಂಟ್ರಿ ಕೊಡೋ ಮೊದಲು ನಾಲ್ಕು ದಿನಗಳ ಕಾಲ ಆಸ್ಪತ್ರೆಯಲ್ಲಿದ್ದರು. ಐಸಿಯುನಲ್ಲಿ ಚಿಕಿತ್ಸೆಗೆ ಒಳಗಾಗಿದ್ದರು. ಅನಾರೋಗ್ಯದ ಹೊರತಾಗಿಯೂ 1 ತಿಂಗಳು ಬಿಗ್​ಬಾಸ್ ಮನೆಯಲ್ಲಿರುವ ವಿಶ್ವಾಸದಲ್ಲಿದ್ದರು. ಆದರೆ, ಚಿಕಿತ್ಸೆಗಾಗಿ ಒಂದೇ ದಿನಕ್ಕೆ ಅನಿವಾರ್ಯವಾಗಿ ಆಚೆ ಬಂದಿದ್ದಾರೆ.

LEAVE A REPLY

Please enter your comment!
Please enter your name here

- Advertisment -

Most Popular

5 ವರ್ಷದ ಬಾಲಕಿ ಕಾಣೆ

ಬೆಂಗಳೂರು : ನಗರದ ಮೆಜೆಸ್ಟಿಕ್ ಬಸ್ ನಿಲ್ದಾಣದಲ್ಲಿ 5 ವರ್ಷದ ಬಾಲಕಿ ಕಾಣೆಯಾಗಿದ್ದಾಳೆ. ಲೋಕಿತ ಕೆ.ಮರನ್ ಕಾಣೆಯಾಗಿರುವ ಬಾಲಕಿ‌. ಈಕೆ ತನ್ನ ತಾತನ ಜೊತೆ ಸೆ.18 ರಂದು ಮನೆಯಿಂದ ತೆರಳಿದ್ದಳು. ಮೆಜೆಸ್ಟಿಕ್ ನಿಲ್ದಾಣದಲ್ಲಿ...

ಅಕ್ಕ ಗೌರಿ ಲಂಕೇಶ್​ರನ್ನು ನೆನೆದು ಕಣ್ಣೀರಿಟ್ಟ ಇಂದ್ರಜಿತ್ ಲಂಕೇಶ್..!

ಬೆಂಗಳೂರು : ಸ್ಯಾಂಡಲ್​​ವುಡ್​ ಡ್ರಗ್ಸ್​ ಮಾಫಿಯಾ ವಿಚಾರಕ್ಕೆ ಸಂಬಂಧಿಸಿದಂತೆ ಸೋಮವಾರ ಸಿಸಿಬಿ ವಿಚಾರಣೆ ಎದುರಿಸಿದ್ದ ನಿರ್ದೇಶಕ ಇಂದ್ರಜಿತ್ ಲಂಕೇಶ್ ಇಂದು ಮತ್ತೊಮ್ಮೆ ಸಿಸಿಬಿ ಅಧಿಕಾರಿಗಳ ಮುಂದೆ ಹಾಜರಾಗುತ್ತಿದ್ದಾರೆ.  ಇಂದು ಸಿಸಿಬಿ ವಿಚಾರಣೆಗೆ ಹೋಗುವ...

ಸ್ಯಾಂಡಲ್​​ವುಡ್​​​​​ನಲ್ಲಿ ಡ್ರಗ್​ ಮಾಫಿಯಾ : ಇಂದು ಸಿಸಿಬಿಯಿಂದ ನಟಿ ರಾಗಿಣಿ ವಿಚಾರಣೆ

ಬೆಂಗಳೂರು :  ಸ್ಯಾಂಡಲ್​​​​ವುಡ್​​ನಲ್ಲಿ ಡ್ರಗ್​​ ಮಾಫಿಯಾದ ಬಗ್ಗೆ ಬಿಸಿಬಿಸಿ ಚರ್ಚೆ ನಡೀತಾ ಇದೆ. ಚಂದನವನಕ್ಕೆ ಮಾದಕ ಜಾಲ ಹಬ್ಬಿದೆಯೇ ಅಥವಾ ಇಲ್ಲವೇ ಅನ್ನೋದು ಸದ್ಯದ ಗಾಂಧಿನಗರದ ಹಾಟ್ ಸುದ್ದಿ. ಇದಕ್ಕೆ ಸಂಬಂಧಿಸಿದಂತೆ ನಟಿ ರಾಗಿಣಿ...

ಕೊರೋನಾದಿಂದ ಮಾಜಿ ಶಾಸಕ ಅಪ್ಪಾಜಿ ಗೌಡ ನಿಧನ

ಶಿವಮೊಗ್ಗ : ಭದ್ರಾವತಿಯ ಜೆಡಿಎಸ್ ನ ಮಾಜಿ ಶಾಸಕ ಅಪ್ಪಾಜಿಗೌಡ ವಿಧಿವಶರಾಗಿದ್ದಾರೆ. ಕಳೆದ ಕೆಲ ದಿನಗಳಿಂದ ಕೊರೋನಾ ಸೋಂಕಿಗೆ ಒಳಗಾಗಿದ್ದ ಅವರು,  ಚಿಕಿತ್ಸೆ ಫಲಕಾರಿಯಾಗದೆ ನಿಧನರಾಗಿದ್ದಾರೆ. ಅಪ್ಪಾಜಿಗೌಡರಿಗೆ 69 ವರ್ಷ ವಯಸ್ಸಾಗಿತ್ತು. ಪತ್ನಿ...

Recent Comments