ಪ್ರತ್ಯೇಕ ಅಪಘಾತ : ಐವರು ದುರ್ಮರಣ

0
192

ಬೆಳಗಾವಿ, ಮೈಸೂರು : ಪ್ರತ್ಯೇಕ ಅಪಘಾತದಲ್ಲಿ ಐವರು ದುರ್ಮರಣವನ್ನು ಹೊಂದಿರುವ ಘಟನೆ ಬೆಳಗಾವಿ ಮತ್ತು ಮೈಸೂರಿನಲ್ಲಿ ನಡೆದಿದೆ.
ಬೆಳಗಾವಿಯ ಅಥಣಿ ತಾಲೂಕಿನ ತೆಲಸಂಗ ಬಳಿ ಚಾಲಕನ ನಿಯಂತ್ರಣ ತಪ್ಪಿ ದ್ರಾಕ್ಷಿ ಸಾಗಿಸುತ್ತಿದ್ದ ವಾಹನ ಪಲ್ಟಿ ಹೊಡೆದು ಮೂವರು ಅಸುನೀಗಿದ್ದಾರೆ. ಸುವರ್ಣ (40). ಮಾದೇವಿ (30), ರಾಜು (28) ಮೃತ ದುರ್ದೈವಿಗಳು. ಐವರಿಗೆ ಗಂಭೀರ ಗಾಯಗಳಾಗಿದ್ದು, ಆಸ್ಪತ್ರೆಗೆ ದಾಖಲಾಗಿದ್ದಾರೆ. ಐಗಳಿ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇನ್ನು ಮೈಸೂರಿನ ಮಳವಳ್ಳಿ ಮುಖ್ಯರಸ್ತೆಯಲ್ಲಿ ಕಾರು, ಆಟೋ, ಸ್ಕೂಟರ್​ ನಡುವೆ ಸಂಭವಿಸಿದ ಸರಣಿ ಅಪಘಾತದಲ್ಲಿ ಇಬ್ಬರು ಮೃತಪಟ್ಟಿದ್ದು, ಇಬ್ಬರಿಗೆ ಗಾಯಗಳಾಗಿವೆ. ಆಟೋ ಡ್ರೈವರ್​, ಮಳವಳ್ಳಿ ನಿವಾಸಿ ಅಪ್ಜರ್ ಪಾಷಾ (38), ಸ್ಕೂಟರ್ ಸವಾರ, ಅಗ್ರಹಾರ ನಿವಾಸಿ ತಿಮ್ಮಯ್ಯ (66) ಮೃತರು. ವರುಣಾ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

 

LEAVE A REPLY

Please enter your comment!
Please enter your name here