ಬೆಂಗಳೂರು: ಕಿಲ್ಲರ್ ಕೊರೋನಾ ಹಿನ್ನಲೆಯಲ್ಲಿ ಹೊಸ ವರ್ಷಾಚರಣೆಗೆ ಸರ್ಕಾರ ಟಫ್ ರೂಲ್ಸ್ ಜಾರಿ ಮಾಡಿದೆ. ಹೊಸ ವರ್ಷಾಚರಣೆಗೆ ಮನೆಯಿಂದ ಹೊರ ಬರುವ ಮುನ್ನ ಎಚ್ಚರ ವಹಿಸಿ. ಸಾರ್ವಜನಿಕವಾಗಿ ಪಾರ್ಟಿ ಮಾಡುವಂತಿಲ್ಲ. ಮೈಸೂರು ಕೂರ್ಗ್ ನಲ್ಲಿ ಪಾರ್ಟಿ ಮಾಡುವುದಕ್ಕೆ ನಿಷೇಧ ಹೇರಲಾಗಿದೆ. ಕೊವಿಡ್ ಮಧ್ಯ ಜನರು ಒಂದೇ ಕಡೆ ಸೇರಿ ಪಾರ್ಟಿ ಮಾಡುವಂತಿಲ್ಲ. ಡಿಜೆ ಇಟ್ಟುಕೊಂಡು ಪಾರ್ಟಿ ಮಾಡುವಂತಿಲ್ಲ. ರಾಜ್ಯದೆಲ್ಲೆಡೆ ಪೊಲೀಸರು ಹದ್ದಿನ ಕಣ್ಣು ಇಟ್ಟಿದ್ದಾರೆ ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ಎಂಜಿ ರೋಡ್, ಬ್ರಿಗೇಡ್ ರೋಡ್ ಮತ್ತು ಕೊರಮಂಗಲ ಮತ್ತು ಹೆಚ್ಚು ಜನರು ಸೇರುವ ಇತರೆ ಪ್ರದೇಶಗಳಲ್ಲಿ ಕಟ್ಟು ನಿಟ್ಟಿನ ಕ್ರಮ ಕೈಗೊಳ್ಳಲಾಗುವುದು. ಮತ್ತು ಆಯಾ ವಿಭಾಗದ ಜವಾಬ್ದಾರಿಯನ್ನು ಆಯಾ ವಿಭಾಗದ ಡಿಸಿಪಿಗಳಿಗೆ ವಹಿಸಲಾಗಿದೆ ಎಂದರು.