ಬೀದಿಯಲ್ಲಿ ಅಂಗನವಾಡಿ ಮಕ್ಕಳಿಗೆ ಅ, ಆ, ಇ, ಈ ಪಾಠ..!

0
265

ಬೀದರ್ : ಖಾಸಗಿ ಮನೆಯಲ್ಲಿ ನಡೆಸುತ್ತಿದ್ದ ಅಂಗನವಾಡಿ ಕೊಠಡಿಗೆ 8 ತಿಂಗಳಿಗಳಿಂದ ಬಾಡಿಗೆ ನೀಡದ್ದಕ್ಕೆ ಮನೆ ಮಾಲೀಕ ಬೀಗ ಜಡಿದಿರುವ ಘಟನೆ ಬೀದರ್​ನ ಪ್ರತಾಪನಗರ ಬಡಾವಣೆಯಲ್ಲಿ ನಡೆದಿದೆ.
ಅಂಗನವಾಡಿ ನಡೆಸಲು ಸರ್ಕಾರದ ಸ್ವಂತ ಕಟ್ಟಡ ಇಲ್ಲದೆ ಖಾಸಗಿ ಮನೆಯೊಂದರ ಕೊಠಡಿಯಲ್ಲಿ ಇಷ್ಟುದಿನ ಅಂಗನವಾಡಿ ನಡೆಸಲಾಗುತ್ತಿತ್ತು. ಆದ್ರೆ, ಕಳೆದ ಕೆಲ ದಿನಗಳಿಂದ ಗ್ರಾ.ಪಂ ನಿರ್ಲಕ್ಷ್ಯದಿಂದ ಮನೆ ಬಾಡಿಗೆ ನೀಡಿಲ್ಲ. ಬಾಡಿಗೆ ನೀಡದಕ್ಕೆ ಮನೆ ಮಾಲೀಕ ಬಾಕಿ ಬಾಡಿಗೆ ಕೊಟ್ಟು ಅಂಗನವಾಡಿ ಪ್ರಾರಂಭ ಮಾಡಿ ಎಂದು ಬೀಗ ಜಡಿದಿದ್ದಾರೆ. ಇದರಿಂದ ದಿಕ್ಕುತೋಚದ ಅಂಗನವಾಡಿ ಶಿಕ್ಷಕರು ಕೇಂದ್ರಕ್ಕೆ ಬಂದ ಪುಟ್ಟ ಮಕ್ಕಳನ್ನು ಬೀದಿಯಲ್ಲೇ ಕೂರಿಸಿಕೊಂಡು ಅಕ್ಷರ ಹೇಳಿಕೊಡುವ ಸ್ಥಿತಿ ಎದುರಾಗಿದೆ. ಇದನ್ನು ಕಂಡಂತಹ ಸ್ಥಳಿಯರು ಗ್ರಾಮಪಂಚಾಯಿತಿ ಹಾಗೂ ಸರ್ಕಾರದ ವಿರುದ್ದ ಆಕ್ರೋಶ ವ್ಯಕ್ತಪಡಿಸಿದ್ದಾರೆ.

LEAVE A REPLY

Please enter your comment!
Please enter your name here