‘ಭರಾಟೆ’ಯಲ್ಲಿ ಸರ್​​ಪ್ರೈಸ್​ ಕೊಟ್ಟ ಸೀನಿಯರ್ ಶ್ರೀಮುರಳಿ..!

0
476

ರೋರಿಂಗ್ ಸ್ಟಾರ್ ಶ್ರೀಮುರಳಿ ‘ ಭರಾಟೆ’ ಜೋರಾಗಿದೆ. ಸೆಟ್ಟೇರಿದಲ್ಲಿಂದಲೂ ಸಿಕ್ಕಾಪಟ್ಟೆ ಸದ್ದು ಮಾಡಿದ್ದ ಸಿನಿಮಾ ಇಂದು ಹೆಚ್ಚು ಕಮ್ಮಿ 370 ಥಿಯೇಟರ್​ಗಳಲ್ಲಿ ರಿಲೀಸ್ ಆಗಿದ್ದು, ನಟ ಶ್ರೀಮುರಳಿ ಮಾತ್ರವಲ್ಲದೆ ಡೈರೆಕ್ಟರ್ ಚೇತನ್ ‘ಭರಾಟೆ’ ಕೂಡ ‘ಭರ್ಜರಿ’ಯಾಗಿಯೇ ಇದೆ.
ಕಣ್ಮನ ಸೆಳೆಯುವ ದೃಶ್ಯಗಳು, ಆ್ಯಕ್ಷನ್ ಸೀನ್​​ಗಳು, ಒಂದಿಷ್ಟು ಕಮರ್ಷಿಯಲ್ ಕಂಟೆಂಟ್​​ಗಳನ್ನು ಹೊಂದಿರುವ ಭರಾಟೆ ಕ್ಲಾಸ್ & ಮಾಸ್ ಪ್ರೇಕ್ಷಕರನ್ನು ಚಿತ್ರಮಂದಿರಗಳಿಗೆ ಕರೆತರುವಲ್ಲಿ ಯಶಸ್ವಿಯಾಗಿದೆ. ಭರಾಟೆ ಎನ್ನುವ ಒಂದೊಳ್ಳೆ ಎಂಟರ್​ಟ್ರೈನ್ಮೆಂಟ್ ದೃಶ್ಯ ಕಾವ್ಯದಲ್ಲಿ ಶ್ರೀಮುರಳಿ -ಶ್ರೀಲೀಲಾ ಕಾಂಬಿನೇಷನ್ ಸಖತ್ತಾಗಿದೆ. ಅರ್ಜುನ್ ಜನ್ಯಾ ಸಂಗೀತಕ್ಕೆ ಫುಲ್​ ಮಾರ್ಕ್ಸ್ ಕೊಡ್ದೇ ಇರೋಕೆ ಸಾಧ್ಯವೇ ಇಲ್ಲ. ಭುವನ್​ ಗೌಡ ಸಿನಿಮಾಟೋಗ್ರಫಿಯಂತೂ ಚಿಂದಿ.
ಬಹು ನಿರೀಕ್ಷಿತ ‘ಭರಾಟೆ’ ಬಗ್ಗೆ ಸಿನಿ ತಂಡ ಇಷ್ಟು ದಿನ ಒಂದು ಗುಟ್ಟು ಬಿಟ್ಟು ಕೊಟ್ಟಿರಲೇ ಇಲ್ಲ! ಚಿತ್ರಮಂದಿರದಲ್ಲೇ ಆ ಸೀಕ್ರೆಟ್​ ಬಯಲಾಗಲಿ ಅಂತ ಚಿತ್ರ ತಂಡ ಒಂದು ರಹಸ್ಯ ಕಾಪಾಡಿಕೊಂಡಿತ್ತು..! ಅದೇ ಸೀನಿಯರ್ ರೋರಿಂಗ್ ಸ್ಟಾರ್ ಶ್ರೀಮುರಳಿ ಎಂಟ್ರಿ!
ಹೌದು ‘ಭರಾಟೆ’ಯಲ್ಲಿ ಶ್ರೀಮುರಳಿ ದ್ವಿಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಒಂದು ಪಾತ್ರದ ಬಗ್ಗೆ ಗೊತ್ತೇ ಇದೆ. ಆದರೆ ಸೀನಿಯರ್ ಮುರಳಿ ಬಗ್ಗೆ ಯಾರಿಗಾದ್ರೂ ಇಲ್ಲಿತನಕ ಗೊತ್ತಿತ್ತೇ..? ಅದೇ ಸಸ್ಪೆನ್ಸ್..! ಮುರಳಿ ವೃದ್ಧನ ಪಾತ್ರದಲ್ಲೂ ಸದ್ದು ಮಾಡಿದ್ದಾರೆ. ಮುರಳಿಯ ಹೊಸ ಗೆಟಪ್ ನೋಡಿದ್ರೆ ಇವರೇನಾ ನಮ್ಮ ರೋರಿಂಗ್​ ಸ್ಟಾರ್ ಅಂತ ಅಚ್ಚರಿ ಪಡ್ತೀರಿ. ‘ಭರಾಟೆ’ಯ ಸೀನಿಯರ್ ಮುರಳಿಯ ಒಂದೆರಡು ಫೋಟೋಗಳು ಇಲ್ಲಿವೆ ನೀವೇ ನೋಡಿ. ಈ ಪಾತ್ರವೇನು ಅನ್ನೋದನ್ನು ಸಿನಿಮಾದಲ್ಲೇ ನೋಡಿ. 

LEAVE A REPLY

Please enter your comment!
Please enter your name here