Sunday, May 29, 2022
Powertv Logo
Homeರಾಜ್ಯಶಿವಮೊಗ್ಗ ಹಿಂದೂ ಕಾರ್ಯಕರ್ತ ಹರ್ಷ ಕೊಲೆಗೆ ಬಿಗ್ ಟ್ವಿಸ್ಟ್

ಶಿವಮೊಗ್ಗ ಹಿಂದೂ ಕಾರ್ಯಕರ್ತ ಹರ್ಷ ಕೊಲೆಗೆ ಬಿಗ್ ಟ್ವಿಸ್ಟ್

ಶಿವಮೊಗ್ಗ: ಹಿಂದೂ ಕಾರ್ಯಕರ್ತ ಹರ್ಷ ಕೊಲೆ ಪ್ರಕರಣ ಇಡೀ ದೇಶಾದ್ಯಂತ ಸದ್ದು ಮಾಡಿತ್ತು. ಕೋಮು ಸಂಘರ್ಷಕ್ಕೂ ಕಾರಣವಾಗಿತ್ತು. ಆ ಘಟನೆ ನಂತರ ಹಿಜಾಬ್‌, ಧರ್ಮ ಸಂಘರ್ಷದ ಮಧ್ಯೆ, ಬೂದಿ ಮುಚ್ಚಿದ ಕೆಂಡಂತಿದ್ದ ಹತ್ಯೆ ಪ್ರಕರಣಕ್ಕೆ ಟ್ವಿಸ್ಟ್‌ ಸಿಕ್ಕಿದೆ.

ಶಿವಮೊಗ್ಗದ ಹರ್ಷ ಕೊಲೆಗೆ ಪ್ರತಿಕಾರಕ್ಕೆ ಸ್ಕೆಚ್‌ ರೂಪಿಸಲಾಗಿದ್ದು, ಆ ಸಂಚನ್ನು ಪೊಲೀಸರು ಭೇದಿಸಿದ್ದಾರೆ. ಸದ್ಯ ಈ ಪ್ರಕರಣ ಸಂಬಂಧ ಕೊಲೆಗೆ ಸ್ಕೆಚ್‌ ಹಾಕಿದ್ದ 6 ಆರೋಪಿಗಳನ್ನು ಬಂಧಿಸಲಾಗಿದೆ.

ಹೌದು, ಪೊಲೀಸರು ಸ್ವಲ್ಪ ಯಾಮಾರಿದ್ರೂ ಶಿವಮೊಗ್ಗದಲ್ಲಿ ಇನ್ನೊಂದು ಕೋಮುಗಲಭೆ ಸೃಷ್ಟಿ ಫಿಕ್ಸ್‌ ಆಗಿಬಿಡುತ್ತಿತ್ತೊ ಏನೊ. ಹರ್ಷ ಕೊಲೆಗೆ ಪ್ರತೀಕಾರವಾಗಿ ಕೊಲೆಗೆ ಸಂಚು ರೂಪಿಸಿದ್ದ ಯುವಕರ ಪ್ಲ್ಯಾನ್‌ನನ್ನು ಪೊಲೀಸರು ಉಲ್ಟಾ ಮಾಡಿದ್ದಾರೆ.. ಕೊಲೆ ಸಂಚಿನ ಬಗ್ಗೆ ಪೊಲೀಸರಿಗೆ ಖಚಿತ ಮಾಹಿತಿ ಸಿಕ್ಕಿತ್ತು. ಆ ಮಾಹಿತಿ ಮೇರೆಗೆ ತಂಡ ರಚಿಸಿಕೊಂಡು ಫೀಲ್ಡಿಗಿಳಿದಿದ್ರು ಪೊಲೀಸರು.

SP ಲಕ್ಷ್ಮಿಪ್ರಸಾದ್ ನೇತೃತ್ವದಲ್ಲಿ ಕಾರ್ಯಾಚರಣೆಗಿಳಿದ ಪೊಲೀಸರು, ಸುಮಾರು 10ಕ್ಕೂ ಹೆಚ್ಚು ಆರೋಪಿಗಳನ್ನು ಬಂಧಿಸಲಾಗಿದ್ದು, ಗೌಪ್ಯ ಸ್ಥಳದಲ್ಲಿ ಆರೋಪಿಗಳನ್ನ ವಿಚಾರಣೆಗೊಳಪಡಿಸಲಾಗಿದೆ.
ಹರ್ಷ ಚಾರಿಟೆಬಲ್‌ ಟ್ರಸ್ಟ್‌ನ ಕಾರ್ಯದರ್ಶಿಯೇ ಆರೋಪಿನಾ ಅನ್ನೋ ಶಂಕೆ ವ್ಯಕ್ತವಾಗಿದೆ. ಸದ್ಯ 10 ಜನರನ್ನು ವಿಚಾರಣೆಗೆ ಒಳಪಡಿಸಲಾಗಿದೆ. ಹರ್ಷನ ಕಗ್ಗೊಲೆ ಸಮಯದಲ್ಲಿ ಪತ್ರಕರ್ತರೊಬ್ಬರ ಮೇಲೆ ಹಲ್ಲೆ ನಡೆದಿತ್ತು. ಆ ವೇಳೆ ಆರೋಪಿ ಜೇಟ್ಲಿ ಎಂಬಾತನನ್ನು ಶಿವಮೊಗ್ಗ ಪೊಲೀಸರು ಬಂಧಿಸಿ, ವಿಚಾರಣೆ ನಡೆಸಿದ್ದರು. ವಿಚಾರಣೆ ವೇಳೆ ಅನ್ಯಕೋಮಿನ ಯುವಕನ ಹತ್ಯೆ ಸಂಚಿನ ಬಗ್ಗೆ ಆತ ಮಾಹಿತಿ ಬಹಿರಂಗಪಡಿಸಿದ್ದ. ಜೇಟ್ಲಿ ನೀಡಿದ ಮಾಹಿತಿ ಮೇರೆಗೆ 13 ಜನರ ವಿರುದ್ಧ FIR ದಾಖಲಿಸಿಕೊಳ್ಳಲಾಗಿದೆ. ರಾಖಿ, ವಿಶ್ವಾಸ್, ವಾಸನೆ, ಬೆಂಗಳೂರು, ಕಟ್ಟೆ, ಕೋಟಿ, ಕುಲ್ಡಾ, ಅಪ್ಪು, ಸಚಿನ್ ಸೇರಿದಂತೆ 13 ಜನರ ವಿರುದ್ಧ ಎಫ್‌ಐಆರ್ ದಾಖಲಾಗಿದೆ. FIR ದಾಖಲಿಸಿಕೊಂಡು ಬಹುತೇಕರನ್ನು ಬಂಧಿಸಲಾಗಿದೆ.

ಒಟ್ನಲ್ಲಿ, ಮತ್ತೊಂದು ಧರ್ಮ ಸಂಘರ್ಷಕ್ಕೆ ಕಾರಣವಾಗೋದನ್ನು ತಪ್ಪಿಸಿದ್ದಾರೆ ಶಿವಮೊಗ್ಗ ಪೊಲೀಸರು. ಆದ್ರೆ, ಯಾರೇ ತಪ್ಪು ಮಾಡಿದ್ರೂ ತಪ್ಪೆ.. ಹೀಗಾಗಿ, ಹರ್ಷ ಹಂತಕರಿಗೂ ಕಠಿಣ ಶಿಕ್ಷೆಯಾಗ್ಬೇಕು. ಜೊತೆಗೆ, ಮತ್ತೊಂದು ಇಂತಹ ಘಟನೆ ನಡೆಯದಂತೆ ಎಚ್ಚರ ವಹಿಸಬೇಕಿದೆ.

- Advertisment -

Most Popular

Recent Comments