ಬೆಂಗಳೂರು: ಅಂಗಡಿ ಓಪನ್ಗೆ ಬಿಬಿಎಂಪಿಯಿಂದ ಪರ್ಮಿಷನ್ ಪಡೆದಿರದ ಹಿನ್ನಲೆಯಲ್ಲಿ ಹಿಂದವೀ ಮೀಟ್ ಮಾರ್ಟ್ ಮಾಲೀಕರಿಗೆ ಬಿಬಿಎಂಪಿ ಶಾಕ್ ನೀಡಿದೆ.
ನಗರದಲ್ಲಿ ೮ ಕ್ಕೂ ಹೆಚ್ಚು ಹಿಂದ್ ವಿ ಮಾಂಸದ ಅಂಗಡಿಗಳು ಇದ್ದು, ಯಾವುದೇ ಅಂಗಡಿಗೆ ಪಾಲಿಕೆ ಪರ್ಮಿಷನ್ ಕೊಟಲಿಲ್ಲ. ಹಲಾಲ್ ಬಾಯ್ಕಟ್ ವಿರುದ್ಧ ಅಭಿಯಾನ ನಡೆಸಿದ್ದ ಜಟ್ಕಾ ಕಟ್ ಆದ್ರೆ ಹಿಂದವೀ ಮೀಟ್ ಮಾರ್ಟ್ ಗಳು ಅನುಮತಿಯನ್ನೇ ಪಡೆದಿಲ್ಲ. ಹೀಗಾಗಿ ಹಿಂದವೀ ಮೀಟ್ ಮಾರ್ಟ್ ಮಾಲೀಕರಿಗೆ ಬಿಬಿಎಂಪಿ ಪಶುಪಾಲನೆ ವಿಭಾಗ ನೋಟಿಸ್ ನೀಡಿದ್ದಾರೆ.
ಪಶುಪಾಲನೆ ಸಹಾಯಕ ನಿರ್ದೇಶಕರಿಂದ ಜಟ್ಕಾ ಕಟ್ ಮಳಿಗೆಗಳಿಗೆ ನೊಟೀಸ್ ನೀಡಿದ್ದು, ನೊಟೀಸ್ ಪರವಾನಗಿ ಇಲ್ಲದಿರುವುದು ಸೇರಿದಂತೆ ಹಲವು ಅಂಶಗಳನ್ನ ಉಲ್ಲೇಖ ಮಾಡಿದ್ದಾರೆ, ನೊಟೀಸ್ ನೀಡಿದ ಒಂದು ವಾರದೊಳಗೆ ಪರವಾನಗಿ ಪಡೆಯುವಂತೆ ಆದೇಶಿಸಿದ್ದಾರೆ. ಇಲ್ಲವಾದ್ರೆ ಮಳಿಗೆಗೆ ಬೀಗ ಜಡಿಯುವುದಾಗಿ ಮೌಕಿಕ ಎಚ್ಚರಿಕೆ ನೀಡಿದ್ದಾರೆ.
ಉಲ್ಲಾಳದ ಹಿಂದವೀ ಮೀಟ್ ಮಾರ್ಟ್ ಮಾಲೀಕ ಮುನೇಗೌಡಗೆ ನೊಟೀಸ್ ನೀಡಿದ್ದು, ರಾಜರಾಜೇಶ್ವರಿನಗರದ ವಲಯ ಕಚೇರಿಯಿಂದ ನೊಟೀಸ್ ನೀಡಿರುವ ಬಿಬಿಎಂಪಿ. ಕೇವಲ ಚಿಕನ್ ಅಂಗಡಿ ಮಾತ್ರಕ್ಕೆ 2,500 ರೂ. ಪರವಾನಗಿ ಶುಲ್ಕ ಕೋಳಿ, ಮಟನ್ ಮತ್ತು ಪಿಶ್ ಗೆ ಒಟ್ಟಿಗೆ 10,500 ರೂ. ಪರವಾನಗಿ ಶುಲ್ಕವನ್ನು ಪ್ರತಿ ಒಂದು ವರ್ಷಕ್ಕೆ ಈ ಶುಲ್ಕ ಪಾವತಿಸಬೇಕು. ಮೊದಲು ಪರವಾನಿಗೆ ಪಡೆಯಲು ಇದೇ ಶುಲ್ಕ ಅನ್ವಯವಾಗಲಿದೆ ಎಂದರು.