ಬೆಂಗಳೂರು : ದಿನೇದಿನೆ ಕೊರೋನಾ ಸೋಂಕು ಹೆಚ್ಚುತ್ತಿರುವ ಹಿನ್ನೆಲೆ ನಾಳೆ ರಾತ್ರಿ 8ರಿಂದ ಲಾಕ್ಡೌನ್ ಜಾರಿಮಾಡಲಾಗಿದೆ. ಇನ್ನು ಇಲ್ಲಿ ಜೀವನ ಮಾಡೋದು ತುಂಬಾ ಕಷ್ಟ ಎಂದು ಹೆದರಿದ ಜನ ಸಾಗರೋಪಾದಿಯಲ್ಲಿ ಸ್ವಗ್ರಾಮಗಳತ್ತ ಹೊರಟಿದ್ದಾರೆ. ಮನೆ ಖಾಲಿ ಮಾಡಿಕೊಂಡು ಟಾಟಾ ಏಸ್, ಕ್ಯಾಂಟರ್ ವಾಹನಗಳಲ್ಲಿ ಲಗೇಜು ಸಮೇತ ತಮ್ಮ ತಮ್ಮ ಊರುಗಳತ್ತ ವಾಪಸ್ ಆಗುತ್ತಿದ್ದಾರೆ.
ಇನ್ನು ಕೆಎಸ್ಆರ್ಟಿಸಿ ಬಸ್ಗಳಿಲ್ಲದೇ ಊರಿನತ್ತ ಹೋಗಲು ಜನರು ಪರದಾಡಿದ ಘಟನೆಯು ಸಹ ನಡೆಯಿತು. ರಾಷ್ಟ್ರೀಯ ಹೆದ್ದಾರಿ 4ರ ನವಯುಗ ಟೋಲ್ ಬಳಿ ಜನರಿಂದ ಕಂಪ್ಲೀಟ್ ಟ್ರಾಫಿಕ್ ಜಾಮ್ ಆಗಿತ್ತು.