ಬೆಂಗಳೂರು: ರಾಜ್ಯದಲ್ಲಿ ಕೊರೋನಾ ಅಟ್ಟಹಾಸ ಮೆರೆಯುತ್ತಿದೆ. ಸಿಲಿಕಾನ್ ಸಿಟಿ ಬೆಂಗಳೂರಿನಲ್ಲೂ ಕೊರೋನಾ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದೆ. ಹಾಗಾಗಿ ಬೆಂಗಳೂರು ವಲಯವಾರು 38 ಹಾಟ್ಸ್ಪಾಟ್ಗಳಾಗಿ ಆದೇಶಿಸಲಾಗಿದೆ.
ಬೆಂಗಳೂರಿನ ಬೊಮ್ಮನಹಳ್ಳಿ ವಲಯದ ಸಿಂಗಸಂದ್ರ, ಬೇಗೂರು, ಮಹದೇವಪುರ ವಲಯದಲ್ಲಿ ಹಗದೂರು, ಗರುಡಾಚಾರ್ಪಾಳ್ಯ, ವರ್ತೂರು, ಹೊರಮಾವು, ಹೂಡಿ, ರಾಮಮೂರ್ತಿ ನಗರ. ಪೂರ್ವ ವಲಯದಲ್ಲಿ ವಸಂತನಗರ, ಗಂಗಾನಗರ, ಲಿಂಗರಾಜಪುರ, ಜೀವನ್ ಭೀಮಾನಗರ, ರಾಧಾಕೃಷ್ಣ ಟೆಂಪಲ್ ವಾರ್ಡ್, ಸಿ.ವಿ. ರಾಮನ್ ನಗರ, ರಾಮಸ್ವಾಮಿ ಪಾಳ್ಯ, ಮಾರುತಿ ಸೇವಾನಗರ, ಸಂಪಂಗಿರಾಮನಗರ ಸೇರಿ 6 ಹಾಟ್ಸ್ಪಾಟ್ಗಳಿವೆ. ಇನ್ನುಳಿದಂತೆ ಬೆಂಗಳೂರು ದಕ್ಷಿಣ ವಲಯದಲ್ಲಿ ಗಿರಿನಗರ, ಆಡುಗೋಡಿ, ಸದ್ದುಗುಂಟೆಪಾಳ್ಯ, ಶಾಕಾಂಬರಿನಗರ, ಜೆ.ಪಿ.ನಗರ, ಗುರಪ್ಪನಪಾಳ್ಯ, ಬಾಪೂಜಿನಗರ, ಹೊಸಹಳ್ಳಿ, ಸುಧಾಮನಗರ, ಮಡಿವಾಳ, ಅತ್ತಿಗುಪ್ಪೆ, ಕರಿಸಂದ್ರ ಸೇರಿ ಒಟ್ಟು 12 ವಾರ್ಡ್ಗಳು ಹಾಟ್ಸ್ಪಾಟ್ಗಳು ಇವೆ. ಇನ್ನುಳಿದಂತೆ ಪಶ್ವಿಮ ವಲಯದಲ್ಲಿ ಅರಮನೆನಗರ, ನಾಗರಭಾವಿ, ನಾಗಪುರ, ಶಿವನಗರ, ಅಜಾದ್ ನಗರ, ಜಗ್ ಜೀವನ್ ರಾಮನಗರ, ಸುಭಾಶ್ ನಗರ ಸೇರಿ 7 ವಾರ್ಡ್ಗಳು ಸೇರಿದಂತೆ ಯಲಹಂಕ ವಲಯದಲ್ಲಿ ಥಣಿಸಂದ್ರ ಹಾಗೂ ಬ್ಯಾಟರಾಯನಪುರವನ್ನು ಹಾಟ್ಸ್ಪಾಟ್ಗಳು ಎಂದು ಘೋಷಿಸಲಾಗಿದೆ. ಈ ಮೂಲಕ ಬೆಂಗಳೂರಿನಲ್ಲಿ ಒಟ್ಟು 38 ಏರಿಯಾಗಳನ್ನು ಹಾಟ್ಸ್ಪಾಟ್ಗಳು ಎಂದು ಆದೇಶಿಸಿದ್ದಾರೆ