Homeರಾಜ್ಯಬೆಂಗಳೂರು‘ಪಂಜರದ ಗಿಣಿಗೆ ಬೀಗ್ ರಿಲೀಫ್’

‘ಪಂಜರದ ಗಿಣಿಗೆ ಬೀಗ್ ರಿಲೀಫ್’

ಬೆಂಗಳೂರು: ಡ್ರಗ್ಸ್ ಕೇಸ್ ನಲ್ಲಿ ನಟಿ ರಾಗಿಣಿ ಟರೆಸ್ಟ್ ಆಗಿದ್ದರು. ಇಂದು ಪಂಜರದ ಗಿಣಿಗೆ ಬೀಗ್ ರಿಲೀಫ್ ಸಿಕ್ಕಿದೆ. ಕೊನೆಗೂ ನಟಿ ರಾಗಿಣಿಗೆ ಇಂದು ಸುಪ್ರಿಂ ಕೊರ್ಟ್ ಜಾಮೀನು ಮಂಜೂರು ಮಾಡಿದೆ. ನಟಿ ರಾಗಿಣಿ ಸೆಪ್ಟೆಂಬರ್ 4, 2020 ರಂದು ಜೈಲು ಸೇರಿದ್ದರು. 140 ದಿನಗಳ ಕಾಲ ಸೆರೆಮನೆಯಲ್ಲಿದ್ದ ರಾಗಿಣಿಗೆ ಇಂದು ಸುಪ್ರೀಂ ಅಂತ್ಯ ಹಾಡಿದೆ.

ಪರಪ್ಪನ ಅಗ್ರಹಾರದಿಂದ ತುಪ್ಪದ ಬೆಡಗಿ ಇಂದೇ ರಿಲೀಸ್ ಆಗಲಿದ್ದಾರೆ. ರಾಗಿಣಿ ಬಳಿ ಇದಿದ್ದು ಸ್ವಲ್ಪ ಪ್ರಮಾಣ ಡ್ರಗ್ಸ್. ರಾಗಿಣಿ ಡ್ರಗ್ಸ್ ವ್ಯವಹಾರ ನಡಿಸಿರೋದು ಮೇಲ್ನೋಟಕ್ಕೆ ಕಂಡುಬಂದಿದೆ ಎಂದು ಜಾಮೀನು ಮಂಜೂರು ಮಾಡುವ ವೇಳೆ ಸುಪ್ರೀಂಕೋರ್ಟ್ ನ ನ್ಯಾಯಮೂರ್ತಿ ಆರ್.ಎಫ್. ನಾರಿಮನ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ನಟಿ ರಾಗಿಣಿ ದ್ವಿವೇದಿ ಪಾರ್ಟಿಯಲ್ಲಿ ಡ್ರಗ್ಸ್ ಸೇವಿಸಿರಬಹುದು. ಆದರೆ ರಾಗಿಣಿ ಮನೆಯಲ್ಲಿ ಡ್ರಗ್ಸ್ ಸಿಕ್ಕಿಲ್ಲ. ರಾಗಿಣಿ ಡ್ರಗ್ ಪೆಡ್ಲರ್ ಎಂದು ಹೇಳಲು ಬರುವುದಿಲ್ಲ. ಕೇವಲ ರವಿಶಂಕರ್ ಹೇಳಿಕೆ ಆಧರಿಸಿ ರಾಗಿಣಿಯನ್ನು ಅರೆಸ್ಟ್ ಮಾಡಿದ್ದಾರೆ. NDPS ಕಾಯ್ದೆ ಸೆಕ್ಷನ್ 37 ಅನ್ನು ತಪ್ಪಾಗಿ ಬಳಸಲಾಗಿದೆ ಎಂದು ತುಪ್ಪದ ಹುಡುಗಿ ಪರವಾದ ವಕೀಲರು ವಾದ ಮಂಡಿಸಿದ್ದಾರೆ.  

 

LEAVE A REPLY

Please enter your comment!
Please enter your name here

- Advertisment -

Most Popular

Recent Comments