Home uncategorized ನಿರ್ಮಾಣವಾಗಿ ಎರಡೇ ಎರಡು ವರ್ಷಕ್ಕೇ  ಫ್ಲೈಓವರ್ ತುಂಬೆಲ್ಲಾ ಹೊಂಡ-ಗುಂಡಿ! ಇದು ಜೀವಕ್ಕೆ ಕುತ್ತು ತರ್ತಿರೋ ಮೇಲ್ಸೇತುವೆ..!

ನಿರ್ಮಾಣವಾಗಿ ಎರಡೇ ಎರಡು ವರ್ಷಕ್ಕೇ  ಫ್ಲೈಓವರ್ ತುಂಬೆಲ್ಲಾ ಹೊಂಡ-ಗುಂಡಿ! ಇದು ಜೀವಕ್ಕೆ ಕುತ್ತು ತರ್ತಿರೋ ಮೇಲ್ಸೇತುವೆ..!

ಬೆಂಗಳೂರು : ಆ ಫ್ಲೈಓವರ್ ನಿರ್ಮಾಣವಾಗಿ ಎರಡು ವರ್ಷವಾಗಿದೆಯಷ್ಟೇ. ಆದ್ರೆ ಅಷ್ಟರಲ್ಲೇ ಸಂಪೂರ್ಣ ಜಖಂ ಆಗಿದೆ.  ಜೀವವನ್ನು ಗಟ್ಟಿಯಾಗಿಟ್ಕೊಂಡ್ ಅಲ್ಲಿ ವಾಹನ ಚಲಾಯಿಸ್ಬೇಕು. ಸ್ವಲ್ಪ ಯಡವಟ್ಟಾದ್ರೂ ಜೀವಕ್ಕೇ ಕುತ್ತು.. ಕಮ್ಮಿ ಅಂದ್ರು ಕೈ-ಕಾಲು ಮುರ್ಕೊಂಡು ಆಸ್ಪತ್ರೆಗೆ ಅಡ್ಮಿಟ್ ಆಗೋದ್ರಲ್ಲಿ ಡೌಟಿಲ್ಲ!

ಹೌದು, ಬೆಂಗಳೂರಿನ  ಬಿಇಎಲ್ ಸರ್ಕಲ್ ಮತ್ತು ಗೊರಗುಂಟೆ ಪಾಳ್ಯಕ್ಕೆ ಹೋಗುವ  ರಿಂಗ್​ ರೋಡ್​ ದುಸ್ಥಿತಿ ಇದು. ಇಲ್ಲಿ ಫ್ಲೈಓವರ್ ನಿರ್ಮಾಣವಾಗಿ ಎರಡು ವರ್ಷವಾಗಿದೆ ಅಷ್ಟೇ. ಆದ್ರೆ ಈಗ್ಲೇ ಅಲ್ಲಿ ವಾಹನ ಚಲಿಸುವುದು ಬಹಳ ಕಷ್ಟ! ಈ ಮಾರ್ಗದಲ್ಲಿ ದಿನಾಲೂ ಸಾಕಷ್ಟು ವಾಹನ ಓಡಾಟ ಇದ್ದೇ ಇರುತ್ತೆ. ರಸ್ತೆ ಉದ್ದಕ್ಕೂ ಇರುವ ದೊಡ್ಡ ದೊಡ್ಡ ಗುಂಡಿಗಳನ್ನು ತಪ್ಪಿಸಿ ವಾಹನ ಚಲಾಯಿಸುವುದೇ ದೊಡ್ದ ತಲೆನೋವು. ಒಂದು ಹೊಂಡ ತಪ್ಪಿಸಲು ಹೋದ್ರೆ ಇನ್ನೊಂದಕ್ಕೆ ಬೀಳೋ ಸ್ಥಿತಿ! ಹೀಗೆ ಫ್ಲೇಓವರ್ ಸಂಪೂರ್ಣ ಹಾಳಾಗಿದ್ದರೂ, ಈ ಬಗ್ಗೆ  ನಾನಾ ಬಾರಿ ಅಧಿಕಾರಿಗಳ ಗಮನಕ್ಕೆ ತರಲಾಗಿದ್ದರೂ ಯಾವ್ದೇ ಸ್ಪಂದನೆ ಸಿಗ್ತಿಲ್ಲ ಅನ್ನೋ ಆರೋಪವಿದೆ.  ಒಟ್ನಲ್ಲಿ ಜನ ಮಾತ್ರ ಹೈರಾಣಾಗಿದ್ದು, ಇನ್ನಾದರೂ ಸಂಬಂಧಪಟ್ಟ ಅಧಿಕಾರಿಗಳು ಎಚ್ಚೆತ್ತುಕೊಂಡು ಸರಿಪಡಿಸೋ ಕೆಲಸ ಮಾಡಲಿ.

LEAVE A REPLY

Please enter your comment!
Please enter your name here

- Advertisment -

Most Popular

ಅಪಮಾನದಿಂದ ಶೋಕ್ದಾರ್ ಮುಕ್ತ.. ನೋ ಮಿಸ್ಟೇಕ್..?!

ನೈಟ್ ಸಫಾರಿಯಿಂದ ಹೊಸ ವಿವಾದದಲ್ಲಿ ಸಿಲುಕಿಕೊಂಡಿದ್ದ ಸ್ಯಾಂಡಲ್​ವುಡ್​ನ ಶೋಕ್ದಾರ್, ಟಾಕ್ ಆಫ್ ದ ಟೌನ್ ಆಗಿದ್ರು. ಆದ್ರೀಗ ಅರಣ್ಯಾಧಿಕಾರಿಗಳು ಆ ಕೇಸ್​ನ ಟ್ರೇಸ್ ಮಾಡಿದ್ದಾರೆ. ಅವಮಾನ ಹಾಗೂ ಅಪಮಾನಗಳಿಂದ ಬಜಾರ್ ಹುಡ್ಗನಿಗೆ ಮುಕ್ತಿ...

ಡಿಕೆಶಿ ಗೂಂಡಾ ರಾಜಕಾರಣ ನಡೆಯುವುದಿಲ್ಲ : ಶೋಭಾ ಕರಂದ್ಲಾಜೆ

ಮೈಸೂರು :  ಶಿರಾ, ಆರ್ ಆರ್​ ನಗರ ವಿಧನಾಸಭಾ ಉಪ ಚುನಾವಣೆಯಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ . ಕೆ ಶಿವಕುಮಾರ್​ ಅವರ ಗೂಂಡಾ ರಾಜಕಾರಣ  ನಡೆಯುವುದಿಲ್ಲ ಅಂತ ಬಿಜೆಪಿ ಸಂಸದೆ ಶೋಭಾ ಕರಂದ್ಲಾಜೆ ...

ಕಾಡಾನೆ ದಾಳಿಗೆ ಸಕ್ರೆಬೈಲು ಬಿಡಾರದ ದೈತ್ಯ ಆನೆ `ರಂಗ’ ಸಾವು

ಶಿವಮೊಗ್ಗ :  ಕಾಡಾನೆ ದಾಳಿಯಿಂದ ಸಕ್ರೆಬೈಲು ಬಿಡಾರದ ಆನೆ ರಂಗ ಮೃತಪಟ್ಟಿದೆ. 35 ವರ್ಷದ ಆನೆ ರಂಗ ಸಕ್ರೆಬೈಲು ಬಿಡಾರದ ಪ್ರಮುಖ ಆಕರ್ಷಣೆಯಾಗಿತ್ತು. ಕಳೆದ ರಾತ್ರಿ ಬಿಡಾರಕ್ಕೆ ನುಗ್ಗಿದ ಕಾಡೆನೆಯೊಂದು ಏಕಾಏಕಿ ರಂಗನ ಮೇಲೆರಗಿದೆ....

ದೇವೇಂದ್ರ ಫಡ್ನವಿಸ್​​ಗೆ ಕೊರೋನಾ

ಮುಂಬೈ : ಮಹಾರಾಷ್ಟ್ರ ಮಾಜಿ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್​ ಅವರಿಗೆ ಕೊರೋನಾ ಸೋಂಕು ತಗುಲಿದೆ. ಫಡ್ನವೀಸ್ ಅವರು ಬಿಹಾರದ ಬಿಜೆಪಿ ಚುನಾವಣಾ ಪ್ರಚಾರ ಉಸ್ತುವಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದರು. ಇನ್ನೇನು ಕೆಲವೇ ಕೆಲವು ದಿನಗಳಲ್ಲಿ ಬಿಹಾರ ವಿಧಾನಸಭಾ...

Recent Comments