ಸಕ್ಸಸ್ ಅನ್ನೋದು ಕೊಂಚ ಲೇಟ್ ಆಗಬಹುದು. ಆದ್ರೆ ಪ್ರಾಮಾಣಿಕ ಪ್ರಯತ್ನಗಳು ಸೋತಿರೋ ನಿದರ್ಶನಗಳೇ ಇಲ್ಲ. ಭಜರಂಗಿ ಸಿನಿಮಾದಿಂದ ಬೆಳಕಿಗೆ ಬಂದ ಸೌರವ್ ಲೋಕಿ, ಇದೀಗ ಡಾಲಿ, ದುನಿಯಾ ವಿಜಯ್ ರೀತಿ ಪಕ್ಕದ ಟಾಲಿವುಡ್ನಲ್ಲಿ ಮಿಂಚು ಹರಿಸಲಿದ್ದಾರೆ.
ತ್ರಿಬಲ್ ಆರ್ ನಂತ್ರ ಪಕ್ಕದ ಟಾಲಿವುಡ್ ಅಂಗಳದಲ್ಲಿ ತೆರೆಗಪ್ಪಳಿಸೋಕೆ ಸಜ್ಜಾಗಿರೋ ಮೋಸ್ಟ್ ಎಕ್ಸ್ಪೆಕ್ಟೆಡ್ ಮೂವಿ ಅಂದ್ರೆ ಆಚಾರ್ಯ. ಇದು ಮೆಗಾಸ್ಟಾರ್ ಚಿರಂಜೀವಿ ಅವ್ರ ಸಿನಿಮಾ ಅನ್ನೋದೇ ವಿಶೇಷ. ಚಿರು ಕಂಬ್ಯಾಕ್ ಆದ ಬಳಿಕ ರಿಮೇಕ್ ಚಿತ್ರಗಳನ್ನ ಮಾಡಿದ್ರು. ಇದೀಗ ಅವ್ರ ಸ್ಟ್ರೈಟ್ ಸಬ್ಜೆಕ್ಟ್ ಸಿನಿಮಾ ಆಚಾರ್ಯ, ಹತ್ತು ಹಲವು ಕಾರಣಗಳಿಂದ ಪ್ರೇಕ್ಷಕರ ನಾಡಿಮಿಡಿತ ಹೆಚ್ಚಿಸಿದೆ.
ಮಾಸ್ ಮಸಾಲ ಸಿನಿಮಾಗಳ ಮಾಸ್ಟರ್ ಕೊರಟಾಲ ಶಿವ ಌಕ್ಷನ್ ಕಟ್ನಲ್ಲಿ ತಯಾರಾದ ಚಿತ್ರ ಆಚಾರ್ಯ. ಕೊರೋನಾದಿಂದ ಕೊಂಚ ತಡವಾಗಿ ತೆರೆಗೆ ಬರ್ತಿದೆ. ಇದೇ ಏಪ್ರಿಲ್ 29ಕ್ಕೆ ಸಿನಿಮಾದ ರಿಲೀಸ್ ಡೇಟ್ ಕೂಡ ಲಾಕ್ ಮಾಡಿದೆ ಟೀಂ. ಮತ್ತೊಂದು ಹೈಲೈಟ್ ಅಂದ್ರೆ, ಇದರಲ್ಲಿ ತಂದೆ ಚಿರು ಜೊತೆ ರಾಮ್ ಚರಣ್ ಕೂಡ ಬಣ್ಣ ಹಚ್ಚಿದ್ದಾರೆ.
ಆಚಾರ್ಯ ಚಿರು, ಸಿದ್ಧ ರಾಮ್ ಚರಣ್ ಮೆಗಾ ಕಾಂಬೋ ಜೊತೆ ನಮ್ಮ ಕನ್ನಡದ ಆರಡಿ ಕಟೌಟ್ ಭಜರಂಗಿ ಲೋಕಿ ಕೂಡ ಬಣ್ಣ ಹಚ್ಚಿದ್ದಾರೆ ಅನ್ನೋದು ಎಷ್ಟೋ ಮಂದಿಗೆ ಗೊತ್ತಿಲ್ಲ. ಭಜರಂಗಿ 2 ಬಳಿಕ ಇದು ಸೌರವ್ ಲೋಕಿಯ ಬಿಗ್ಗೆಸ್ಟ್ ಸಿನಿಮಾ ಆಗಿದ್ದು, ಪ್ರಮುಖ ಪಾತ್ರದಲ್ಲಿ ಪಕ್ಕದ ಟಾಲಿವುಡ್ನಲ್ಲಿ ಮಿಂಚಲಿದ್ದಾರೆ.
ಸವಾರಿ ಚಿತ್ರದಿಂದ ಶುರುವಾದ ಲೋಕಿಯ ಬೆಳ್ಳಿತೆರೆ ಸವಾರಿ, ಆಚಾರ್ಯ ವರೆಗೂ ಬಂದು ನಿಂತಿದೆ. ಭಜರಂಗಿ, ಭಜರಂಗಿ 2, ಮಿಸ್ಟರ್ ಅಂಡ್ ಮಿಸೆಸ್ ರಾಮಾಚಾರಿ, ದಮಯಂತಿ, ರಥಾವರ ಹೀಗೆ ಹತ್ತಾರು ಸಿನಿಮಾಗಳಲ್ಲಿ ಭಿನ್ನ ವಿಭಿನ್ನ ಪಾತ್ರಗಳಲ್ಲಿ ನೋಡುಗರ ಮನಸ್ಸು ಗೆದ್ದಿದ್ದು ಲೋಕಿ. ಇದೀಗ ಡಾಲಿ ಧನಂಜಯ, ದುನಿಯಾ ವಿಜಯ್ ರೀತಿ ತೆಲುಗು ಮಂದಿಯ ಬೆಲೆಗೆ ಬಿದ್ದಿದ್ದಾರೆ.
ಆಚಾರ್ಯ ಸಿನಿಮಾ ಲೋಕಿಗೆ ಚೊಚ್ಚಲ ತೆಲುಗು ಪ್ರಾಜೆಕ್ಟ್. ಮೊದಲ ಸಿನಿಮಾನೇ ಚಿರಂಜೀವಿ ಅಂತಹ ಲೆಜೆಂಡ್ ಜೊತೆ ಸಿಕ್ಕಿರೋದು ನಿಜಕ್ಕೂ ಗ್ರೇಟ್. ಇದು ಅವ್ರ ಪ್ರತಿಭೆಗೆ ಸಿಕ್ಕ ಪುರಸ್ಕಾರವೇ ಸರಿ. ಇನ್ನು ಭಜರಂಗಿ 2 ಚಿತ್ರಕ್ಕಾಗಿ ಲೋಕಿ ಮಾಡಿದ ಹಾರ್ಡ್ ವರ್ಕ್ ಹಾಗೂ ಅವ್ರ ಡೆಡಿಕೇಷನ್ ನೋಡಿ ಸ್ಟಾರ್ ಡೈರೆಕ್ಟರ್ ಕೊರಟಾಲ ಶಿವ ಅವ್ರೇ ದಂಗಾಗಿದ್ದು ಸುಳ್ಳಲ್ಲ. ಇದಲ್ಲದೆ, ಇನ್ನೂ ಹೆಸರಿಡದ ಸಿನಿಮಾವೊಂದರಲ್ಲಿ ಭಜರಂಗಿ ಲೋಕಿಯ ರೌದ್ರಾವತಾರ ಹೊರಬರಲಿದ್ದು, ಆಚಾರ್ಯದಿಂದ ಒಳ್ಳೆಯ ಮೈಲೇಜ್ ಅಂತೂ ಸಿಗಲಿದೆ.
ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಫಿಲ್ಮ್ ಬ್ಯೂರೋ ಹೆಡ್, ಪವರ್ ಟಿವಿ