ಬೆಂಗಳೂರು : ಹಿರಿಯರಿಗೆ ಬೆಲೆ ಕೊಡೋದು, ಕಷ್ಟದಲ್ಲಿರೋರ ನೆರವಿಗೆ ಬರೋದನ್ನು ಜನ ಮರೀತಾ ಇದ್ದಾರಾ..? ಆಧುನಿಕ ಪ್ರಪಂಚ ಮಾನವೀಯತೆಯ ಸಮಾಧಿ ಮೇಲೆ ದುಡ್ಡಿನ ಸಾಮ್ರಾಜ್ಯ ಕಟ್ಟಲು ಹೋಗಿದ್ಯಾ? ಸಾವು – ಬದುಕಿನ ನಡುವೆ ಹೋರಾಡ್ತಿದ್ರೂ ಅಯ್ಯೋ ಪಾಪಾ ಅಂತ ಅವರ ಸಹಾಯಕ್ಕೆ ಬರೋ ಮನಸ್ಸು ಮಾಡೋ ಮಂದಿ ಬಹಳ ಕಮ್ಮಿಯಾಗಿದ್ದಾರಾ?
ವೈದ್ಯರನ್ನು ದೇವರು ಅಂತೀವಿ. ಆದ್ರೆ ಎಷ್ಟೋ ಜನ ವೈದ್ಯರು. ಆಸ್ಪತ್ರೆ ಬರೀ ದುಡ್ಡು ದುಡ್ಡು ಅಂತ ಮಂತ್ರ ಜಪಿಸ್ತಾ ಇವೆ..! ದಿನಾಲೂ ಒಂದಲ್ಲ ಒಂದು ಇಂಥಾ ಕಥೆಗಳನ್ನು ಕೇಳ್ತಾನೆ ಇರ್ತೀವಿ. ಈ ಕೊರೋನಾ ಟೈಮ್ನಲ್ಲಂತೂ ಆ ಬಗ್ಗೆ ಕೇಳೋದೇ ಬೇಡ ಬಿಡಿ.
ಅಂತಹದ್ದೇ ಒಂದು ಕರುಣಾಜನಕ ಸುದ್ದಿ ಇದು. ವೃದ್ಧ ದಂಪತಿಗೆ ಆಸ್ಪತ್ರೆಗಳಲ್ಲಿ ಬೆಡ್ ಸಿಗದೆ ಪ್ರತಿಭಟನೆ ಮಾರ್ಗ ಕಂಡುಕೊಂಡ ಬೇಸರದ ಕಥೆಯಿದು.
ಬೆಂಗಳೂರಲ್ಲಿ ನಾನ್ ಕೊವಿಡ್ ರೋಗಿಗಳ ಪರದಾಟವನ್ನು ಕೇಳೋರೇ ಇಲ್ಲದಾಗಿದೆ. ಅಂತೆಯೇ ಉಸಿರಾಟದ ತೊಂದ್ರೆಯಿಂದ ತಡರಾತ್ರಿ ವೃದ್ಧ ದಂಪತಿ ನರಳಾಡಿದ್ದರೂ ಅವರಿಗಾಗಿ ಯಾರೂ ಬಂದಿಲ್ಲ. ಕೆಲ ಆಸ್ಪತ್ರೆಗಳು ಕೂಡ ಪಾಪಾ, ವಯಸ್ಸಾದವ್ರೂ ಅಂತ ಕರುಣೆ, ಮಾನವೀಯತೆಯನ್ನೂ ತೋರಿಸದೆ ಅಮಾನವೀಯವಾಗಿ ನಡೆದುಕೊಂಡಿದ್ದಾರೆ. ಟ್ರೀಟ್ಮೆಂಟ್ಗೆ ಅಂತ ಹತ್ತಾರು ಆಸ್ಪತ್ರೆ ಅಲೆದ್ರೂ ಎಲ್ಲೂ. ಎಲ್ಲೆಂದರೆಲ್ಲೂ ಬೆಡ್ ಸಿಗದೆ ಶುಕ್ರವಾರ ಮಧ್ಯರಾತ್ರಿ ವೃದ್ಧ ದಂಪತಿ ನರಳಾಡಿದ್ದಾರೆ. ಆಸ್ಪತ್ರೆಯವರ ವರ್ತನೆಯಿಂದ ಬೇಸತ್ತು ಆ ವೃದ್ಧ ದಂಪತಿ ಕಬ್ಬನ್ ಪಾರ್ಕ್ ಗಾಂಧಿ ಪ್ರತಿಮೆ ಮುಂದೆ ಪ್ರೊಟೆಸ್ಟ್ ಮಾಡಿದ್ದಾರೆ. ಕೊನೆಗೆ ಅವರಿಬ್ಬರನ್ನು ವಿಕ್ರಮ್ ಆಸ್ಪತ್ರೆಗೆ ಸೇರಿಸಲಾಗಿದೆ. ಹುಷಾರಿಲ್ಲ, ಜೀವ ಹೋಗ್ತಿದೆ ಅಂತಾದ್ರೂ ಪ್ರೊಟೆಸ್ಟ್ ಮಾಡಿ ಆಸ್ಪತ್ರೆಯಲ್ಲಿ ಟ್ರೀಟ್ಮೆಂಟ್ ಪಡೆಯೋ ಸ್ಥಿತಿ ಇದೆ ಅಂತಾದ್ರೆ ಏನ್ ಹೇಳ್ಬೇಕು? ಛೇ.. ಮಾನವೀಯತೆ ಸತ್ತ್ಹೋತಾ?