Home ರಾಜ್ಯ ಬೆಕ್ಕನ್ನು ಗುಂಡಿಕ್ಕಿ ಕೊಂದ ಪಾಪಿಗಳು..!

ಬೆಕ್ಕನ್ನು ಗುಂಡಿಕ್ಕಿ ಕೊಂದ ಪಾಪಿಗಳು..!

ಆನೇಕಲ್ : ನಮ್ಮ ನಡುವೆ ಎಂತೆಂಥಾ ಕ್ರೂರಿಗಳು, ಕೆಟ್ಟ ಮನಸ್ಥಿತಿಯ ಜನ ಇದ್ದಾರೆ..! ಮೂಕ ಪ್ರಾಣಿಗಳನ್ನೂ ಗುಂಡಿಕ್ಕಿ ಕೊಲ್ಲುವ ನೀಚರು ಇದ್ದಾರೆ ಅಂದ್ರೆ ನಿಜಕ್ಕೂ ಬಹಳ ಬೇಜಾರಾಗುತ್ತೆ..! ಇಂಥವ್ರು ನಮ್ಮ ನಡುವೆ ಇದ್ದಾರಲ್ಲಾ ಅಂತ ಅಸಹ್ಯ ಅನ್ಸುತ್ತೆ! 

ಶನಿವಾರ ತಡರಾತ್ರಿ ಬೆಂಗಳೂರು ಕೂಗಳತೆ ದೂರದ ಸರ್ಜಾಪುರದಲ್ಲಿ ಯಾರೋ ಕಿರಾತಕರು ಬೆಕ್ಕಿನ ಮೇಲೆ ಗುಂಡು ಹಾರಿಸಿ ಧಾರುವಾಗಿ ಕೊಂದಿದ್ದಾರೆ. ಸರ್ಜಾಪುರದ ವಿಲ್ಲಾವೊಂದರ ನಿವಾಸಿ ಶೀಲಾ ಎಂಬುವವರು ಸಾಕಿಕೊಂಡಿದ್ದ ಬೆಕ್ಕು ಇದಾಗಿದೆ. 

ತಡರಾತ್ರಿ ದುಷ್ಕರ್ಮಿಗಳು ಬೆಕ್ಕಿನ ಮೇಲೆ ಫೈರಿಂಗ್ ನಡೆಸಿದ್ದು, ಬೆಳಗಿನ ಜಾವ ಬೆಕ್ಕಿನ ಮಾಲೀಕರು ಬಂದು ನೋಡಿದಾಗ ಬೆಕ್ಕಿಗೆ ಗುಂಡು ಹಾರಿಸಿ ಹತ್ಯೆ ಮಾಡಿರುವುದು ಬೆಳಕಿಗೆ ಬಂದಿದ್ದು,  ಕೃತ್ಯಕ್ಕೆ ಡಬ್ಬಲ್ ಬ್ಯಾರಲ್ ಗನ್ ಬಳಸಿರಬಹುದು ಎನ್ನಲಾಗಿದೆ.

 ಶೀಲಾ ಅವರಿಗೆ ನಾಯಿ ಹಾಗೂ ಬೆಕ್ಕುಗಳು ಅಂದ್ರೆ ಪಂಚಪ್ರಾಣ ಅದಕ್ಕಾಗಿಯೇ ಮನೆಯಲ್ಲಿ ಪ್ರೀತಿಯಿಂದ ನಾಯಿ ಹಾಗೂ ಬೆಕ್ಕುಗಳನ್ನು ಸಾಕಿಕೊಂಡಿದ್ದರು. ಆದ್ರೆ ಇಂದು ಮುಂಜಾನೆ ಸಾಕಿದ್ದ ಮುದ್ದಾದ ಬೆಕ್ಕಿಗೆ ಈ ರೀತಿ‌ ಗುಂಡಿಕ್ಕಿ ಹತ್ಯೆ ಮಾಡಿರುವುದು ಅವರ ಮನಸ್ಸು ಘಾಸಿಗೊಳಿಸಿದೆ. ಈ ಘಟನೆ ಸಂಬಂಧ ಮಹಿಳೆ ನ್ಯಾಯಕ್ಕಾಗಿ‌ ಸರ್ಜಾಪುರ ಪೋಲಿಸ್ ಠಾಣೆಯಲ್ಲಿ ದೂರು ದಾಖಲಿಸಲು ಮುಂದಾಗಿದ್ದಾರೆ. 

LEAVE A REPLY

Please enter your comment!
Please enter your name here

- Advertisment -

Most Popular

5 ವರ್ಷದ ಬಾಲಕಿ ಕಾಣೆ

ಬೆಂಗಳೂರು : ನಗರದ ಮೆಜೆಸ್ಟಿಕ್ ಬಸ್ ನಿಲ್ದಾಣದಲ್ಲಿ 5 ವರ್ಷದ ಬಾಲಕಿ ಕಾಣೆಯಾಗಿದ್ದಾಳೆ. ಲೋಕಿತ ಕೆ.ಮರನ್ ಕಾಣೆಯಾಗಿರುವ ಬಾಲಕಿ‌. ಈಕೆ ತನ್ನ ತಾತನ ಜೊತೆ ಸೆ.18 ರಂದು ಮನೆಯಿಂದ ತೆರಳಿದ್ದಳು. ಮೆಜೆಸ್ಟಿಕ್ ನಿಲ್ದಾಣದಲ್ಲಿ...

ಅಕ್ಕ ಗೌರಿ ಲಂಕೇಶ್​ರನ್ನು ನೆನೆದು ಕಣ್ಣೀರಿಟ್ಟ ಇಂದ್ರಜಿತ್ ಲಂಕೇಶ್..!

ಬೆಂಗಳೂರು : ಸ್ಯಾಂಡಲ್​​ವುಡ್​ ಡ್ರಗ್ಸ್​ ಮಾಫಿಯಾ ವಿಚಾರಕ್ಕೆ ಸಂಬಂಧಿಸಿದಂತೆ ಸೋಮವಾರ ಸಿಸಿಬಿ ವಿಚಾರಣೆ ಎದುರಿಸಿದ್ದ ನಿರ್ದೇಶಕ ಇಂದ್ರಜಿತ್ ಲಂಕೇಶ್ ಇಂದು ಮತ್ತೊಮ್ಮೆ ಸಿಸಿಬಿ ಅಧಿಕಾರಿಗಳ ಮುಂದೆ ಹಾಜರಾಗುತ್ತಿದ್ದಾರೆ.  ಇಂದು ಸಿಸಿಬಿ ವಿಚಾರಣೆಗೆ ಹೋಗುವ...

ಸ್ಯಾಂಡಲ್​​ವುಡ್​​​​​ನಲ್ಲಿ ಡ್ರಗ್​ ಮಾಫಿಯಾ : ಇಂದು ಸಿಸಿಬಿಯಿಂದ ನಟಿ ರಾಗಿಣಿ ವಿಚಾರಣೆ

ಬೆಂಗಳೂರು :  ಸ್ಯಾಂಡಲ್​​​​ವುಡ್​​ನಲ್ಲಿ ಡ್ರಗ್​​ ಮಾಫಿಯಾದ ಬಗ್ಗೆ ಬಿಸಿಬಿಸಿ ಚರ್ಚೆ ನಡೀತಾ ಇದೆ. ಚಂದನವನಕ್ಕೆ ಮಾದಕ ಜಾಲ ಹಬ್ಬಿದೆಯೇ ಅಥವಾ ಇಲ್ಲವೇ ಅನ್ನೋದು ಸದ್ಯದ ಗಾಂಧಿನಗರದ ಹಾಟ್ ಸುದ್ದಿ. ಇದಕ್ಕೆ ಸಂಬಂಧಿಸಿದಂತೆ ನಟಿ ರಾಗಿಣಿ...

ಕೊರೋನಾದಿಂದ ಮಾಜಿ ಶಾಸಕ ಅಪ್ಪಾಜಿ ಗೌಡ ನಿಧನ

ಶಿವಮೊಗ್ಗ : ಭದ್ರಾವತಿಯ ಜೆಡಿಎಸ್ ನ ಮಾಜಿ ಶಾಸಕ ಅಪ್ಪಾಜಿಗೌಡ ವಿಧಿವಶರಾಗಿದ್ದಾರೆ. ಕಳೆದ ಕೆಲ ದಿನಗಳಿಂದ ಕೊರೋನಾ ಸೋಂಕಿಗೆ ಒಳಗಾಗಿದ್ದ ಅವರು,  ಚಿಕಿತ್ಸೆ ಫಲಕಾರಿಯಾಗದೆ ನಿಧನರಾಗಿದ್ದಾರೆ. ಅಪ್ಪಾಜಿಗೌಡರಿಗೆ 69 ವರ್ಷ ವಯಸ್ಸಾಗಿತ್ತು. ಪತ್ನಿ...

Recent Comments