Sunday, June 26, 2022
Powertv Logo
Homeದೇಶಮೋದಿ ಸರ್ಕಾರದ ಮತ್ತೊಂದು ವಿಕೆಟ್ ಪತನ..!

ಮೋದಿ ಸರ್ಕಾರದ ಮತ್ತೊಂದು ವಿಕೆಟ್ ಪತನ..!

ನವದೆಹಲಿ: ಕೇಂದ್ರ ಸಚಿವ ಉಪೇಂದ್ರ ಕುಶ್ವಾಹ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಇದರೊಂದಿಗೆ ಮೋದಿ ಸರ್ಕಾರದ ಮತ್ತೊಂದು ವಿಕೆಟ್ ಪತನವಾಗಿದೆ.

ಲೋಕಸಭಾ ಸೀಟು ಹಂಚಿಕೆಗೆ ಸಂಬಂಧಪಟ್ಟ ಅಸಮಧಾನ ಕುಶ್ವಾಹ ಅವರ ರಾಜೀನಾಮೆಗೆ ಕಾರಣವಾಗಿದೆ. ರಾಷ್ಟ್ರೀಯ ಲೋಕಸಭಾ ಪಕ್ಷದ ಅಧ್ಯಕ್ಷರಾಗಿರೋ ಉಪೇಂದ್ರ ಕುಶ್ವಾಹ ಕೇಂದ್ರದ ಮಾನಸಂಪನ್ಮೂಲ ಇಲಾಖೆ ರಾಜ್ಯ ಸಚಿವರಾಗಿದ್ದರು. ಇವರು ಮುಂದಿನ ಲೋಕಸಭಾ ಚುನಾವಣೆಗೆ ಬಿಹಾರದ ಸೀಟು ಹಂಚಿಕೆ ವಿಚಾರದಲ್ಲಿ ಅಸಮಧಾನಗೊಂಡಿದ್ದರು.

ಬಿಹಾರದಲ್ಲಿ ಒಟ್ಟು 40 ಲೋಕಸಭಾ ಸ್ಥಾನಗಳಿದ್ದು, ಬಿಜೆಪಿ ಮತ್ತು ಜೆಡಿ(ಯು) ಗೆ ತಲಾ 17 ಸೀಟ್ ಗಳನ್ನು ಕೊಡುವ ಬಗ್ಗೆ ಒಪ್ಪಂದವಾಗಿದ್ದು, ಇದೇ ಕುಶ್ವಾಹ ಅವರ ಬೇಸರಕ್ಕೆ ಕಾರಣ ಎನ್ನಲಾಗಿದೆ.

2 COMMENTS

LEAVE A REPLY

Please enter your comment!
Please enter your name here

- Advertisment -

Most Popular

Recent Comments