ಎಂಥವರ ಎದೆಯೂ ಝಲ್ಲೆನ್ನುವ ಭೀಕರ ದೃಶ್ಯ..!

0
424

ಹಾಸನ: ರಸ್ತೆ ದಾಟುವಾಗ ಅಪಘಾತಗಳಾಗುವ ಕುರಿತು ವರದಿಯಾಗುತ್ತಲೇ ಇರುತ್ತದೆ. ಎಷ್ಟೇ ಎಚ್ಚರಿಕೆ ನೀಡಿದರೂ, ಸೂಚನಾ ಫಲಕಗಳಿದ್ದರೂ ರಸ್ತೆ ದಾಟುವಾಗ ತೋರುವ ನಿರ್ಲಕ್ಷ್ಯದಿಂದ ಆಗುವ ಪರಿಣಾಮ ಮಾತ್ರ ಗಂಭೀರವಾಗಿರುತ್ತದೆ. ರಸ್ತೆ ದಾಟುವಾಗ ಬಾಲಕಿಯೊಬ್ಬಳಿಗೆ ಬೈಕ್​ ಡಿಕ್ಕಿಯಾಗಿರುವ ಘಟನೆ ಹಾಸನದ ಹೊರವಲಯದಲ್ಲಿ ನಡೆದಿದೆ. ಆರಾಧನಾ ವಿದ್ಯಾ ಸಂಸ್ಥೆಯಲ್ಲಿ ಒಂದನೇ ತರಗತಿ ಓದುತ್ತಿರುವ ಗಾನವಿ ತಾಯಿಯೊಂದಿಗೆ ಟ್ಯೂಶನ್​ಗೆ ತೆರಳುತ್ತಿದ್ದರು. ರಸ್ತೆ ದಾಟುವಾಗ ತಾಯಿ ಮಗಳ ಕೈ ಹಿಡಿದಿರಲಿಲ್ಲ. ಸಡನ್ನಾಗಿ ಬಂದ ಬೈಕ್​ ಬಾಲಕಿಗೆ ಡಿಕ್ಕಿ ಹೊಡೆದಿದೆ. ಸಿಸಿ ಕ್ಯಾಮೆರಾದಲ್ಲಿ ಈ ಭೀಕರ ಅಪಘಾತದ ದೃಶ್ಯ ಸೆರೆಯಾಗಿದೆ. ಹಾಸನ ಸಂಚಾರಿ‌ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

LEAVE A REPLY

Please enter your comment!
Please enter your name here