ಬೆಂಗಳೂರು: ಈ ಬಾರಿ ಕೋರೊನಾ ವೈರಸ್ ಬರ ಸಿಡಿಲಿನಂತೆ ಬಡಿದಿದೆ. ವರ್ಷಾಚರಣೆ ಎಂಜಾಯ್ ಮಾಡಬೇಕು ಅಂದುಕೊಂಡವರಿಗೆ ನಿರಾಸೆಯಾಗಿದೆ. ಇತ್ತ ಸರ್ಕಾರ ಕೂಡ ಕಟ್ಟುನಿಟ್ಟಿನ ಕ್ರಮ ಜರುಗಿಸಿದ್ದು, ಅದನ್ನ ಫಾಲೋ ಮಾಡದೇ ಇರೋರ ಮೇಲೆ ಸರ್ಕಾರ ಹದ್ದಿನ ಕಣ್ಣಿಟ್ಟಿದೆ. ಒಂದು ವೇಳೆ ಅದನ್ನ ನಿರ್ಲಕ್ಷ್ಯ ಮಾಡಿದವರಿಗೆ ಶಿಕ್ಷೆ ತಪ್ಪಿದ್ದಲ್ಲ.
ಇನ್ನೇನು ಕೊರೋನಾ ಮುಗಿದೇ ಹೋಯಿತು. ಒಳ್ಳೆ ಸೆಲೆಬ್ರೇಷನ್ ಮಾಡೋಣ ಅಂದುಕೊಂಡವರಿಗೆ ಭಾರೀ ನಿರಾಸೆಯಾಗಿದೆ. ರಾಜ್ಯಕ್ಕೆ ಬ್ರಿಟನ್ ಭೂತ ಬಂದು ಒಕ್ಕರಿಸಿದ್ದು, ಜನರಿಗೆ ನುಂಗಲಾರದ ತುತ್ತಾಗಿದೆ. ಇತ್ತ ಸರ್ಕಾರ ಕೂಡ ನ್ಯೂ ಇಯರ್ಗೆ ಬ್ರೇಕ್ ಹಾಕಿದೆ. ಬೇಕಾಬಿಟ್ಟಿ ಓಡಾಡುವವರಿಗೆ, ಮಾರ್ಗಸೂಚಿ ಉಲ್ಲಂಘನೆ ಮಾಡುವವರಿಗೆ ಪೊಲೀಸ್ ಇಲಾಖೆ ಎಚ್ಚರಿಕೆ ಸಂದೇಶ ರವಾನಿಸಿದೆ.
ಕಳೆದ ಬಾರಿಯಂತೆ ಈ ಬಾರಿ ಬೇಕಾಬಿಟ್ಟಿ ಸಂಭ್ರಮಾಚರಣೆ ಮಾಡುವಂತಿಲ್ಲ. ಮೊನ್ನೆಯಷ್ಟೇ ಹೊಸ ವರ್ಷ ಸೆಲೆಬ್ರೆಷನ್ಗೆ ಬೆಂಗಳೂರು ಪೊಲೀಸ್ ಆಯುಕ್ತ ಕಮಲ್ ಪಂತ್, ಕೆಲ ನಿಯಮಗಳ ಬಗ್ಗೆ ಆದೇಶ ನೀಡಿದ್ರು. ಈಗ ಅದಕ್ಕೆ ಪೂರಕವಾದಂತಹ ಒಂದಷ್ಟು ನಿಯಮಗಳನ್ನ ಸೇರಿಸಲಾಗಿದೆ. ಅದರಲ್ಲಿ ಸೆಕ್ಯೂರಿಟಿಗೆ ಬೇಕಾದಂತಹ ಕೆಲವೊಂದು ನಿಯಮಗಳು ಹೆಚ್ಚಾಗಿ ಅಳವಡಿಸಲಾಗಿದೆ.
ವರ್ಷಾಚರಣೆಗೆ ಯಾವ ಯಾವ ನಿಯಮ
- ಪಬ್, ರೆಸ್ಟೋರೆಂಟ್ಗಳಲ್ಲಿ ಸಿಸಿಟಿವಿ ಅಳವಡಿಕೆ
- ಹೆಚ್ಡಿ ಕ್ವಾಲಿಟಿ ಕ್ಯಾಮರಾಗಳನ್ನೇ ಅಳವಡಿಸಬೇಕು
- ಸಿಸಿಟಿವಿಯಲ್ಲಿ 1 ತಿಂಗಳು ಡೇಟಾ ಸ್ಟೋರೇಜ್ ಇರಬೇಕು
- ಪಾಸ್ ಹೊಂದಿರುವ ಶೇ. 50ರಷ್ಟು ಜನರಿಗೆ ಮಾತ್ರ ಅವಕಾಶ
- ಮಬ್ ಲೈಟ್ ಆಫ್, ಡಾರ್ಕ್ ಲೈಟ್ ಆನ್ ಇರಲೇಬೇಕು
- ರಾತ್ರಿ 8ರ ಬಳಿಕ ಎಂ.ಜಿ.ರೋಡ್ ಸುತ್ತಮುತ್ತ ರಸ್ತೆ ಬಂದ್
- ಪಬ್ನ ಹೊರ, ಒಳಗೆ ಕಡ್ಡಾಯವಾಗಿ ನಿಯಮ ಪಾಲಿಸಬೇಕು
- ಥರ್ಮಲ್ ಸ್ಕ್ರೀನ್ ಮಾಡುವಂತಹ ಸೆಕ್ಯೂರಿಟಿ ಗಾರ್ಡ್ ಇರಬೇಕು
- ಕುಡಿದ ಮತ್ತಲ್ಲಿ ಮನೆಗೆ ತೆರಳುವವರಿಗೂ ಕೆಲವು ನಿಯಮ ಅನ್ವಯ
- ಎಂ.ಜಿ.ರೋಡ್, ಬ್ರಿಗೇಡ್ ರೋಡ್ ಸೇರಿ ಹಲವೆಡೆ ಸಂಚಾರ ನಿಷೇಧ
ಹೊಸವರ್ಷ ಆಚರಣೆ ಹಿನ್ನಲೆಯಲ್ಲಿ ರಾಜ್ಯಾದ್ಯಂತ ಬಿಗಿ ಬಂದೋಬಸ್ತ್ ಮಾಡಲಾಗಿದೆ ಎಂದು ಗೃಹ ಸಚಿವ ಬಸವರಾಜ್ ಬೊಮ್ಮಾಯಿ ಹೇಳಿದ್ದಾರೆ. ಬೆಂಗಳೂರು ಜೊತೆಗೆ ಮೈಸೂರ, ಮಂಗಳೂರು, ಹುಬ್ಬಳ್ಳಿ, ಬೆಳಗಾವಿ ಸೇರಿದಂತೆ ಪ್ರಮುಖ ನಗರಗಳಲ್ಲಿ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲು ಪೊಲೀಸ್ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ಸಚಿವರು ತಿಳಿಸಿದರು.
ಇನ್ನು ಮುಖ್ಯವಾಗಿ ಸಿಲಿಕಾನ್ ಸಿಟಿಯಲ್ಲಿ ಫ್ಲೈ ಓವರ್ಗಳು ಸಂಪೂರ್ಣ ಬಂದ್ ಆಗಲಿದ್ದು, ಯಾವುದೇ ಕಾರಣಕ್ಕೂ ರೇಸ್ ಮಾಡುವಂತಿಲ್ಲ. ಈಗಾಗಲೇ 2500 ಸಂಚಾರಿ ಪೊಲೀಸರು ಕಾರ್ಯ ನಿರ್ವಹಿಸುತ್ತಿದ್ದು, ಒಟ್ಟು 668 ಕಡೆ ಸಿಬ್ಬಂದಿ ಹದ್ದಿನ ಕಣ್ಣಿಟ್ಟಿದ್ದಾರೆ. ಅದೇ ರೀತಿ 191 ಕಡೆ ನಾಕಾಬಂಧಿ ಹಾಕಲಾಗುತ್ತೆ. ವೀಲಿಂಗ್ ಮಾಡಿದವರ ಗಾಡಿಗಳನ್ನು ಮುಲಾಜಿಲ್ಲದೆ ಸೀಜ್ ಮಾಡೋದರ ಜೊತೆಗೆ ಎನ್ಡಿಎಂ ಆಕ್ಟ್ ನಡಿ ಕೂಡ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಜಂಟಿ ಸಂಚಾರ ಪೊಲೀಸ್ ಆಯುಕ್ತ ರವಿಕಾಂತೇಗೌಡ ತಿಳಿಸಿದ್ದಾರೆ.