ಬೆಂಗಳೂರು: ಸಿಲಿಕಾನ್ ಸಿಟಿ ಜನರ ಮೇಲೆ ಬೆಂಗಳೂರು ಮಹಾನಗರ ಪಾಲಿಕೆಯು ರಸ್ತೆ ತೆರಿಗೆ ವಿಧಿಸಲು ಪ್ಲಾನ್ ಮಾಡಿಕೊಳ್ಳುತ್ತದೆ.
ಬೆಂಗಳುರು ಜನರ ಮೇಲೆ ಶೇ.2 ರಷ್ಟು ತೆರಿಗೆಯನ್ನು ಹಾಕಲು ನಿರ್ಧಾರ ಮಾಡುತ್ತಿದೆ. ಏಪ್ರಿಲ್ 1 ರಂದು ಹೊಸ ರಸ್ತೆ ತೆರಿಗೆ ವಿಧಿಸಲು ಪಾಲಿಕೆ ನಿರ್ಧಾರ ಮಾಡಿದೆ ಎಂದು ಬೆಂಗಳೂರು ಮಹಾನಗರ ಪಾಲಿಕೆ ಆಡಳಿತಾಧಿಕಾರಿ ಗೌರವ್ ಗುಪ್ತ ಮಾಹಿತಿಯನ್ನು ನೀಡಿದ್ದಾರೆ.
ಪಾಲಿಕೆಯ ಆದಾಯ ಹೆಚ್ಚಿಸಿಕೊಳ್ಳಲು ಜನರ ಜೇಬಿಗೆ ಕತ್ತರಿಹಾಕಲು ಮಹಾನಗರ ಪಾಲಿಕೆ ಮುಂದಾಗಿದೆ. ಪಾಲಿಕೆ ಪ್ರಸ್ತಾಪಕ್ಕೆ ಬೆಂಗಳೂರು ನಗರಾಭಿವೃದ್ಧಿ ಒಪ್ಪಿಗೆ ನೀಡಿದೆ. ತೆರಿಗೆಯಿಂದ ಸುಮಾರು 80 ಕೋಟಿ ಆದಾಯ ಬರುವ ನೀರಿಕ್ಷೆಯಲ್ಲಿ ಮಹಾನಗರ ಪಾಲಿಕೆ ಇದೆ. ಆದರೆ ವಾಹನ ಖರೀದಿ ವೇಳೆ ರಸ್ತೆಗೆ ತೆರಿಗೆ ಕಟ್ಟಿರುತ್ತೇವೆ, ಮತ್ಯಾರಿಗೆ ತೆರಿಗೆ ಕಟ್ಟಬೇಕು ಎಂದು ಪಾಲಿಕೆಯ ನಿರ್ಧಾರಕ್ಕೆ ಬೆಂಗಳೂರು ಜನರಿಂದ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ.