ವರ್ಲ್ಡ್​ಕಪ್​ನಲ್ಲಿ ಪಾಕ್ ವಿರುದ್ಧ ಆಡುವ ಬಗ್ಗೆ ಕೇಂದ್ರದ್ದೇ ಅಂತಿಮ ನಿರ್ಧಾರ : ಬಿಸಿಸಿಐ

0
191

ಮುಂಬೈ : ವರ್ಲ್ಡ್​ಕಪ್​ನಲ್ಲಿ ಪಾಕಿಸ್ತಾನದ ವಿರುದ್ಧ ಭಾರತ ಆಡಬೇಕೆ ಅಥವಾ ಬೇಡವೇ ಎಂಬುದರ ಬಗ್ಗೆ ಕೇಂದ್ರ ಸರ್ಕಾರದ್ದೇ ಅಂತಿಮ ನಿರ್ಧಾರವಾಗಲಿದ್ದು, ಕೇಂದ್ರ ನಿರ್ಧಾರಕ್ಕೆ ಬದ್ಧ ಅಂತ ಬಿಸಿಸಿಐ ತಿಳಿಸಿದೆ.
ಬಿಸಿಸಿಐ ಆಡಳಿತಾತ್ಮಕ ಸಮಿತಿ (ಸಿಒಎ) ಸಭೆಯಲ್ಲಿ ವಿಶ್ವಕಪ್​ನಲ್ಲಿ ಭಾರತ ಪಾಕ್​ ವಿರುದ್ಧ ಸೆಣೆಸಬೇಕೇ? ಬೇಡವೇ ಎನ್ನುದರ ಬಗ್ಗೆ ಸ್ಪಷ್ಟ ನಿರ್ಧಾರ ತೆಗೆದುಕೊಳ್ಳಲು ಸಾಧ್ಯವಾಗಿಲ್ಲ. ಅಂತಿಮವಾಗಿ ಕೇಂದ್ರದ ನಿರ್ಧಾರವೇ ಅಂತಿಮ ಎಂಬ ಒಮ್ಮತ ತೀರ್ಮಾನ ತೆಗೆದುಕೊಳ್ಳಲಾಯಿತು.
ಅಷ್ಟೇ ಅಲ್ಲದೆ ಪಾಕಿಸ್ತಾನವನ್ನು ವಿಶ್ವಕಪ್​ನಿಂದಲೇ ಬಹಿಷ್ಕರಿಸುವಂತೆ ಐಸಿಸಿಗೆ ಪತ್ರ ಮುಖೇನ ಮನವಿ ಮಾಡಲು ಸಿಒಎ ಬಿಸಿಸಿಐ ಸಿಇಒ ರಾಹುಲ್ ಜೊಹ್ರಿ ಅವರಿಗೆ ನಿರ್ದೇಶನ ನೀಡಿದೆ ಎಂದು ವರದಿಯಾಗಿದೆ.
ಪುಲ್ಮಾಮಾ ದಾಳಿ ಹಿನ್ನೆಲೆಯಲ್ಲಿ ಪಾಕಿಸ್ತಾನದ ವಿರುದ್ಧ ಭಾರತ ಕ್ರಿಕೆಟ್ ಆಡಬಾರದು ಅನ್ನೋದು ಒಂದಿಷ್ಟು ಮಂದಿಯ ಒತ್ತಾಯ. ಸೌರವ್ ಗಂಗೂಲಿ ಸೇರಿದಂತೆ ಅನೇಕರು ಪಾಕ್​ ವಿರುದ್ಧದ ಪಂದ್ಯಕ್ಕೆ ವಿರೋಧ ವ್ಯಕ್ತಪಡಿಸಿದ್ದಾರೆ. ಮ್ಯಾಚ್ ಆಡಿ ಗೆದ್ದು ಉತ್ತರ ಕೊಡಬೇಕು ಅನ್ನೋದು ಮತ್ತೊಂದಿಷ್ಟು ಮಂದಿಯ ಅಭಿಪ್ರಾಯವಾಗಿದೆ. ಬಿಸಿಸಿಐ ಕೇಂದ್ರ ಸರ್ಕಾರದ ನಿರ್ಧಾರವನ್ನು ಸ್ವಾಗತಿಸೋದಾಗಿ ತಿಳಿಸಿದೆ.

LEAVE A REPLY

Please enter your comment!
Please enter your name here