Home uncategorized ಪತ್ನಿ ನಿಧನದಿಂದ ನೊಂದು ಪತಿ ಆತ್ಮಹತ್ಯೆ..!

ಪತ್ನಿ ನಿಧನದಿಂದ ನೊಂದು ಪತಿ ಆತ್ಮಹತ್ಯೆ..!

ಬಳ್ಳಾರಿ : ಅನಾರೋಗ್ಯದಿಂದ ಪತ್ನಿ ನಿಧನ ಹೊಂದಿದ್ದಕ್ಕೆ  ನೊಂದು ತನ್ನಿಬ್ಬರ ಮಕ್ಕಳೊಂದಿಗೆ  ಕಾಲುವೆಗೆ ಹಾರಿ ಮೃತಪಟ್ಟಿದ್ದಾರೆ. 

ಈ ಹೃದಯವಿದ್ರಾವಕ ಘಟನೆ ಗಣಿನಾಡು ಬಳ್ಳಾರಿಯ ಹಲಕುಂದಿ ಗ್ರಾಮದ ಬಳಿಯ‌ ಮುಂಡರಗಿ ಡ್ರಾಫ್ ನ ಹೆಚ್ ಎಲ್ ಸಿ ಕೆನಾಲಿನಲ್ಲಿ (ಕಾಲುವೆಯಲ್ಲಿ) ಗುರುವಾರ ಮಧ್ಯಾಹ್ನ 3ರ ಸುಮಾರಿಗೆ ನಡೆದಿದೆ.

ಬೆಂಗಳೂರು ರಸ್ತೆಯಲ್ಲಿರುವ ಕಬರ್​ಸ್ತಾನ ಎದುರಿನ ಪೆಟ್ರೋಲ್ ಬಂಕ್ ನಲ್ಲಿ ಮ್ಯಾನೇಜರ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದ ಗಣೇಶ ಅಚಾರಿ ಎಂಬುವರು ನಿನ್ನೆ ಮಧ್ಯಾಹ್ನ ಹಲಕುಂದಿಯಿಂದ ಹೆಚ್ ಎಲ್ ಸಿ ಉಪಕಾಲುವೆ ಬಳಿ ಹೋಗಿ ತನ್ನಿಬ್ಬರು ಮಕ್ಕಳೊಡನೆ ಆ ಕೆನಾಲಿಗೆ ಹಾರಿದ್ದಾರೆ.

12 ವರ್ಷದ ಸ್ಫೂರ್ತಿ ಕಾಲುವೆ ನೀರಿನಲ್ಲಿ ಕೊಚ್ಚಿ ಹೋಗಿ ಸಾವನ್ನಪ್ಪಿದ್ರೆ, 15 ವರ್ಷದ ಕೀರ್ತನಾ  ಸಾವು – ಬದುಕಿನ ಮಧ್ಯೆ ಹೋರಾಡುತ್ತಿರುವುದನ್ನು ಗಮನಿಸಿದ ಗೃಹರಕ್ಷಕ ದಳದ ಸಿಬ್ಬಂದಿ ಸುದರ್ಶನ ಮತ್ತವರ ತಂಡ ಆ ಬಾಲಕಿಯನ್ನ ರಕ್ಷಿಸಿದ್ದಾರೆ.

ಗಣೇಶ ಆಚಾರಿ ಅವರ ಮೃತದೇಹವನ್ನ ಹುಡುಕಾಟ ನಡೆಸಲಾಗುತ್ತಿದೆ.  ಬದುಕುಳಿದ ಬಾಲಕಿ ಕೀರ್ತನಾಳನ್ನು ಹಲಕುಂದಿ ಗ್ರಾಮದ ಸಂಬಂಧಿಕರ‌‌‌ ಮನೆಯಲ್ಲಿ ಇರಿಸಲಾಗಿದೆ.  ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

LEAVE A REPLY

Please enter your comment!
Please enter your name here

- Advertisment -

Most Popular

5 ವರ್ಷದ ಬಾಲಕಿ ಕಾಣೆ

ಬೆಂಗಳೂರು : ನಗರದ ಮೆಜೆಸ್ಟಿಕ್ ಬಸ್ ನಿಲ್ದಾಣದಲ್ಲಿ 5 ವರ್ಷದ ಬಾಲಕಿ ಕಾಣೆಯಾಗಿದ್ದಾಳೆ. ಲೋಕಿತ ಕೆ.ಮರನ್ ಕಾಣೆಯಾಗಿರುವ ಬಾಲಕಿ‌. ಈಕೆ ತನ್ನ ತಾತನ ಜೊತೆ ಸೆ.18 ರಂದು ಮನೆಯಿಂದ ತೆರಳಿದ್ದಳು. ಮೆಜೆಸ್ಟಿಕ್ ನಿಲ್ದಾಣದಲ್ಲಿ...

ಅಕ್ಕ ಗೌರಿ ಲಂಕೇಶ್​ರನ್ನು ನೆನೆದು ಕಣ್ಣೀರಿಟ್ಟ ಇಂದ್ರಜಿತ್ ಲಂಕೇಶ್..!

ಬೆಂಗಳೂರು : ಸ್ಯಾಂಡಲ್​​ವುಡ್​ ಡ್ರಗ್ಸ್​ ಮಾಫಿಯಾ ವಿಚಾರಕ್ಕೆ ಸಂಬಂಧಿಸಿದಂತೆ ಸೋಮವಾರ ಸಿಸಿಬಿ ವಿಚಾರಣೆ ಎದುರಿಸಿದ್ದ ನಿರ್ದೇಶಕ ಇಂದ್ರಜಿತ್ ಲಂಕೇಶ್ ಇಂದು ಮತ್ತೊಮ್ಮೆ ಸಿಸಿಬಿ ಅಧಿಕಾರಿಗಳ ಮುಂದೆ ಹಾಜರಾಗುತ್ತಿದ್ದಾರೆ.  ಇಂದು ಸಿಸಿಬಿ ವಿಚಾರಣೆಗೆ ಹೋಗುವ...

ಸ್ಯಾಂಡಲ್​​ವುಡ್​​​​​ನಲ್ಲಿ ಡ್ರಗ್​ ಮಾಫಿಯಾ : ಇಂದು ಸಿಸಿಬಿಯಿಂದ ನಟಿ ರಾಗಿಣಿ ವಿಚಾರಣೆ

ಬೆಂಗಳೂರು :  ಸ್ಯಾಂಡಲ್​​​​ವುಡ್​​ನಲ್ಲಿ ಡ್ರಗ್​​ ಮಾಫಿಯಾದ ಬಗ್ಗೆ ಬಿಸಿಬಿಸಿ ಚರ್ಚೆ ನಡೀತಾ ಇದೆ. ಚಂದನವನಕ್ಕೆ ಮಾದಕ ಜಾಲ ಹಬ್ಬಿದೆಯೇ ಅಥವಾ ಇಲ್ಲವೇ ಅನ್ನೋದು ಸದ್ಯದ ಗಾಂಧಿನಗರದ ಹಾಟ್ ಸುದ್ದಿ. ಇದಕ್ಕೆ ಸಂಬಂಧಿಸಿದಂತೆ ನಟಿ ರಾಗಿಣಿ...

ಕೊರೋನಾದಿಂದ ಮಾಜಿ ಶಾಸಕ ಅಪ್ಪಾಜಿ ಗೌಡ ನಿಧನ

ಶಿವಮೊಗ್ಗ : ಭದ್ರಾವತಿಯ ಜೆಡಿಎಸ್ ನ ಮಾಜಿ ಶಾಸಕ ಅಪ್ಪಾಜಿಗೌಡ ವಿಧಿವಶರಾಗಿದ್ದಾರೆ. ಕಳೆದ ಕೆಲ ದಿನಗಳಿಂದ ಕೊರೋನಾ ಸೋಂಕಿಗೆ ಒಳಗಾಗಿದ್ದ ಅವರು,  ಚಿಕಿತ್ಸೆ ಫಲಕಾರಿಯಾಗದೆ ನಿಧನರಾಗಿದ್ದಾರೆ. ಅಪ್ಪಾಜಿಗೌಡರಿಗೆ 69 ವರ್ಷ ವಯಸ್ಸಾಗಿತ್ತು. ಪತ್ನಿ...

Recent Comments