Home ರಾಜ್ಯ ಬೆಂಗಳೂರು 12ನೇ ಟಿಸಿಎಸ್​ ಮ್ಯಾರಥಾನ್​​ - ಫಿಟ್ನೆಸ್​ ಸಂದೇಶ ಸಾರಿದ್ರು ಪವರ್​ಸ್ಟಾರ್​..!​​​​

12ನೇ ಟಿಸಿಎಸ್​ ಮ್ಯಾರಥಾನ್​​ – ಫಿಟ್ನೆಸ್​ ಸಂದೇಶ ಸಾರಿದ್ರು ಪವರ್​ಸ್ಟಾರ್​..!​​​​

ಬೆಂಗಳೂರು: ವಾರ ಪೂರ್ತಿ ಕೆಲಸ ಅಂತಾ ಬ್ಯುಸಿ ಇರುವ ಸಿಲಿಕಾನ್ ಸಿಟಿ ಮಂದಿ, ವೀಕೆಂಡ್​​ ಬಂತು ಅಂದ್ರೆ, ರಿಲ್ಯಾಕ್ಸ್ ಮೂಡಿಗೆ ಜಾರುತ್ತಾರೆ. ಸಿನೆಮಾ, ಶಾಪಿಂಗ್, ಅಂತ ಕಾಲ ಕಳೆಯುತ್ತಾರೆ, ಆದ್ರೆ ಈ ವೀಕೆಂಡನ್ನು ಬೆಂಗಳೂರಿನ ಜನ ಕೊಂಚ ಢಿಪರೆಂಟ್​ ಆಗಿ ಕಳೆದ್ರು.

ಇಂದು 12ನೇ ಆವೃತಿಯ ಟಿಸಿಎಸ್ ಮ್ಯಾರಥಾನ್ ನಡೆಯಿತು. ಟಾಟಾ ಕನ್ಸಲ್ಟೆನ್ಸಿ ಸರ್ವೀಸ್ ಕಳೆದ ಕಳೆದ ಹನ್ನೊಂದು ವರ್ಷದಿಂದ ಟಿಸಿಎಸ್ ವರ್ಲ್ಡ್ 10 ಕೆ ಮ್ಯಾರಥಾನ್ ಬೆಂಗಳೂರಿನಲ್ಲಿ ಆಯೋಜಿಸ್ತಾ ಬಂದಿದೆ. ಈ ಬಾರಿಯ ಮ್ಯಾರಥಾನ್​ನಲ್ಲಿ ಮಕ್ಕಳಿಂದ ಹಿಡಿದು ವೃದ್ಧರವರೆಗೂ ಎಲ್ಲರೂ ಭಾಗವಹಿಸಿ ಎಂಜಾಯ್ ಮಾಡಿದ್ರು. ಅಂತರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಂಡಿರುವ ಟಿಸಿಎಸ್ 10ಕೆ ಮ್ಯಾರಥಾನ್​​​ನ ಈ ಆವೃತ್ತಿಗೆ ಪವರ್​​ ಸ್ಟಾರ್ ಪುನೀತ್ ರಾಜ್ ಕುಮಾರ್ ಮತ್ತು ನಗರದ ಸಂಚಾರಿ ಆಯುಕ್ತರಾದ ಹರಿಶೇಖರನ್ ಚಾಲನೆ ನೀಡಿದರು. ಟ್ರ್ಯಾಕ್​​ನಲ್ಲಿ ಓಡಿದ ಪುನೀತ್ ರಾಜ್​​​ ಕುಮಾರ್​​ ಫಿಟ್ನೆಸ್ ಬಗ್ಗೆ ಸಂದೇಶ ಸಾರಿದ್ರು.

ವಯಸ್ಸಿನ ಅಂತರವನ್ನು ಮರೆತು ವೃದ್ಧರು ಯುವಕರನ್ನು ನಾಚಿಸುವಂತೆ ಭಾಗವಹಿಸಿದ್ದು ಮ್ಯಾರಥಾನ್​ಗೆ ಮತ್ತಷ್ಟು ರಂಗು ತುಂಬಿದ್ರು. ವಿಶೇಷಚೇತನರು, ತಾವು ಯಾರಿಗೂ ಕಮ್ಮಿ ಇಲ್ಲ ಎಂದು ಸ್ಪರ್ಧೆಯಲ್ಲಿ ಒಂದಾಗಿ, ಮನೋಶಕ್ತಿ ಎಲ್ಲದಕ್ಕಿಂತ ದೊಡ್ಡದು ಎಂದು ಸಾರಿದ್ರು. ಅಂತರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಂಡಿರುವ ಪ್ರೋ, ಕ್ಯಾಮ್ ಟಿಸಿಎಸ್​​​ನಲ್ಲಿ ಒಟ್ಟು 23 ಸಾವಿರ ಮಂದಿ ಓಡಿದ್ದಾರೆ. ಇನ್ನು ಮಹಿಳಾ ವರ್ಗದಲ್ಲಿ ಕೀನ್ಯಾದ, ಆಗ್ನೀಸ್ ಟರೋಪ್ ಪ್ರಥಮ ಸ್ಥಾನ ಪಡೆದಿದ್ರೆ, ಭಾರತದಿಂದ ಸಂಜೀವಿನಿ ಜಾಧವ್ ಟಾಪ್ 10ರಲ್ಲಿ ಜಾಗ ಗಿಟ್ಟಿಸಿಕೊಂಡಿದ್ದಾರೆ, ಪುರಷರ ವಿಭಾಗದಲ್ಲಿ ಇತೋಫಿಯಾದ ಅನ್ದಮ್ಲಾಕ್ ಪ್ರಥಮ ಸ್ಥಾನ ಪಡೆದಿದ್ದಾರೆ.

LEAVE A REPLY

Please enter your comment!
Please enter your name here

- Advertisment -

Most Popular

ದೇಶದಲ್ಲಿ  24 ಗಂಟೆಗಳಲ್ಲಿ 48,648 ಕೊರೋನಾ ಕೇಸ್ ಪತ್ತೆ!

ನವದೆಹಲಿ : ದೇಶದಲ್ಲಿ ಕಳೆದ 24 ಗಂಟೆಗಳಲ್ಲಿ 48,648 ಮಂದಿಯಲ್ಲಿ ಕೊರೋನಾ ಸೋಂಕು ಪತ್ತೆಯಾಗಿದೆ. ಇದರೊಂದಿಗೆ ಒಟ್ಟು ಸೋಂಕಿತರ ಸಂಖ್ಯೆ 80,88,851ಕ್ಕೆ ತಲುಪಿದೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ...

 ಸಿನಿಮೀಯ ರೀತಿಯಲ್ಲಿ ನಗರಸಭೆ ಸದಸ್ಯ ಕಿಡ್ನಾಪ್​!

ಕೊಪ್ಪಳ : ಸಿನಿಮೀಯ ರೀತಿಯಲ್ಲಿ ನಗರಸಭೆ ಸದಸ್ಯನನ್ನು ಕಿಡ್ನಾಪ್ ಮಾಡಲಾಗಿದೆ. ಕಿಡ್ನಾಪ್​ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಕೊಪ್ಪಳ ಜಿಲ್ಲೆಯ ಗಂಗಾವತಿಯಲ್ಲಿ ನವೆಂಬರ್ 2 ರಂದು ನಗರಸಭೆ ಚುನಾವಣೆ ನಡೆಯಲಿದ್ದು, ಗಂಗಾವತಿ ನಗರಸಭೆ ಕಾಂಗ್ರೆಸ್ ಸದಸ್ಯ...

ಅಲಹಬಾದ್​ ಹೈಕೋರ್ಟ್ ನಿಗಾದಲ್ಲಿ ಹತ್ರಾಸ್​ ಗ್ಯಾಂಗ್ ರೇಪ್​ ಕೇಸ್ ತನಿಖೆಗೆ ಸುಪ್ರೀಂ ಆದೇಶ

ನವದೆಹಲಿ : ಉತ್ತರ ಪ್ರದೇಶ ಹತ್ರಾಸ್​​​​ ಗ್ಯಾಂಗ್​ ರೇಪ್​​ ಪ್ರಕರಣದ ತನಿಖೆ ಅಲಹಬಾದ್​ ಹೈಕೋರ್ಟ್​ ನಿಗಾದಲ್ಲಿ ನಡೆಯಬೇಕೆಂದು ಸುಪ್ರೀಂ ಕೋರ್ಟ್​ ಆದೇಶಿಸಿದೆ. ಸದ್ಯ ಸಿಬಿಐ ಪ್ರಕರಣದ ತನಿಖೆಯನ್ನು ನಡೆಸುತ್ತಿದ್ದು, ತನಿಖಾ ತಂಡದಲ್ಲಿರುವ ಅಧಿಕಾರಿಗಳನ್ನು ರಾಜ್ಯದಿಂದ...

ಡಿ.ಬಾಸ್​​ಗಾಗಿ ಕನ್ನಡ ಕಲಿತ ಜಗಮಪತಿ ಬಾಬು..!

ಸಾಲ್ಟ್ ಅಂಡ್ ಪೆಪ್ಪರ್ ಲುಕ್​ನಲ್ಲಿ ಸೌತ್​ನಲ್ಲಿ ಸಂಚಲನ ಸೃಷ್ಠಿಸಿರೋ ಜಗಪತಿ ಬಾಬು, ಮತ್ತೊಂದು ನೂತನ ದಾಖಲೆ ಬರೆದಿದ್ದಾರೆ. ಅದೂ ಡಿ ಬಾಸ್ ದರ್ಶನ್​ಗಾಗಿ ಅನ್ನೋದು ವಿಶೇಷ. ಇಷ್ಟಕ್ಕೂ ಮೋಸ್ಡ್ ಡಿಮ್ಯಾಂಡಿಂಗ್ ಜಗಪತಿ ಬಾಬು...

Recent Comments