ಬೆಂಗಳೂರು: ಪೌರತ್ವ ಕಾಯ್ದೆ ವಿರೋಧಿಸಿ ಮಂಗಳೂರಿನಲ್ಲಿ ನಿನ್ನೆ ಪ್ರತಿಭಟನೆ ಹಿಂಸಾರೂಪ ಪಡೆಯುತ್ತಿದ್ದಂತೆ, ಬೆಂಗಳೂರಿನಲ್ಲೂ ಪ್ರತಿಭಟನೆ ತೀವ್ರಗೊಳ್ಳುವ ಆತಂಕವಿತ್ತು. ಆದರೆ ಕೇಂದ್ರ ವಿಭಾಗದ ಡಿಸಿಪಿ ಚೇತನ್ ಸಿಂಗ್ ರಾಥೋರ್ ರಾಷ್ಟ್ರಗೀತೆ ಹಾಡಿ ಪ್ರತಿಭಟನಾಕಾರರ ಮನವೊಲಿಸಿ, ಪರಿಸ್ಥಿತಿ ತಿಳಿಗೊಳಿಸಿದ್ದು ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ.
ಪೌರತ್ವದ ಕಿಚ್ಚು ಎಲ್ಲೆಡೆ ಹೊತ್ತಿ ಉರಿಯುತ್ತಿದ್ದು, ಹಿಂಸಾತ್ಮಕ ರೂಪವನ್ನು ಪಡೆದುಕೊಂಡಿದೆ. ಬೆಂಗಳೂರಿನ ಟೌನ್ಹಾಲ್ನಲ್ಲಿಯೂ ಪ್ರತಿಭಟನೆ ನಡೆಯುತ್ತಿದೆ. ನಿನ್ನೆ ಆರಂಭದಿಂದ ಕೊನೆಯವರೆಗೂ ಡಿಸಿಪಿ ಚೇತನ್ ಸಿಂಗ್ ಸ್ಥಳದಲ್ಲೇ ಇದ್ದು, ಆಗಾಗ ಮುಖಂಡರ ಜೊತೆ ಮಾತಾಡುತ್ತಲೇ ಇದ್ದರು. ಅಷ್ಟೇಅಲ್ಲ ಪ್ರತಿಭಟನೆಯಲ್ಲಿ ಶಾಂತಿ ಕಾಪಾಡುವುದರ ಬಗ್ಗೆಯೂ ಸಲಹೆಯನ್ನು ನೀಡಿದ್ದರು. ಆದರೆ ಕಿಡಿಗೇಡಿಗಳು ಗಲಭೆ ಎಬ್ಬಿಸಲು ಪ್ರಯತ್ನಿಸಿದನ್ನು ಗಮನಿಸಿದ ಚೇತನ್ ಸಿಂಗ್, ನಮ್ಮ ನಡುವೆಯೇ ಕೆಲವೊಂದು ಕಿಡಿಗೇಡಿಗಳು ಇರುತ್ತಾರೆ. ಅವರು ಮಾಡುವ ಕೆಲಸಕ್ಕೆ ಎಲ್ಲರೂ ಪೆಟ್ಟು ತಿನ್ನುವ ಸಂದರ್ಭ ಎದುರಾಗುತ್ತದೆ. ಹಾಗಾಗಿ ನನ್ನ ಮೇಲೆ ನಂಬಿಕೆಯಿರುವ ದೇಶವಾಸಿಗಳೇ, ನನ್ನೊಂದಿಗೆ ನೀವು ನಿಲ್ಲಿ ಎಂದು ಹೇಳುತ್ತಾ ರಾಷ್ಟ್ರಗೀತೆ ಹಾಡುವ ಮೂಲಕ ಪ್ರತಿಭಟನಾಕಾರರನ್ನು ಸಂತೈಸಿದ್ದು ಶ್ಲಾಘನೀಯ.
The most beautiful thing that I saw or heard of recently!! Well said Shri Chetan Singh Rathore (DCP of Bengaluru, Central) & Hats off!
Video & News courtesy : ANI— Priyanka Shukla (@PriyankaJShukla) December 19, 2019