Home ರಾಜ್ಯ ಟ್ಯಾಂಕರ್​ನಲ್ಲಿ ನೀರು ತಂದು ಬಾವಿಗೆ ಸುರಿಯೋ 'ಬುದ್ಧಿವಂತ' ಅಧಿಕಾರಿಗಳು..!

ಟ್ಯಾಂಕರ್​ನಲ್ಲಿ ನೀರು ತಂದು ಬಾವಿಗೆ ಸುರಿಯೋ ‘ಬುದ್ಧಿವಂತ’ ಅಧಿಕಾರಿಗಳು..!

ಕೆಲವು ಅಧಿಕಾರಿಗಳಿಗೆ ಸಾಮಾನ್ಯ ಜ್ಞಾನ ಅನ್ನೋದೇ ಇಲ್ಲ. ತಾವು ಏನ್ ಮಾಡ್ತಿದ್ದೀವಿ.. ಏನ್ ಮಾಡ್ಬೇಕು ಅನ್ನೋದೇ ಗೊತ್ತಿರಲ್ಲ. ಇಲ್ಲೊಂದು ಕಡೆ ಮಹಾ ಬುದ್ಧಿವಂತ ಅಧಿಕಾರಿಗಳು ಟ್ಯಾಂಕರ್​ನಲ್ಲಿ ನೀರು ತಂದು ಬಾವಿಗೆ ಸುರಿದು ಹೋಗ್ತಾ ಇದ್ದಾರೆ..! ನೇರವಾಗಿ ಟ್ಯಾಂಕರ್​ನಿಂದ ನೀರನ್ನು ಪೂರೈಸೋ ಬದಲು ಬಾವಿಗೆ ಸುರಿಯುತ್ತಿದ್ದು, ಜನ ಆ ನೇರನ್ನು ಬಾವಿಯಿಂದ ಬಿಂದಿಗೆ ಮೂಲಕ ಎತ್ತಿಕೊಳ್ಳಬೇಕಾಗಿದೆ.
ಇದು ಬೀದರ್​ ಜಿಲ್ಲೆಯ ಔರಾದ್​​ ತಾಲೂಕಿನ ಚಿಮ್ಮೇಗಾಂವ್​ ತಾಂಡದ ಜನರ ಸ್ಥಿತಿ. ಅಲ್ಲಿ ಜಲಕ್ಷಾಮ ಎದುರಾಗಿದೆ. ಕುಡಿಯೋ ನೀರಿಗೆ ಹಾಹಾಕಾರ ಎದ್ದಿದೆ. ಹಾಗಾಗಿ ಟ್ಯಾಂಕರ್ ನೀರು ತಂದು ಪೂರೈಸ್ತಾ ಇದ್ದಾರೆ.
ಆದರೆ, ಟ್ಯಾಂಕರ್ ನೀರನ್ನು ನೇರವಾಗಿ ಹಿಡಿದುಕೊಳ್ಳುವಂತಿಲ್ಲ..! ಆ ನೀರನ್ನು ಬಾಗಿಗೆ ಸುರಿದು ಹೋಗುತ್ತಾರೆ. ಜನ ಆ ನೀರನ್ನು ತೆಗೆದುಕೊಳ್ಳಲು ಹರಸಾಹಸ ಪಡಬೇಕಾಗಿದೆ. ಬಾವಿಗಿಳಿದು ನೀರು ತರಲು ಹೋಗಿ ಯುವಕನೊಬ್ಬನ ಎರಡೂ ಕಾಲುಗಳಿಗೂ ಪೆಟ್ಟಾಗಿದೆ.
ಇನ್ನು ಚಿಮ್ಮೇಗಾಂವ್​ ತಾಂಡಾದಲ್ಲಿ ಪ್ರತಿವರ್ಷ ಇದೇ ಗೋಳು. ಅಧಿಕಾರಿಗಳದ್ದು ಅದೇ ರಾಗ, ಅದೇ ಹಾಡು. ಮನೆಗೆ ಟ್ಯಾಂಕರ್​ ನೀರು ಪೂರೈಸಲು ಈ ಅಧಿಕಾರಿಗಳಿಗೆ ಏನ್ ಸಮಸ್ಯೆ ಅನ್ನೋದು ಅರ್ಥವಾಗ್ತಿಲ್ಲ.

LEAVE A REPLY

Please enter your comment!
Please enter your name here

- Advertisment -

Most Popular

ದೇಶದಲ್ಲಿ  24 ಗಂಟೆಗಳಲ್ಲಿ 48,648 ಕೊರೋನಾ ಕೇಸ್ ಪತ್ತೆ!

ನವದೆಹಲಿ : ದೇಶದಲ್ಲಿ ಕಳೆದ 24 ಗಂಟೆಗಳಲ್ಲಿ 48,648 ಮಂದಿಯಲ್ಲಿ ಕೊರೋನಾ ಸೋಂಕು ಪತ್ತೆಯಾಗಿದೆ. ಇದರೊಂದಿಗೆ ಒಟ್ಟು ಸೋಂಕಿತರ ಸಂಖ್ಯೆ 80,88,851ಕ್ಕೆ ತಲುಪಿದೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ...

 ಸಿನಿಮೀಯ ರೀತಿಯಲ್ಲಿ ನಗರಸಭೆ ಸದಸ್ಯ ಕಿಡ್ನಾಪ್​!

ಕೊಪ್ಪಳ : ಸಿನಿಮೀಯ ರೀತಿಯಲ್ಲಿ ನಗರಸಭೆ ಸದಸ್ಯನನ್ನು ಕಿಡ್ನಾಪ್ ಮಾಡಲಾಗಿದೆ. ಕಿಡ್ನಾಪ್​ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಕೊಪ್ಪಳ ಜಿಲ್ಲೆಯ ಗಂಗಾವತಿಯಲ್ಲಿ ನವೆಂಬರ್ 2 ರಂದು ನಗರಸಭೆ ಚುನಾವಣೆ ನಡೆಯಲಿದ್ದು, ಗಂಗಾವತಿ ನಗರಸಭೆ ಕಾಂಗ್ರೆಸ್ ಸದಸ್ಯ...

ಅಲಹಬಾದ್​ ಹೈಕೋರ್ಟ್ ನಿಗಾದಲ್ಲಿ ಹತ್ರಾಸ್​ ಗ್ಯಾಂಗ್ ರೇಪ್​ ಕೇಸ್ ತನಿಖೆಗೆ ಸುಪ್ರೀಂ ಆದೇಶ

ನವದೆಹಲಿ : ಉತ್ತರ ಪ್ರದೇಶ ಹತ್ರಾಸ್​​​​ ಗ್ಯಾಂಗ್​ ರೇಪ್​​ ಪ್ರಕರಣದ ತನಿಖೆ ಅಲಹಬಾದ್​ ಹೈಕೋರ್ಟ್​ ನಿಗಾದಲ್ಲಿ ನಡೆಯಬೇಕೆಂದು ಸುಪ್ರೀಂ ಕೋರ್ಟ್​ ಆದೇಶಿಸಿದೆ. ಸದ್ಯ ಸಿಬಿಐ ಪ್ರಕರಣದ ತನಿಖೆಯನ್ನು ನಡೆಸುತ್ತಿದ್ದು, ತನಿಖಾ ತಂಡದಲ್ಲಿರುವ ಅಧಿಕಾರಿಗಳನ್ನು ರಾಜ್ಯದಿಂದ...

ಡಿ.ಬಾಸ್​​ಗಾಗಿ ಕನ್ನಡ ಕಲಿತ ಜಗಮಪತಿ ಬಾಬು..!

ಸಾಲ್ಟ್ ಅಂಡ್ ಪೆಪ್ಪರ್ ಲುಕ್​ನಲ್ಲಿ ಸೌತ್​ನಲ್ಲಿ ಸಂಚಲನ ಸೃಷ್ಠಿಸಿರೋ ಜಗಪತಿ ಬಾಬು, ಮತ್ತೊಂದು ನೂತನ ದಾಖಲೆ ಬರೆದಿದ್ದಾರೆ. ಅದೂ ಡಿ ಬಾಸ್ ದರ್ಶನ್​ಗಾಗಿ ಅನ್ನೋದು ವಿಶೇಷ. ಇಷ್ಟಕ್ಕೂ ಮೋಸ್ಡ್ ಡಿಮ್ಯಾಂಡಿಂಗ್ ಜಗಪತಿ ಬಾಬು...

Recent Comments