Home ರಾಜ್ಯ ಕಂಡಕ್ಟರ್ ಹೊಟ್ಟೆಗೆ ಚುಚ್ಚಿದ ಕಬ್ಬಿಣದ ರಾಡುಗಳು..!

ಕಂಡಕ್ಟರ್ ಹೊಟ್ಟೆಗೆ ಚುಚ್ಚಿದ ಕಬ್ಬಿಣದ ರಾಡುಗಳು..!

ಬಳ್ಳಾರಿ : ಬೆಳ್ಳಂಬೆಳ್ಳಗ್ಗೆ ಬಸ್ಸು – ಲಾರಿ ನಡುವೆ  ಭೀಕರ ಅಪಘಾತ ಸಂಭವಿಸಿದೆ. ಅಪಘಾತದಲ್ಲಿ ಕಂಡಕ್ಟರ್​​ ಹೊಟ್ಟೆಗೆ ಕಬ್ಬಿಣದ ರಾಡುಗಳು ಚುಚ್ಚಿಕೊಂಡಿದ್ದು, ಸಾವು-ಬದುಕಿನ ನಡುವೆ ಹೋರಾಡುತ್ತಿದ್ದಾರೆ. 

ರಾಡುಗಳನ್ನು ಗ್ಯಾಸ್ ಕಟ್ಟರ್ ಮೂಲಕ ಎರಡು ಗಂಟೆಗಳ ಕಾಲ ಶ್ರಮವಹಿಸಿ ತೆಗೆಯಲಾಗಿದೆ. ಕಂಡಕ್ಟರ್ ಸ್ಥಿತಿ ಚಿಂತಾಜನಕವಾಗಿದ್ದು ಹೆಚ್ಚಿನ ಚಿಕಿತ್ಸೆಗೆ ಬಳ್ಳಾರಿ ವಿಮ್ಸ್ ಗೆ ರವಾನಿಸಲಾಗಿದೆ.

ಬೆಳಗಿನ ಜಾವ ನಿಂತಿದ್ದ ಲಾರಿಗೆ ಕೆ ಎಸ್​​ ಆರ್​ ಟಿ ಸಿ ಡಿಕ್ಕಿ ಹೊಡೆದಿದೆ. ಕುಷ್ಠಗಿ ವಿಭಾಗದ ಬಸ್ಸು ಕುಷ್ಠಗಿಯಿಂದ ಬೆಂಗಳೂರಿಗೆ ಹೋಗುತ್ತಿದ್ದಾಗ ಘಟನೆ ಸಂಭವಿಸಿದೆ. ಹೆದ್ದಾರಿ 50ರಲ್ಲಿ ಘಟನೆ ಸಂಭವಿಸಿದ್ದು ಕೂಡ್ಲಿಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ

-ಅರುಣ್ ನವಲಿ

LEAVE A REPLY

Please enter your comment!
Please enter your name here

- Advertisment -

Most Popular

‘ನಾನೇ ಸಭಾಪತಿ ಎಂದ ಮಾಜಿ ಸಭಾಪತಿ ಬಸವರಾಜ ಹೊರಟ್ಟಿ’

ಹುಬ್ಬಳ್ಳಿ: ಜೆಡಿಎಸ್ ನಿಂದ ನಾನೇ ಸಭಾಪತಿ ಅಭ್ಯರ್ಥಿ. ಬಿಜೆಪಿ ಉಪಸಭಾಪತಿಗೆ ಸ್ಪರ್ದೆ ಮಾಡಿದ್ರೆ ನಾನೇ ಸಭಾಪತಿ ಆಗುವೆ ಎಂದು ವಿಧಾನ ಪರಿಷತ್  ಸದಸ್ಯ ಬಸವರಾಜ ಹೊರಟ್ಟಿ ವಿಶ್ವಾಸ ವ್ಯಕ್ತಪಡಿಸಿದರು. ನಗರದಲ್ಲಿಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು,...

ಕೆಎಲ್ ಇ ಸಂಸ್ಥೆಗೆ ನೀಡಿದ ಭೂಮಿ ಮರಳಿ ಪಡೆಯುಲ್ಲ: ಬಸವರಾಜ್ ಹೊರಟ್ಟಿ

ಹುಬ್ಬಳ್ಳಿ: ಮೂರು ಸಾವಿರಮಠದ ಆಸ್ತಿ ವಿವಾದ ಕುರಿತಂತೆ ಉನ್ನತ ಸಮಿತಿ ವಿರುದ್ದ ಆಕ್ರೋಶ ವ್ಯಕ್ತಪಡಿಸಿದ್ದ ದಿಂಗಾಲೇಶ್ವರ ಶ್ರೀಗಳ ವಿರುದ್ದ ವಿಧಾನ ಪರಿಷತ್ ಸದಸ್ಯ ಬಸವರಾಜ್ ಹೊರಟ್ಟಿ ಕಿಡಿಕಾರಿದರು. ನಗರದಲ್ಲಿಂದು ಮಾತನಾಡಿದ ಅವರು, ನಾನು ಮಠದ...

ಪಂಜರದ ಗಿಣಿಗೆ ಇಂದು ಬಿಡುಗಡೆ ಭಾಗ್ಯ..!

ಬೆಂಗಳೂರು: ಡ್ರಗ್ಸ್ ಕೇಸ್ ನಲ್ಲಿ ನಟಿ ರಾಗಿಣಿ ಅರೆಸ್ಟ್ ಆಗಿದ್ದರು, ಆದರೆ ಬೆಲ್ ಸಿಕ್ಕೂ ನಾಲ್ಕು ದಿನ ಆದರೂ ಇಂದು ಸಂಜೆ ನಟಿ ರಾಗಿಣಿ ದ್ವಿವೇದಿ ಪರಪ್ಪನ ಅಗ್ರಹಾರ ಜೈಲಿನಿಂದ ಸಂಜೆ ಬಿಡುಗಡೆಯಾಗಲಿದ್ದಾರೆ. ನಟಿ...

ಯಾವ ಸರ್ಕಾರವೂ ರೈತರಿಗೆ ತೊಂದರೆ ಕೊಡುವ ಕೆಲಸ ಮಾಡಲ್ಲ: ಜಗದೀಶ್ ಶೆಟ್ಟರ್

ಹುಬ್ಬಳ್ಳಿ: ಕೃಷಿ ಕಾಯ್ದೆ ಪ್ರಯೋಗ ಆಗಲಿ. ಒಂದೆರೆಡು ವರ್ಷ ಪ್ರಯೋಗ ಆಗಲಿ. ಆಗ ರೈತರಿಗೆ ತೊಂದರೆಯಾದರೆ ವಾಪಸ್ ಪಡೆಯೋಕೆ ತಯರಾಗುತ್ತಾರೆ. ಯಾವ ಸರ್ಕಾವೂ ರೈತರಿಗೆ ತೊಂದರೆ ನೀಡುವ ಕೆಲಸ ಮಾಡಲ್ಲ ಎಂದು ಬೃಹತ್ ಕೈಗಾರಿಕೆ...

Recent Comments