Home ಸಿನಿ ಪವರ್ ಈ ಶುಕ್ರವಾರ 'ಭಾನು ವೆಡ್ಸ್​ ಭೂಮಿ'..!

ಈ ಶುಕ್ರವಾರ ‘ಭಾನು ವೆಡ್ಸ್​ ಭೂಮಿ’..!

ಸ್ಯಾಂಡಲ್​ವುಡ್​ನಲ್ಲಿ ಹೊಸಬರ ಚಿತ್ರಗಳು ಸಾಲು ಸಾಲಾಗಿ ಬರ್ತಾ ಇವೆ. ಈ ಸಾಲಿಗೀಗ ‘ಭಾನು ವೆಡ್ಸ್​ ಭೂಮಿ’ ಸೇರ್ಪಡೆಯಾಗಿದೆ. ಯೆಸ್, ಭಾನು ವೆಡ್ಸ್​ ಭೂಮಿ ತೆರೆಗೆ ಬರಲು ರೆಡಿಯಾಗಿದೆ. ನೈಜಘಟನೆ ಆಧಾರಿತ ಚಿತ್ರವಿದು ಅಂತ ಚಿತ್ರತಂಡ ಹೇಳಿಕೊಂಡಿದೆ. ಈಗಾಗಲೇ ಸಿನಿಮಾ ಸೆನ್ಸಾರ್ ಮಂಡಳಿಯಿಂದ ಯು/ಎ ಸರ್ಟಿಫಿಕೇಟ್ ಪಡೆದಿದೆ. ಚಿತ್ರವನ್ನು ನೋಡಿದ ಸೆನ್ಸಾರ್ ಮಂಡಳಿ ಯಾವ್ದೇ ಭಾಗಕ್ಕೆ ಕತ್ತರಿ ಹಾಕದೇ ರಿಲೀಸ್​ಗೆ ಗ್ರೀನ್ ಸಿಗ್ನಲ್ ಕೊಟ್ಟಿದೆ.

ಭಾನು ಮತ್ತು ಭೂಮಿ ಒಬ್ಬರೊನ್ನೊಬ್ರು ನೋಡ್ತಾ ಹತ್ತಿರ ಸೇರ್ಬೇಕು ಅಂತ ಬಹಳ ಹಪಹಪಿಸ್ತಿದ್ದರೂ ಅದು ಸಾಧ್ಯವಾಗ್ದೇ ಯಾವ ರೀತಿ ಪರಸ್ಪರ ಭಾವನೆಗಳನ್ನು ವ್ಯಕ್ತಪಡಿಸ್ತಾರನ್ನೋದೇ ಚಿತ್ರದ ತಿರುಳಂತೆ. ಈಗಾಗಲೇ ಟ್ರೈಲರ್, ಹಾಡುಗಳಿಂದ ನಿರೀಕ್ಷೆಯನ್ನು ಹುಟ್ಟು ಹಾಕಿರೋ ಭಾನು ವೆಡ್ಸ್​ ಭೂಮಿಗೆ ಆಕ್ಷನ್ ಕಟ್ ಹೇಳಿರೋದು ಜಿ.ಕೆ ಆದಿ.

ಸೂರ್ಯಪ್ರಭ್​ ಚಿತ್ರಕ್ಕೆ ನಾಯಕರಾಗಿದ್ದು, ಅವರಿಗೆ ನಾಯಕಿಯಾಗಿ ರಿಷಿತಾ ಮಲ್ನಾಡ್​ ಅಭಿನಯಿಸಿದ್ದಾರೆ. ಶೋಭ್​ರಾಜ್​, ಗಿರೀಶ್, ವಿಜಿ ಪ್ರವೀಣ್, ಮಿಮಿಕ್ರಿ ರಾಜು ಮತ್ತಿತರರು ತಾರಾಗಣದಲ್ಲಿದ್ದು ರಂಗಾಯಣ ರಘುರವರು ವಿಶೇಷ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಪೂರ್ವಿ ಪ್ರೊಡಕ್ಷನ್ಸ್ ಲಾಂಛನದಲ್ಲಿ ಕಿಶೋರ್ ಶೆಟ್ಟಿ ಸಿನಿಮಾ ನಿರ್ಮಾಣ ಮಾಡಿದ್ದಾರೆ.

ಇನ್ನು ಈ ಸಿನಿಮಾ ಸಿಂಪಲ್ ಲವ್ ಮ್ಯಾರೇಜ್ ಸ್ಟೋರಿಯಾಗಿದ್ದು. ಅನೇಕ ತಿರುವುಗಳು ಸಿನಿಮಾದಲ್ಲಿ ಬರುತ್ತವೆ. ಆರಂಭದಿಂದ ಕೊನೆಯವರೆಗೂ ಖಂಡಿತಾ ನೋಡುಗರನ್ನು ಹಿಡಿದಿಟ್ಟುಕೊಳ್ಳುತ್ತದೆ ಅಂದಿದೆ ಚಿತ್ರತಂಡ. ಬೆಂಗಳೂರು, ಮೈಸೂರು,  ಶಿವಮೊಗ್ಗ, ಕಾರವಾರ ಮೊದಲಾದ ಕಡೆಗಳಲ್ಲಿ ಶೂಟಿಂಗ್ ಮಾಡಲಾಗಿದೆ.

ಚಿತ್ರ ಸೆನ್ಸಾರ್ ಅಂಗಳದಲ್ಲೂ ಗೆದ್ದು ಬಂದಿದ್ದು, ರಿಲೀಸ್​ಗೆ ರೆಡಿಯಾಗಿದೆ. ಇದೇ 26 ಅಂದರೆ ಜುಲೈ 26ರ ಶುಕ್ರವಾರ ಭಾನು-ಭೂಮಿ ಮದ್ವೆಗೆ ಡೇಟ್​ ಫಿಕ್ಸ್ ಆಗಿದೆ. ಅರ್ಥಾತ್ 26ರಂದು ಭಾನು ವೆಡ್ಸ್ ಭೂಮಿ ಸಿನಿಮಾ ರಿಲೀಸ್ ಆಗ್ತಿದೆ.

LEAVE A REPLY

Please enter your comment!
Please enter your name here

- Advertisment -

Most Popular

ಆಧುನಿಕ ಭಗೀರಥ ಕಾಮೇಗೌಡರಿಗೆ ಅನಾರೋಗ್ಯ; ದಿಢೀರ್ ಆಸ್ಪತ್ರೆಗೆ ದಾಖಲು.

ಮಂಡ್ಯ: ಮಂಡ್ಯದ ಕೆರೆ ಕಾಮೇಗೌಡರು ಅಂದ್ರೆ ಯಾರಿಗೆ ಗೊತ್ತಿಲ್ಲ ಹೇಳಿ. ಪ್ರಧಾನಿ ನರೇಂದ್ರ ಮೋದಿ ಅವರ ಮನ್ ಕೀ ಬಾತ್ ನಲ್ಲಿ ಪ್ರಶಂಸೆಗೆ ಒಳಪಟ್ಟ ಕೆರೆ ಕಾಮೇಗೌಡರು ದೇಶ ಮಾತ್ರವಲ್ಲ, ವಿಶ್ವದ ಹಲವೆಡೆ...

ಮಳೆ ಮಧ್ಯೆಯೂ ಕರ್ತವ್ಯ ನಿಷ್ಠೆ : ಎಸ್​.ಪಿ ಮೆಚ್ಚುಗೆ

ಬಾಗಲಕೋಟೆ: ಜಿಲ್ಲೆಯ ಕಲಾದಗಿಯಲ್ಲಿ ಗ್ರಾಮದಲ್ಲಿ ಸೋಂಕಿತರು ಹೆಚ್ಚಿದ ಪರಿಣಾಮ ಗ್ರಾಮ ಸೀಲ್ ಡೌನ್ ಮಾಡಲಾಗಿದೆ.ಮಳೆ ಮಧ್ಯೆಯೂ ಪೋಲಿಸ ಪೇದೆ ಕತ೯ವ್ಯ ನಿಷ್ಠೆ ಮೆರದ ವಿಡಿಯೋ ಜಾಲತಾಣದಲ್ಲಿ ಸಖತ್ ವೈರಲ್ ಆಗಿದೆ.ಸೀಲ್ ಡೌನ್ ಆಗಿರೋ...

ಗಮನ ಸೆಳೆದ ‘ಮಾಸ್ಕ್ ಪರಾಟಾ..!’

ಕರೋನಾದಿಂದ ಬಚಾವಾಗಲು ಇರುವ ಬಹು ಮುಖ್ಯ ಅಸ್ತ್ರ ಎಂದರೆ ಅದು ಫೇಸ್ ಮಾಸ್ಕ್. ಎಲ್ಲರೂ ಫೇಸ್ ಮಾಸ್ಕ್ ಬಳಸಿ ಎಂದು ಸರ್ಕಾರ ಸೇರಿದಂತೆ, ಸಾಕಷ್ಟು ಮಂದಿ ಜಾಗೃತಿ ಮೂಡಿಸುತ್ತಲೇ ಇದ್ದಾರೆ. ಇಲ್ಲೊಂದು ಹೊಟೆಲ್...

ಚಾರ್ಮಾಡಿ ಘಾಟ್​​ನಲ್ಲಿ ರಾತ್ರಿ ಸಂಚಾರಕ್ಕೆ ನಿರ್ಬಂಧ

ಚಿಕ್ಕಮಗಳೂರು : ಮಂಗಳೂರು-ಚಿಕ್ಕಮಗಳೂರು ಮಧ್ಯೆ ಸಂಪರ್ಕ ಕಲ್ಪಿಸುವ ಚಾರ್ಮಾಡಿ ಘಾಟ್ ನಲ್ಲಿ ಭಾರೀ ಮಳೆಯಿಂದಾಗಿ ಮಣ್ಣು ಕುಸಿಯುವ ಭೀತಿ ಎದುರಾಗಿದ್ದು ಇದನ್ನು ತಪ್ಪಿಸಲು ಘಾಟ್ ನಲ್ಲಿ ಸಂಜೆ 7 ಗಂಟೆಯಿಂದ ಬೆಳಗ್ಗೆ 7...

Recent Comments