Home ರಾಜ್ಯ SSLC ರ‍್ಯಾಂಕ್ ಸ್ಟೂಡೆಂಟ್ ಗೆ ಫೇಲ್ ಸರ್ಟಿಫಿಕೇಟ್ ..!

SSLC ರ‍್ಯಾಂಕ್ ಸ್ಟೂಡೆಂಟ್ ಗೆ ಫೇಲ್ ಸರ್ಟಿಫಿಕೇಟ್ ..!

ಮಂಡ್ಯ: ಕೊರೋನಾ ನಡುವೆಯೂ ಯಶಸ್ವಿಯಾಗಿ ಪರೀಕ್ಷೆ ಮುಗಿಸಿದ ಖುಷಿಯಲ್ಲಿದ್ದ SSLC ಪರೀಕ್ಷಾ ಮಂಡಳಿಯ ಮಹಾ ಎಡವಟ್ಟು ಬಯಲಾಗಿದೆ. ವಿದ್ಯಾರ್ಥಿನಿಯ ಉತ್ತರ ಪತ್ರಿಕೆ ಅದಲು ಬದಲು ಮಾಡಿ, ರ‍್ಯಾಂಕ್ ಸ್ಟೂಡೆಂಟ್​ಗೆ ಫೇಲ್ ಸರ್ಟಿಫಿಕೇಟ್ ನೀಡಿರೋ ಆರೋಪ ಕೇಳಿ ಬಂದಿದೆ.

ಜಿಲ್ಲೆಯ ಶ್ರೀರಂಗಪಟ್ಟಣ ತಾಲ್ಲೂಕಿನ ಗೆಂಡೆ ಹೊಸಹಳ್ಳಿಯ ಜಿ.ಎಸ್. ಅಶ್ವಿನಿ ಎಂಬ ಬಾಲಕಿ ಸಮೀಪದ ಖಾಸಗಿ ಶಾಲೆಯೊಂದರಲ್ಲಿ ವ್ಯಾಸಂಗ ಮಾಡುತ್ತಿದ್ದಳು. ಶಾಲೆಯ ಶಿಕ್ಷಕರ ಅಚ್ಚುಮೆಚ್ಚಿನ ವಿದ್ಯಾರ್ಥಿನಿಯಾಗಿದ್ದ ಅಶ್ವಿನಿ, ಪ್ರತಿ ಪರೀಕ್ಷೆಯಲ್ಲೂ ಅತ್ಯುನ್ನತ ಶ್ರೇಣಿಯಲ್ಲಿ ತೇರ್ಗಡೆಯಾಗ್ತಿದ್ದಳು. ಪೂರಕ ಪರೀಕ್ಷೆಯಲ್ಲೂ ಕೂಡ 610ಕ್ಕೂ ಹೆಚ್ಚು ಅಂಕ ಗಳಿಸಿದ್ದರು. SSLC ಅಂತಿಮ ಪರೀಕ್ಷೆಯಲ್ಲಿ 600ರ ಆಸುಪಾಸಿನ ಅಂಕ ಗಳಿಸುವ ಜೊತೆಗೆ ಶಾಲೆಗೆ ಟಾಪರ್ ಆಗುವ ನಿರೀಕ್ಷೆ ಅಶ್ವಿನಿ, ಪೋಷಕರು, ಶಿಕ್ಷಕರಲ್ಲಿತ್ತು.

ಆದರೆ ಫಲಿತಾಂಶ ನೋಡಿ ಎಲ್ಲರೂ ಅಚ್ಚರಿಗೆ ಒಳಗಾಗಿದ್ದಾರೆ. ಅಶ್ವಿನಿ ಆಂಗ್ಲ ಭಾಷೆಯಲ್ಲಿ-89, ವಿಜ್ಞಾನ-51, ಗಣಿತ-48, ಹಿಂದಿ-33 ಅಂಕ ಪಡೆದು ಉತ್ತೀರ್ಣರಾಗಿದ್ದು ಸಮಾಜ ವಿಜ್ಞಾನದಲ್ಲಿ-7 ಹಾಗೂ ಕನ್ನಡದಲ್ಲಿ ಕೇವಲ 4 ಅಂಕಗಳು ಬಂದಿವೆ.

ಈ ಫಲಿತಾಂಶದ ಬಗ್ಗೆ ಅನುಮಾನಗೊಂಡ ಅಶ್ವಿನಿ ಪೋಷಕರು ಹಾಗೂ ಶಿಕ್ಷಕರು ಆಕೆಯ ಉತ್ತರ ಪತ್ರಿಕೆಯ ನಕಲು ಪಡೆದುಕೊಂಡಿದ್ದಾರೆ. ಪರೀಕ್ಷಾ ಮಂಡಳಿ ನೀಡಿರುವ ನಕಲು ಪ್ರತಿಯಲ್ಲಿ ಕೈಬರಹ ವ್ಯತ್ಯಾಸ, ಕೆಲವೊಂದು ಶೀಟ್ ಗಳು ಅದಲು, ಬದಲಾಗಿವೆ ಅಂತಾ ಆರೋಪ ಮಾಡಲಾಗುತ್ತಿದೆ. ಈ ಸಂಬಂಧ ಅಶ್ವಿನಿ ಪೋಷಕರು ಹಾಗೂ ಶಿಕ್ಷಕರು SSLC ಪರೀಕ್ಷಾ ಮಂಡಳಿಗೆ ದೂರು ನೀಡಿದ್ದು, ನ್ಯಾಯಕ್ಕಾಗಿ ಮನವಿ ಮಾಡ್ತಿದ್ದಾರೆ.

ಅಷ್ಟಕ್ಕೂ ಅಶ್ವಿನಿ ಮತ್ತು ಪೋಷಕರು ಮಾಡ್ತಿರೋ ಆರೋಪ ಸತ್ಯವೇ ಆಗಿದ್ರೆ, ಉತ್ತರ ಪತ್ರಿಕೆಗಳನ್ನ ಅದಲು ಬದಲು ಮಾಡಿದ್ದಾದರೂ ಯಾರು ಅನ್ನೋ ಪ್ರಶ್ನೆ ಕಾಡಲಾರಂಭಿಸಿದೆ. ಉತ್ತರ ಪತ್ರಿಕೆ ಅದಲು ಬದಲಾಗಿರೋದು ನಿಜವೇ ಆಗಿದ್ದರೆ ಅಶ್ವಿನಿ ಪರೀಕ್ಷೆ ಬರೆದ ಮಹದೇವಪುರದ ಆನಂದ್ ಆಳ್ವಾರ್ ಶಾಲೆಯಲ್ಲ? ಅಥವಾ ಹೊರ ಜಿಲ್ಲೆಯಲ್ಲಿ ನಡೆದ ಮೌಲ್ಯ ಮಾಪನ ಕೇಂದ್ರದಲ್ಲ? ಅನ್ನೋದು ಬಹಿರಂಗವಾಗ್ಬೇಕಿದೆ.

ಮಾಹಿತಿ ಪಡೆದ ಡಿಡಿಪಿಐ, ಬಿಇಓ : ಪ್ರಕರಣವನ್ನ SSLC ಪರೀಕ್ಷಾ ಮಂಡಳಿ ಗಂಭೀರವಾಗಿ ಪರಿಗಣಿಸಿದೆ. ಶ್ರೀರಂಗಪಟ್ಟಣ ಕ್ಷೇತ್ರ ಶಿಕ್ಷಣಾಧಿಕಾರಿ ರುಕ್ಸಾನ ಮತ್ತು ಮಂಡ್ಯ ಡಿಡಿಪಿಐ ರಘುನಂದನ್ ಪ್ರಾಥಮಿಕ ಹಂತದ ವಿಚಾರಣೆ ನಡೆಸಿದ್ದಾರೆ. ಅಶ್ವಿನಿ ಪರೀಕ್ಷೆ ಬರೆದಿದ್ದ ಮಹದೇವಪುರ ಆನಂದ್ ಆಳ್ವಾರ್ ಶಾಲೆಯ ಪರೀಕ್ಷಾ ಕರ್ತವ್ಯದಲ್ಲಿದ್ದ ಅಧಿಕಾರಿಗಳು, ಮೇಲ್ವಿಚಾರಕರು, ಶಿಕ್ಷಕರು, ಸಿಬ್ಬಂದಿಯನ್ನ ಕರೆಸಿ, ವಿವರಣೆ ಪಡೆದ್ರು.

SSLC ಪರೀಕ್ಷಾ ಮಂಡಳಿ ಮೆಟ್ಟಿಲೇರಿದ ಪ್ರಕರಣ : ಮಂಡ್ಯದಲ್ಲಿ ಪ್ರಾಥಮಿಕ ಹಂತದ ವಿಚಾರಣೆ ಬಳಿಕ ಪ್ರಕರಣವೀಗ SSLC ಪರೀಕ್ಷಾ ಮಂಡಳಿ ಮೆಟ್ಟಿಲೇರಿದೆ. ಸ್ವತಃ ಪರೀಕ್ಷಾ ಮಂಡಳಿಯ ನಿರ್ದೇಶಕರೇ ವಿದ್ಯಾರ್ಥಿನಿ ಅಶ್ವಿನಿ, ಪರೀಕ್ಷಾ ಕೇಂದ್ರದ ಅಧಿಕಾರಿಗಳು, ಸಿಬ್ಬಂದಿಯನ್ನ ಬೆಂಗಳೂರು ಕಚೇರಿಗೆ ವಿಚಾರಣೆ ನಡೆಸಿದ್ದಾರೆ. ವಿದ್ಯಾರ್ಥಿನಿ ಮಾಡ್ತಿರೋ ಆರೋಪದ ಅಸಲಿಯತ್ತು ಹಾಗೂ ಉತ್ತರ ಪತ್ರಿಕೆ ಅದಲು ಬದಲಾಗಿದ್ರೆ, ಎಲ್ಲಿ ಆಗಿದೆ ಅನ್ನೋದ್ರ ತನಿಖೆ ನಡೆಸ್ತಿದ್ದಾರೆ. ಉತ್ತರ ಪತ್ರಿಕೆಯ ಪ್ರತಿ ಪುಟಕ್ಕೂ ಬಾರ್ ಕೋಡ್ ಇದೆ. QR ಸ್ಕ್ಯಾನ್ ಮೂಲಕ ಅದರ ಅಸಲಿಯತ್ತು ಪತ್ತೆ ಮಾಡಬಹುದು. ಒಂದು ವೇಳೆ ಅದಲು ಬದಲಾಗಿದ್ರೂ, ಯಾವ ಯಾವ ವಿದ್ಯಾರ್ಥಿಗಳ ಉತ್ತರ ಪತ್ರಿಕೆಗಳನ್ನ ಅದಲು ಬದಲು ಮಾಡಲಾಗಿದೆ ಅನ್ನೋದನ್ನು ಪತ್ತೆ ಹಚ್ಚಬಹುದು ಅಂತಾರೆ ಶಿಕ್ಷಣ ಇಲಾಖೆ ಅಧಿಕಾರಿಗಳು.

ನ್ಯಾಯದ ನಿರೀಕ್ಷೆಯಲ್ಲಿ ವಿದ್ಯಾರ್ಥಿನಿ : ನನಗೆ ಅನ್ಯಾಯ ಆಗಿದೆ. ನಾನು ಬರೆದ ಉತ್ತರ ಪತ್ರಿಕೆಗಳು ಅದಲು ಬದಲಾಗಿರೋದು ಸತ್ಯ. ಈಗಲೂ ಪರೀಕ್ಷೆ ಬರೆದು ನನ್ನ ಸಾಮರ್ಥ್ಯ ಪ್ರದರ್ಶನ ಮಾಡ್ತೀನಿ. ನನಗೆ ನ್ಯಾಯ ಬೇಕು ಅಂತಾ ಪರೀಕ್ಷಾ ಮಂಡಳಿ ಮೊರೆ ಹೋಗಿದ್ದಾಳೆ ವಿದ್ಯಾರ್ಥಿ ಅಶ್ವಿನಿ. ಇನ್ನು ಅಶ್ವಿನಿಯನ್ನ ಸಮರ್ಥಿಸಿಕೊಳ್ತಿರೋ ಪೋಷಕರು, ಶಿಕ್ಷಕರು ಕೂಡ ಪರೀಕ್ಷಾ ಮಂಡಳಿಯಿಂದ ನ್ಯಾಯ ಸಿಗುವ ನಿರೀಕ್ಷೆಯಲ್ಲಿದ್ದಾರೆ. ಏನೇ ಆಗ್ಲೀ, ಕೊರೋನಾ ಸಂಕಷ್ಟದಲ್ಲೂ ಯಶಸ್ವಿಯಾಗಿ ಪರೀಕ್ಷೆ ಮುಗಿಸಿದ ಮಂಡಳಿ ಮೇಲೆ ಬಂದಿರೋ ಆರೋಪ ಏನಾಗಲಿದೆ ಅನ್ನೋದನ್ನ ಕಾದುನೋಡ್ಬೇಕಿದೆ.

-ಡಿ.ಶಶಿಕುಮಾರ್

LEAVE A REPLY

Please enter your comment!
Please enter your name here

- Advertisment -

Most Popular

5 ವರ್ಷದ ಬಾಲಕಿ ಕಾಣೆ

ಬೆಂಗಳೂರು : ನಗರದ ಮೆಜೆಸ್ಟಿಕ್ ಬಸ್ ನಿಲ್ದಾಣದಲ್ಲಿ 5 ವರ್ಷದ ಬಾಲಕಿ ಕಾಣೆಯಾಗಿದ್ದಾಳೆ. ಲೋಕಿತ ಕೆ.ಮರನ್ ಕಾಣೆಯಾಗಿರುವ ಬಾಲಕಿ‌. ಈಕೆ ತನ್ನ ತಾತನ ಜೊತೆ ಸೆ.18 ರಂದು ಮನೆಯಿಂದ ತೆರಳಿದ್ದಳು. ಮೆಜೆಸ್ಟಿಕ್ ನಿಲ್ದಾಣದಲ್ಲಿ...

ಅಕ್ಕ ಗೌರಿ ಲಂಕೇಶ್​ರನ್ನು ನೆನೆದು ಕಣ್ಣೀರಿಟ್ಟ ಇಂದ್ರಜಿತ್ ಲಂಕೇಶ್..!

ಬೆಂಗಳೂರು : ಸ್ಯಾಂಡಲ್​​ವುಡ್​ ಡ್ರಗ್ಸ್​ ಮಾಫಿಯಾ ವಿಚಾರಕ್ಕೆ ಸಂಬಂಧಿಸಿದಂತೆ ಸೋಮವಾರ ಸಿಸಿಬಿ ವಿಚಾರಣೆ ಎದುರಿಸಿದ್ದ ನಿರ್ದೇಶಕ ಇಂದ್ರಜಿತ್ ಲಂಕೇಶ್ ಇಂದು ಮತ್ತೊಮ್ಮೆ ಸಿಸಿಬಿ ಅಧಿಕಾರಿಗಳ ಮುಂದೆ ಹಾಜರಾಗುತ್ತಿದ್ದಾರೆ.  ಇಂದು ಸಿಸಿಬಿ ವಿಚಾರಣೆಗೆ ಹೋಗುವ...

ಸ್ಯಾಂಡಲ್​​ವುಡ್​​​​​ನಲ್ಲಿ ಡ್ರಗ್​ ಮಾಫಿಯಾ : ಇಂದು ಸಿಸಿಬಿಯಿಂದ ನಟಿ ರಾಗಿಣಿ ವಿಚಾರಣೆ

ಬೆಂಗಳೂರು :  ಸ್ಯಾಂಡಲ್​​​​ವುಡ್​​ನಲ್ಲಿ ಡ್ರಗ್​​ ಮಾಫಿಯಾದ ಬಗ್ಗೆ ಬಿಸಿಬಿಸಿ ಚರ್ಚೆ ನಡೀತಾ ಇದೆ. ಚಂದನವನಕ್ಕೆ ಮಾದಕ ಜಾಲ ಹಬ್ಬಿದೆಯೇ ಅಥವಾ ಇಲ್ಲವೇ ಅನ್ನೋದು ಸದ್ಯದ ಗಾಂಧಿನಗರದ ಹಾಟ್ ಸುದ್ದಿ. ಇದಕ್ಕೆ ಸಂಬಂಧಿಸಿದಂತೆ ನಟಿ ರಾಗಿಣಿ...

ಕೊರೋನಾದಿಂದ ಮಾಜಿ ಶಾಸಕ ಅಪ್ಪಾಜಿ ಗೌಡ ನಿಧನ

ಶಿವಮೊಗ್ಗ : ಭದ್ರಾವತಿಯ ಜೆಡಿಎಸ್ ನ ಮಾಜಿ ಶಾಸಕ ಅಪ್ಪಾಜಿಗೌಡ ವಿಧಿವಶರಾಗಿದ್ದಾರೆ. ಕಳೆದ ಕೆಲ ದಿನಗಳಿಂದ ಕೊರೋನಾ ಸೋಂಕಿಗೆ ಒಳಗಾಗಿದ್ದ ಅವರು,  ಚಿಕಿತ್ಸೆ ಫಲಕಾರಿಯಾಗದೆ ನಿಧನರಾಗಿದ್ದಾರೆ. ಅಪ್ಪಾಜಿಗೌಡರಿಗೆ 69 ವರ್ಷ ವಯಸ್ಸಾಗಿತ್ತು. ಪತ್ನಿ...

Recent Comments