Home ರಾಜ್ಯ ``9 ಲಕ್ಷ ಕೊಡಿ ಹೆಣ ತಗೊಂಡ್ಹೋಗಿ''..!

“9 ಲಕ್ಷ ಕೊಡಿ ಹೆಣ ತಗೊಂಡ್ಹೋಗಿ”..!

 

ಬೆಂಗಳೂರು :  ಇದು ಒಂದೇ ಕುಟುಂಬದ ಸರಣಿ ಸಾವಿನ ಹೃದಯವಿದ್ರಾವಕ ಘಟನೆ. ಅದೆಂಥಾ ಕಲ್ಲು ಹೃದಯದವರನ್ನೂ ಕರಗಿಸುತ್ತೆ ದುರಂತ! ಗಂಡ, ಹೆಂಡ್ತಿ, ಮಗ ಕೆಲವೇ ಕೆಲವು ದಿನಗಳ ಅಂತರದಲ್ಲಿ ಮೃತಪಟ್ಟ ಕರುಣಾಜನಕ ಕಥೆಯಿದು. ಅಷ್ಟೇ ಅಲ್ಲದೆ ಸಾವಿನ ನೋವಲ್ಲೂ ಹಣಕ್ಕಾಗಿ ಮಾನವೀಯತೆ ಮರೆತ ಆಸ್ಪತ್ರೆ ಲಕ್ಷ ಲಕ್ಷ ಕೊಟ್ಟು  ಮೃತದೇಹ ತೆಗೆದುಕೊಂಡು ಹೋಗಿ ಅಂತಿರೋ ಅಮಾನವೀಯ ಘಟನೆಯ ಸುದ್ದಿ ಇದು.

ಹೌದು, ಅಫ್ರೋಜ ಅನ್ನೋ ಮಹಿಳೆ, ಆಕೆಯ ಗಂಡ ಹಾಗೂ ಮಗ ಒಟ್ಟೊಟ್ಟಿಗೇ ಮೃತಪಟ್ಟ ದುರಂತ ಬೆಂಗಳೂರಲ್ಲಿ ನಡೆದಿದೆ. ಜುಲೈ 13 ರಂದು 46 ವರ್ಷದ  ಅಫ್ರೋಜ ಅವರನ್ನು ಉಸಿರಾಟದ ಸಮಸ್ಯೆ ಹಿನ್ನೆಲೆಯಲ್ಲಿ ಮಣಿಪಾಲ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆಗ ಅವರಿಗೆ ಐಸಿಯುನಲ್ಲಿ ಚಿಕಿತ್ಸೆ ನೀಡ್ಬೇಕು ಅಂತ ಆಸ್ಪತ್ರೆ ವೈದ್ಯರು ಹೇಳಿದ್ರು. ಆ ಸುದ್ದಿ ಕೇಳಿ ಆಕೆಯ ಆಸ್ಪತ್ರೆಗೆ ದಾಖಲಿಸಲು ಬಂದಿದ್ದ ಪತಿ ಕಾರಿನಲ್ಲೇ  ಹೃದಯಾಘಾತದಿಂದ ಸಾವನ್ನಪ್ಪಿದ್ದರು. ಬಳಿಕ ತಂದೆಯ ಅಂತ್ಯಕ್ರಿಯೆ ಮುಗಿಸಿ ಬಂದ ಮಗ ಕೂಡ ಎರಡೇ ಎರಡು ದಿನದ ಬಳಿಕ ಹೃದಯಘಾತದಿಂದ ಮೃತಪಟ್ಟಿದ್ದಾರೆ. ಗಂಡ ಮತ್ತು ಮಗನ ಸಾವಿನ ಬೆನ್ನಲ್ಲೇ ಚಿಕಿತ್ಸೆ ಫಲಿಸದೆ ಅಫ್ರೋಜ ಕೂಡ ನಿನ್ನೆ ನಿಧನರಾಗಿದ್ದಾರೆ.

ಈ ಘಟನೆ ಅದೆಂಥವರ ಮನವನ್ನೂ ಕೂಡ ಕರಗಿಸುತ್ತೆ. ಆದ್ರೆ ಮಣಿಪಾಲ ಆಸ್ಪತ್ರೆಯವರು ಮಾತ್ರ ಮಾನವೀಯತೆಯೇ ಸತ್ತವರಂತೆ ವರ್ತಿಸುತ್ತಿದ್ದಾರೆ. ಮಹಿಳೆ ಮೃತದೇಹ ಕೊಡಲು ಕುಟುಂಬಕ್ಕೆ ಹಣ ನೀಡುವಂತೆ ಒತ್ತಾಯ ಮಾಡ್ತಿದ್ದಾರೆ. 9 ಲಕ್ಷ ರೂ ಬಿಲ್ ಕಟ್ಟಿ ಮೃತದೇಹ ತೆಗೆದುಕೊಂಡು ಹೋಗಿ ಅಂತ ಸಾವಿನಲ್ಲೂ ದುಡ್ಡಿಗಾಗಿ ಬಾಯ್ಬಿಡ್ತಿದ್ದಾರೆ. ಒಂದೇ ಸಲ ಅಷ್ಟೊಂದು ಹಣ ಕೊಡೋಕೆ ಆಗ್ತಿಲ್ಲ. ಹೀಗೆ ಸರಣಿ ಸಾವುಗಳಿಂದ ನಾವು ಕಂಗೆಟ್ಟಿದ್ದೇವೆ. ಖಂಡಿತಾ ನಿಮ್ಮ ಹಣವನ್ನು ಕೊಡ್ತೀವಿ ಈಗ ಮೃತದೇಹ ತೆಗೆದುಕೊಂಡು ಹೋಗಲು ಅವಕಾಶ ಕೊಡಿ ಅಂತ ಅಂಗಲಾಚಿದ್ರೂ ಆಸ್ಪತ್ರೆಯ ಯಾರೊಬ್ಬರೂ ಕೂಡ ಮಾನವೀಯ ನೆಲೆಗಟ್ಟಲ್ಲಿ ಯೋಚ್ನೆ ಮಾಡ್ತಿಲ್ಲ. ಬರೀ ಹಣ ಹಣ ಹಣ ಅಂತ ಸಾಯ್ತಿದ್ದಾರೆ.  ಹೀಗಾಗಿ ಅಫ್ರೋಜಾ ಮೃತದೇಹಕ್ಕಾಗಿ ಕುಟುಂ ಆಸ್ಪತ್ರೆ ಮುಂದೆ ನಿನ್ನೆಯಿಂದ ಕಾಯುತ್ತಿದೆ.

LEAVE A REPLY

Please enter your comment!
Please enter your name here

- Advertisment -

Most Popular

ನಿರಂತರ ಜ್ಯೋತಿ ಯೋಜನೆಯಲ್ಲಿ ಅವ್ಯವಹಾರ: ಕೆ.ಎಸ್. ಈಶ್ವರಪ್ಪ

ಶಿವಮೊಗ್ಗ: ಗ್ರಾಮೀಣ ಪ್ರದೇಶಗಳಲ್ಲಿ ಮನೆಗಳಿಗೆ ನಿರಂತರ ವಿದ್ಯುತ್ ಸಂಪರ್ಕ ಕಲ್ಪಿಸುವ ನಿರಂತರ ಜ್ಯೋತಿ ಯೋಜನೆ ಅನುಷ್ಠಾನದಲ್ಲಿ ಜಿಲ್ಲೆಯಲ್ಲಿ ಅವ್ಯವಹಾರ ನಡೆದಿರುವುದು ಮೇಲ್ನೋಟಕ್ಕೆ ಕಂಡು ಬಂದಿದ್ದು, ಈ ಕುರಿತು ಸೂಕ್ತ ಕ್ರಮ ಜರುಗಿಸಿ ಎಂದು...

‘ಪಿಬಿ ರಸ್ತೆ ಮೇಲ್ದರ್ಜೆಗೆ ಏರಿಸುವಂತೆ ಗಬ್ಬೂರು ಬೈಪಾಸ್ ಬಂದ್’

ಹುಬ್ಬಳ್ಳಿ: ಪುಣಾ-ಬೆಂಗಳೂರ ಬೈಪಾಸ್ ರಸ್ತೆಯು ಕಿರಿದಾಗಿದ್ದು, ಇದರಿಂದಾಗಿ ಪದೇ ಪದೇ ಅಪಘಾತಗಳು ಸಂಭವಿಸುತ್ತಿದ್ದು, ಕೂಡಲೇ ಈ ರಸ್ತೆಯನ್ನು ಮೇಲ್ದರ್ಜೆಗೆ ಏರಿಸಿ ಚತುಷ್ಪಥ ರಸ್ತೆಯಾಗಿ ಅಭಿವೃದ್ಧಿಪಡಿಸಬೇಕೆಂದು ಒತ್ತಾಯಿಸಿ ಕಾಂಗ್ರೆಸ್ ಕಾರ್ಯಕರ್ತರು ಗಬ್ಬೂರು ಬೈಪಾಸ್ ಗೆ...

ಜ. 26 ರಂದು ಪರ್ಯಾಯ ರೈತ ಗಣರಾಜ್ಯೋತ್ಸವ ಪರೆಡ್: ಶಾಂತಕುಮಾರ

ಹುಬ್ಬಳ್ಳಿ : ದೆಹಲಿ ರೈತರ ಹೋರಾಟ ಬೆಂಬಲಿಸಿ ಜ. 26 ರಂದು ರೈತರ ಪರ್ಯಾಯ ಗಣರಾಜ್ಯೋತ್ಸವ ಪರೆಡ್ ಹಮ್ಮಿಕೊಳ್ಳಲಾಗಿದೆ. ಅಂದು ಬೆಂಗಳೂರಿನಲ್ಲಿ ಟ್ರ್ಯಾಕ್ಟರ್ , ಮೋಟಾರ್ ಬೈಕ್ ರ್ಯಾಲಿ ಹಮ್ಮಿಕೊಳ್ಳಲಾಗಿದೆ ಎಂದು ರಾಜ್ಯ...

‘ಠಾಕ್ರೆ ಟ್ವೀಟ್ ಖಂಡಿಸಿ ವಾಟಾಳ್ ನಾಗರಾಜ್ ನೇತೃತ್ವದಲ್ಲಿ ಪ್ರತಿಭಟನೆ’

ಬೆಂಗಳೂರು: ಮಾಹಾರಾಷ್ಟ್ರ ಸಿಎಂ ಉದ್ದವ್ ಠಾಕ್ರೆ ಟ್ವೀಟ್ ಖಂಡಿಸಿ ಬೆಂಗಳೂರಿನಲ್ಲಿ ಪ್ರತಿಭಟನೆ ನಡೆಸಲಾಗುತ್ತಿದೆ. ಮೈಸೂರು ಬ್ಯಾಂಕ್ ಸರ್ಕಲ್ ಬಳಿ ವಾಟಾಳ್ ನಾಗರಾಜ್ ನೇತೃತ್ವದಲ್ಲಿ ಕನ್ನಡ ಪರ ಸಂಘಟನೆಗಳು ಧರಣಿ ನಡೆಸುತ್ತಿವೆ. ಉದ್ದವ್ ಠಾಕ್ರೆ ಭೂತದಹನ...

Recent Comments