ಬೆಂಗಳೂರು : ನಗರದಲ್ಲಿ ಕೊರೋನಾ ಸೋಂಕಿನಿಂದ ಮೃತಪಡುತ್ತಿರೋರ ಸಂಖ್ಯೆ ಹೆಚ್ಚಾಗಿದ್ದು, ಕೊರೋನೇತರ ಕಾರಣಗಳಿಂದ ಮೃತಪಟ್ಟವರ ಅಂತ್ಯಕ್ರಿಯೆಗೆ ಸಾರ್ವಜನಿಕರು ಸಮಸ್ಯೆ ಎದುರಿಸುವಂತಾಗಿದೆ. ಹೀಗಾಗಿ ಬಿಬಿಎಂಪಿ ಕೊರೋನಾದಿಂದ ಮೃತಪಟ್ಟವರ ಶವಸಂಸ್ಕಾರಕ್ಕಾಗಿಯೇ ಪ್ರತ್ಯೇಕ ನಾಲ್ಕು ಚಿತಾಗಾರಗಳನ್ನು ನಿಗದಿಪಡಿಸಿದೆ. ಅಲ್ಲದೆ ಅಂತ್ಯಕ್ರಿಯೆಗೆ ಆನ್ಲೈನ್ ಬುಕ್ಕಿಂಗ್ ವ್ಯವಸ್ಥೆ ಕಲ್ಪಿಸಿದೆ.
ಸದ್ಯ ನಗರದಲ್ಲಿನ ಚಿತಾಗಾರಗಳಲ್ಲಿ ಕೊರೋನಾ –ಕೊರೋನೇತರ ಸರಾಸರಿ 65 ಶವಗಳ ಅಂತ್ಯಕ್ರಿಯೆ ಮಾಡಲಾಗುತ್ತಿದೆ. ನಗರದಲ್ಲಿನ ಒಟ್ಟು 12 ಚಿತಾಗಾರಗಳಲ್ಲಿ ದಿನಕ್ಕೆ ತಲಾ 16ರಂತೆ 192 ಶವಸಂಸ್ಕಾರ ಮಾಡಬಹುದು.
ಇನ್ನು ಕೊರೋನಾ ಸೋಂಕಿತರ ಅಂತ್ಯಸಂಸ್ಕಾರಕ್ಕೆಂದೇ 4 ಚಿತಾಗಾರಗಳನ್ನು ನಿಗದಿ ಮಾಡಲಾಗಿದೆ.
ಯಲಹಂಕ ವಲಯದಲ್ಲಿ ಮೇಡಿ ಅಗ್ರಹಾರ
ಬೊಮ್ಮನಹಳ್ಳಿ ವಲಯದಲ್ಲಿ ಕೊಡ್ಲು
ಆರ್.ಆರ್ ನಗರ ವಲಯದಲ್ಲಿ ಕೆಂಗೇರಿ
ಮಹದೇವಪುರ ವಲಯದಲ್ಲಿ ಪಣತ್ತೂರು ಚಿತಾಗಾರಗಳನ್ನು ಕೊರೋನಾದಿಂದ ಮೃತಪಟ್ಟವರ ಅಂತ್ಯಕ್ರಿಯೆಗೆ ಮೀಸಲಿಡಲಾಗಿದೆ.
ಬಿಬಿಎಂಪಿ ವೆಬ್ಸೈಟ್ ಮೂಲಕ ನೇರವಾಗಿ ಹತ್ತಿರದ ಚಿತಾಗಾರಗಳನ್ನು ಆನ್ಲೈನ್ ನಲ್ಲಿ ಬುಕ್ ಮಾಡಬಹುದು. ಅಲ್ಲದೆ ಬಿಬಿಎಂಪಿ ಸಹಾಯವಾಣಿ 08022660000 ಯಲ್ಲಿ ಮೃತರ ಮಾಹಿತಿ ನೀಡಿ ಬುಕ್ಕಿಂಗ್ ಮಾಡಬಹುದು.