Home ರಾಜ್ಯ ಬೆಂಗಳೂರು ಕೋರ್ಟ್ ಆವರಣದಲ್ಲೇ ವಕೀಲನ ಬರ್ಬರ ಹತ್ಯೆ !

ಕೋರ್ಟ್ ಆವರಣದಲ್ಲೇ ವಕೀಲನ ಬರ್ಬರ ಹತ್ಯೆ !

ವಿಜಯನಗರ (ಹೊಸಪೇಟೆ) : ಕೋರ್ಟ್ ಆವರಣದಲ್ಲೇ ವಕೀಲನೋರ್ವನ ಬರ್ಬರ ಹತ್ಯೆಯಾಗಿದೆ. ವಿಜಯನಗರ ಜಿಲ್ಲೆಯ ಹೊಸಪೇಟೆಯ ಕೋರ್ಟ್ ಆವರಣದಲ್ಲಿ ಘಟನೆ ನಡೆದಿದೆ. ಡಾ. ತಾರಿಹಳ್ಳಿ ವೆಂಕಟೇಶ್ ಎನ್ನುವವರನ್ನ ಮನೋಜ್ ಎಂಬ ಯುವಕ (22) ಮಚ್ಚಿನಿಂದ ಬರ್ಬರವಾಗಿ ಕೊಲೆಗೈದಿದ್ದಾನೆ.

ಇನ್ನು, ಕೊಲೆಗೈದ ಯುವಕ ವಕೀಲನ ಹತ್ತಿರದ ಸಂಬಂಧಿಯೇ ಎನ್ನಲಾಗಿದೆ. ಬೆಳಗ್ಗೆ ಕೋರ್ಟ್ ಬಂದ ವಕೀಲ ವೆಂಕಟೇಶ್ ನೋಟರಿಗೆ ಅಂತ ತೆರಳಿದ್ದಾರೆ. ಈ ವೇಳೆ ವೆಂಕಟೇಶ್ ಬಳಿ ಬಂದ ಮನೋಜ್ ಪ್ರೀತಿಯಿಂದ ಮಾತನಾಡಿಸುತ್ತಲೇ ಚೀಲದಲ್ಲಿದ್ದ ಮಚ್ಚಿನಿಂದ ಕತ್ತು ಸೀಳಿದ್ದಾನೆ. ಇನ್ನು ಹಾಡಹಗಲೇ ನಡೆದಿರುವ ಕೃತ್ಯದಿಂದ ಹೊಸಪೇಟೆ ಜನತೆ ಬೆಚ್ಚಿಬಿದ್ದಿದ್ದಾರೆ. ಕೊಲೆ ನಿಖರ ಕಾರಣ ಇನ್ನಷ್ಟೆ ತಿಳಿಯಬೇಕಿದ್ದು ಆರೋಪಿ ಮನೋಜ್ ನನ್ನು ಪೊಲೀಸರು ಬಂಧಿಸಿದ್ದಾರೆ.

ಅರುಣ್ ನವಲಿ ಪವರ್ ಟಿವಿ ಬಳ್ಳಾರಿ

LEAVE A REPLY

Please enter your comment!
Please enter your name here

- Advertisment -

Most Popular

ಮುತ್ತೋಡಿ ರಕ್ಷಿತಾರಣ್ಯಕ್ಕೆ ನಟ ದರ್ಶನ್ ಭೇಟಿ

ಚಿಕ್ಕಮಗಳೂರು : ಚಾಲೆಂಜಿಂಗ್ ಸ್ಟಾರ್ ದರ್ಶನ್ ಮತ್ತೊಮ್ಮೆ ಸಫಾರಿ ಮಾಡಿದ್ದಾರೆ. ಚಿಕ್ಕಮಗಳೂರು ತಾಲೂಕಿನ ಮುತ್ತೋಡಿ ರಕ್ಷಿತಾರಣ್ಯಕ್ಕೆ ನಟ ದರ್ಶನ್ ಭೇಟಿ. ಭದ್ರಾ ರಕ್ಷಿತಾರಣ್ಯದಲ್ಲಿ ಸಫಾರಿ ನಡೆಸಿದ ಚಾಲೆಂಜಿಂಗ್ ಸ್ಟಾರ್. ಚಾಲೆಂಜಿಂಗ್ ಸ್ಟಾರ್ ಜೊತೆ ರಕ್ಷಿತಾರಣ್ಯದ...

ಸೋಮವಾರದ ನಂತರ ಮುಷ್ಕರ ಮತ್ತಷ್ಟು ತೀವ್ರಗೊಳ್ಳಲಿದೆ : ಕೋಡಿಹಳ್ಳಿ ಚಂದ್ರಶೇಖರ್

ಬೆಂಗಳೂರು : ಸಾರಿಗೆ ನೌಕರರ ಮುಷ್ಕರ ಮಂಕಾದಂತೆ ಕಾಣ್ತಿದೆ ಎನ್ನುವಷ್ಟರಲ್ಲಿ ಕೋಡಿಹಳ್ಳಿ ಚಂದ್ರಶೇಖರ್ ಸುದ್ದಿಗೋಷ್ಠಿ ಕರೆದು ಮಾತನಾಡಿದ್ದಾರೆ. ಸೋಮವಾರದ ನಂತರ ಮುಷ್ಕರ ಮತ್ತಷ್ಟು ತೀವ್ರಗೊಳ್ಳಲಿದೆ ಎಂದು ಚಂದ್ರಶೇಖರ್ ಹೇಳಿದ್ದಾರೆ. 1 ಲಕ್ಷಕ್ಕೂ ಹೆಚ್ಚು...

ನಿಖಿಲ್ ಕುಮಾರ್ ಸ್ವಾಮಿಗೂ ಕೊರೋನಾ ಪಾಸಿಟಿವ್

ಬೆಂಗಳೂರು : ಇಂದು ಬೆಳಗ್ಗೆ ಮಾಜಿ ಮುಖ್ಯಮಂತ್ರಿ ಕುಮಾರ್ ಸ್ವಾಮಿ ಅವರಿಗೂ ಕೊರೋನಾ ಪಾಸಿಟಿವ್ ವರದಿಯಾಗಿತ್ತು ಈಗ ನಿಖಿಲ್ ಅವರಿಗೂ ಪಾಸಿಟಿವ್ ಬಂದಿದೆ. ಇಂದು ನಿಖಿಲ್ ಅವರ ಮೊದಲನೇ ವಾರ್ಷಿಕೋತ್ಸವವೂ ಆಗಿದೆ.  ನಾನು ಇಂದು...

ವಿವಾಹಕ್ಕೆ 100 – 200, ಅಂತ್ಯಸಂಸ್ಕಾರಕ್ಕೆ 25 – 50 ಜನ ಮಾತ್ರ

ಬೆಂಗಳೂರು : ಸಿಎಂ ಯಡಿಯೂರಪ್ಪನವರು ಕೊರೋನಾ ಕಾರಣದಿಂದ ಆಸ್ಪತ್ರೆಗೆ ದಾಖಲಾದ ಕಾರಣ ಸಚಿವ ಸುಧಾಕರ್ ಮತ್ತು ಬೊಮ್ಮಾಯಿ ಅವರು ಸಭೆ ನಡೆಸಿ ರಾಜ್ಯದಲ್ಲಿ ಇನ್ಮೇಲೆ ಟಫ್ ರೂಲ್ಸ್ ಶುರುವಾಗಲಿದೆ ಎಂಬ ಮಾಹಿತಿ ನೀಡಿದ್ದಾರೆ.  ಕೊವಿಡ್ ನಿಯಮ...

Recent Comments