Home ರಾಜ್ಯ ಬೆಂಗಳೂರಲ್ಲಿ ಟ್ರಾಫಿಕ್​ ಜಾಮ್​ ಆಗುವಷ್ಟು ಲಾಕ್​ಡೌನ್​ ಸಕ್ಸಸ್​..!

ಬೆಂಗಳೂರಲ್ಲಿ ಟ್ರಾಫಿಕ್​ ಜಾಮ್​ ಆಗುವಷ್ಟು ಲಾಕ್​ಡೌನ್​ ಸಕ್ಸಸ್​..!

ಬೆಂಗಳೂರು : ಹೆಡ್​​​ಲೈನ್​ ನೋಡಿ.. ಏನ್ರೀ ಇದು ಟ್ರಾಫಿಕ್​ ಜಾಮ್​​ ಅಂತೀರಿ, ಲಾಕ್​ಡೌನ್ ಸಕ್ಸಸ್ ಅಂತೀರಿ… ಯಾವ್ದುನ್ನ ನಂಬ್ಬೇಕು, ಯಾವ್ದನ್ನು ಬಿಡ್ಬೇಕು ಅಂತ ಕೇಳ್ತಿದ್ದೀರಾ..? ಇದು ನಮ್ಮ ಬೆಂಗಳೂರು ಲಾಕ್​ಡೌನ್ ರೀತಿ ರೀ…!

ಕೊರೋನಾ ಸೋಂಕು ನಿಯಂತ್ರಣಕ್ಕಾಗಿ ಜುಲೈ 15ರಿಂದ 7 ದಿನಗಳ ಲಾಕ್​ಡೌನ್ ಅನ್ನು ಸರ್ಕಾರ ಘೋಷಿಸಿತ್ತು… ಅದು ಬರೀ ಸುದ್ದಿಗಾಗಿ ಮಾತ್ರ ಅನ್ನುವಂತಾಗಿದೆ…! ಲಾಕ್​ಡೌನ್​ಗೂ ತಮಗೂ ಯಾವ್ದೇ ಸಂಬಂಧವಿಲ್ಲ ಅಂತ ಒಂದಿಷ್ಟು ಜನ ಮಾತ್ರ ತಮ್ಮ ಪಾಡಿಗೆ ತಾವು ಆರಾಮಾಗಿ ಸುತ್ತಾಡ್ಕೊಂಡ್ ಇದ್ದಾರೆ.. ಇವತ್ತು 6ನೇ ದಿನದ ಲಾಕ್​ಡೌನ್, ನಾಳೆ ಒಂದು ದಿನ ಬಾಕಿ ಇದೆ..! ಆರೂ ದಿನವೂ ಹೇಳಿಕೊಳ್ಳುವಂಥಾ ಮಟ್ಟಿಗೆ ಲಾಕ್​ಡೌನ್​ ಸಕ್ಸಸ್ ಆಗಿಲ್ಲ..! ಇವತ್ತಂತೂ ಯಾವಮಟ್ಟಿಗೆ ಸಕ್ಸಸ್ ಆಗಿದೆ ಅಂದ್ರೆ ಟ್ರಾಫಿಕ್ ಜಾಮ್ ಆಗುವಷ್ಟು..!

ಹೌದು 7 ದಿನದ ಲಾಕ್​ಡೌನ್ ಮೊದಲ ದಿನದಿಂದಲೂ ಸಕ್ಸಸ್ ಆಗಿದ್ದು ಅಷ್ಟಕಷ್ಟೇ.. ಇನ್ನೊಂದೆಡೆ ಕೊರೋನಾ ನಿಯಂತ್ರಣಕ್ಕೆ ಸಿಗ್ತಿಲ್ಲ. ಲಾಕ್​ಡೌನ್​ನ 6ನೇ ದಿನವಾದ ಇಂದು ಅನೇಕ ವಾಹನಗಳು ರಸ್ತೆಗಿಳಿದಿವೆ.  ಹೆಬ್ಬಾಳ ಸಿಗ್ನಲ್​ನಲ್ಲಿ ವಾಹನಗಳು ಸಾಲುಗಟ್ಟಿ ನಿಂತಿವೆ! ಸಾಲು ಸಾಲು ಬೈಕು, ಕಾರು ನೋಡಿ ಪೊಲೀಸರೇ ಶಾಕ್ ಆಗಿದ್ದಾರೆ! ಪ್ರತಿ ವಾಹನ ತಪಾಸಣೆ ಮಾಡೋಕೆ ಆಗ್ದೆ ಕೈಕಟ್ಟಿ ನಿಲ್ಲೋ ಪರಿಸ್ಥಿತಿ ಪೊಲೀಸರದ್ದಾಗಿದೆ!

ಕಟ್ಟುನಿಟ್ಟಿನ ಲಾಕ್​ಡೌನ್ ಜಾರಿಯಲ್ಲಿರುತ್ತೆ ಅಂತ ಸರ್ಕಾರ ಹೇಳಿತ್ತು.. ಇದೇನಾ ಕಟ್ಟುನಿಟ್ಟಿನ ಲಾಕ್​ಡೌನ್?

LEAVE A REPLY

Please enter your comment!
Please enter your name here

- Advertisment -

Most Popular

ಕರೋನಾ ಲಸಿಕೆ ಬಂದಿರುವುದು ಸಂತೋಷ : ಯು.ಟಿ.ಖಾದರ್

ಬೆಂಗಳೂರು: ಕೊರೋನಾ ಲಸಿಕೆ ವಿತರಣಾ ಹಿನ್ನಲೆಯಲ್ಲಿ ಕಾಂಗ್ರೆಸ್ ಶಾಸಕ ಯು.ಟಿ.ಖಾದರ್ ಖಾರವಾಗಿ ಟ್ವೀಟ್ ಮಾಡಿದ್ದಾರೆ. ಕೊರೊನಾ ಲಸಿಕೆ ಬಂದಿರುವುದು ಸಂತೋಷ. ಆದರೆ ಮೊದಲು ಗ್ರೂಪ್ ಡಿ ನೌಕರರ ಮೇಲೆ ಯಾಕೆ ಪ್ರಯೋಗ ಮಾಡಬೇಕು....

‘ರಾಜ್ಯದಲ್ಲಿ ಕೊರೋನಾ ಲಸಿಕೆ ವಿತರಣೆ’

ಕಲಬುರಗಿ: ಕಲಬುರಗಿಯಲ್ಲಿ ನಗರದ ಜಿಮ್ಸ್ ಕಾಲೇಜಿನಲ್ಲಿ ಸಂಸದ ಉಮೇಶ್ ಜಾಧವ್ ಕೊವಿಡ್ ವ್ಯಾಕ್ಸಿನ್ ಗೆ ಚಾಲನೆ ನೀಡಿದರು. ಜಿಲ್ಲೆಯ 8 ಆರೋಗ್ಯ ಕೇಂದ್ರಗಳಲ್ಲಿ ವ್ಯಾಕ್ಸಿನ್ ಗೆ ಚಾಲನೆ ನೀಡಲಾಯಿತು. ಒಂದು ಕೇಂದ್ರದಲ್ಲಿ 100...

‘ಡಿ ಗ್ರೂಪ್‌ ನೌಕರ ಚಂದ್ರಶೇಖರ್‌ಗೆ ಮೊದಲ ಲಸಿಕೆ ವಿತರಣೆ’

ಬೆಂಗಳೂರು: ರಾಜ್ಯದಲ್ಲಿ ಸಿಎಂ ಯಡಿಯೂರಪ್ಪ ಅವರು ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಲಸಿಕಾ ಅಭಿಯಾನಕ್ಕೆ ಅಧಿಕೃತವಾಗಿ ಚಾಲನೆ ನೀಡಿದ್ದಾರೆ. ವಿಕ್ಟೋರಿಯಾ ಆಸ್ಪತ್ರೆಯ ಅಟೆಂಡರ್ ನಾಗರತ್ನಾಗೆ ಲಸಿಕೆ ನೀಡಿ  ಹೂ ಗುಚ್ಛ ನೀಡಿ ಅಭಿನಂದಿಸಿದರು. ಜೊತೆ ಆರೋಗ್ಯ...

‘ಲಸಿಕೆ ವಿತರಣೆಗೆ ಚಾಲನೆ ಕೊಟ್ಟ ಪ್ರಧಾನಿ ಮೋದಿ’

ಬೆಂಗಳೂರು: ಜಗತ್ತಿನ ಅತಿ ದೊಡ್ಡ ಕೊವಿಡ್ ಲಸಿಕೆಗೆ ಪ್ರಧಾನಿ ನರೇಂದ್ರ ಮೋದಿ ವಿಡಿಯೋ ಕಾನ್ಪರೆನ್ಸ್ ಮೂಲಕ ಚಾಲನೆ ನೀಡಿದರು. ಅತಿ ಕಡಿಮೆ ದಿನದಲ್ಲಿ ಮಹಾಮಾರಿ ಕೊರೋನಾ ಗೆ ವಿಜ್ಞಾನಿಗಳು ಎರಡು ಲಸಿಕೆಯನ್ನು ಸಿದ್ಧ ಪಡಿಸಿದ್ದಾರೆ....

Recent Comments