Monday, January 17, 2022
Powertv Logo
HomePower Specialಜಗತ್ತಿನಲ್ಲಿ ಸೃಷ್ಟಿ ಆಯ್ತು ಹೊಸ ದೇಶ

ಜಗತ್ತಿನಲ್ಲಿ ಸೃಷ್ಟಿ ಆಯ್ತು ಹೊಸ ದೇಶ

ಬ್ರಿಡ್ಜ್ ಟೌನ್‌ : ಬ್ರಿಟಿಷ್​ ಸಾಮ್ರಾಜ್ಯವನ್ನ ಅದೊಂದು ಕಾಲದಲ್ಲಿ ಸೂರ್ಯ ಮುಳುಗದ ನಾಡು ಅಂತ ಕರೆಯಲಾಗ್ತಾ ಇತ್ತು. ಈ ಬ್ರಿಟಿಷ್​​ ಸಾಮ್ರಾಜ್ಯ ಕೂಡ ಅಷ್ಟು ಸುಲಭದ್ದಾಗಿರ್ಲಿಲ್ಲ. ಯಾಕಂದ್ರೆ ತಮಗೆ ಬೇಕು ಅನ್ನಿಸಿದ್ದ ಪ್ರತಿಯೊಂದು ಭೂ ಭಾಗವನ್ನ ಫ್ರೆಂಚರ ಜೊತೆ ಪೋರ್ಚುಗೀಸರ ಜೊತೆ ಯುದ್ಧ ನಡೆಸಿ ಕಿತ್ತುಕೊಂಡಿದ್ದರು. ಮತ್ತೆ ಕೆಲವು ಕಡೆಗಳಿಗೆ ತಾವೇ ನೇರವಾಗಿ ಹೋಗಿ ಆಡಳಿತ ನಡೆಸೋದಕ್ಕೆ ಶುರು ಮಾಡಿಕೊಂಡಿದ್ದರು.

ಹೀಗೇ ತಾವು ಆಕ್ರಮಿಸಿದ ಹಾಗು ವಶಪಡಿಸಿಕೊಂಡಿದ್ದ ಬಹುತೇಕ ಭೂ ಭಾಗಗಳಲ್ಲಿ ಆಡಳಿತ ನಡೆಸೋದಕ್ಕೆ ಮುಂದಾಗೋದು, ಅಲ್ಲಿದ್ದ ಜನರನ್ನು ಶೋಷಣೆಗೆ ಒಳಪಡಿಸೋದು, ಸ್ಥಳೀಯ ಇತಿಹಾಸವನ್ನ ತಿರುಚಿ ತಮಗೆ ಬೇಕಾದ ರೀತಿಯಲ್ಲಿ ಅಲ್ಲಿನ ಇತಿಹಾಸವನ್ನ ಬರೆಯೋದು, ವಿಚಿತ್ರ ಕಾನೂನುಗಳನ್ನ ಜಾರಿಗೆ ತಂದು ಅವೇ ಸರ್ವಶ್ರೇಷ್ಠ ಅನ್ನುವಂತೆ ಮಾಡೋದ್ರಲ್ಲಿ ಸಿದ್ಧಹಸ್ತರು. ಅಷ್ಟೇ ಅಲ್ಲ ಕೊನಗೆ ಆ ದೇಶವನ್ನ ಅಥವಾ ಭೂ ಪ್ರದೇಶದ ಅಸ್ಮಿತೆಗೆ ಸಂಪೂರ್ಣ ಧಕ್ಕೆ ತಂದು ಅಲ್ಲಿಂದ ಅದೆಷ್ಟೊ ಸಂಪತ್ತನ್ನ ಕೊಳ್ಳೆ ಹೊಡೋಯೊದಕ್ಕೆ ಸಾಧ್ಯನೋ ಅಷ್ಟನ್ನು ಕೊಳ್ಳೆ ಹೊಡೆಯೋದು. ಆ ಪ್ರದೇಶಗಳಿಗೆ ಕಾಟಾಚಾರದ ಸ್ವಾತಂತ್ರ್ಯ ಘೋಷಿಸಿ ಹೊರಟು ಹೋಗೋದು ಬ್ರಿಟಿಷರು ನಡೆಸುತ್ತಿದ್ದ ಅತಿದೊಡ್ಡ ಶೋಷಣೆಯ ಒಂದು ಭಾಗವಷ್ಟೇ.

ಹೀಗೆ ಬ್ರಿಟಿಷರು ಜಾಗತಿಕವಾಗಿ ಸಾಕಷ್ಟು ದೇಶಗಳನ್ನ ಆಳ್ತಾ ಇದ್ದಿದ್ರಿಂದ ಬ್ರಿಟಿಷ್​ ಸಾಮ್ರಾಜ್ಯವನ್ನ ಸೂರ್ಯ ಮುಳುಗದ ನಾಡು ಅಂತ ಕರೆಯಲಾಗ್ತಾ ಇತ್ತು. ಆದರೆ ಇದೇ ಬ್ರಿಟಿಷರ ಶೋಷಣೆ, ದರ್ಪ, ಅಹಂಕಾರದಿಂದ ನಲುಗಿದ ಸಾಕಷ್ಟು ಜನ ಈ ಬ್ರಿಟಿಷರಿಂದ ಹೋರಾಟ ನಡೆಸಿ ಸ್ವಾತಂತ್ರ್ಯವನ್ನ ಪಡೆದುಕೊಂಡಿದ್ದಾರೆ. ಬ್ರಿಟಿಷರು ಸ್ವಾತಂತ್ರ್ಯವನ್ನ ಘೋಷಣೆ ಮಾಡುವಾಗ ಹಲವು ಎಡವಟ್ಟುಗಳನ್ನ ಮಾಡಿ ಹೋಗೋದು ಹಲವು ಶತಮಾನಗಳಿಂದ ನಡೆದುಕೊಂಡು ಬಂದಿದೆ. ಇದೇ ರೀತಿಯಾಗಿ ಹಲವು ದೇಶಗಳಿಗೆ ಈ ಬ್ರಿಟಿಷರು ಅನ್ಯಾಯ ಮಾಡಿದ್ದಾರೆ. ಕೆಲವು ಗಡಿ ವಿವಾದಗಳು, ಮತ್ತೆ ಕೆಲವು ಕಡೆಗಳಲ್ಲಿ ಇತಿಹಾಸ ತಿರುಚುವಿಕೆ ಹಾಗು ಅವೈಜ್ಞಾನಿಕ ಕಾನೂನುಗಳ ಅಳವಡಿಕೆ ಹಾಗು ಕೆಲ ಪ್ರದೇಶಗಳ ಮೂಲ ಆಚರಣೆಗಳನ್ನ ಬದಲಾಯಿಸುವ ಕೆಲಸವನ್ನ ಬಹಳ ಅಚ್ಚುಕಟ್ಟಾಗಿ ಮಾಡಿ ಮುಗಿಸಿದ್ದಾರೆ. ಇವರ ಈ ಎಡವಟ್ಟಿನ ನಿರ್ಧಾರಗಳೇ ಇಂದಿಗೂ ಕೂಡ ಹಲವು ಪ್ರದೇಶಗಳಲ್ಲಿ ವಿವಾದದ ಸ್ವರೂಪವನ್ನ ಪಡೆದುಕೊಂಡಿವೆ. ಮತ್ತೆ ಕೆಲವು ಕಡೆಗಳಲ್ಲಿ ಕೆಲ ದೇಶಗಳು ಪರಸ್ಪರ ಕಚ್ಚಾಡೋ ಹಾಗೆ ಮಾಡಿದೆ.

ಬ್ರಿಟಿಷರು ಹೀಗೆ ಸಾಕಷ್ಟು ದೇಶಗಳಲ್ಲಿ ಎಡವಟ್ಟುಗಳನ್ನ ಮಾಡಿದ್ರೂ ಕೂಡ ಆ ಎಲ್ಲಾ ದೇಶಗಳಿಗೆ ಸ್ವಾತಂತ್ರ್ಯ ನೀಡಿ ಅಲ್ಲಿಂದ ಕಾಲ್ಕಿತ್ತಿದ್ರು. ಆದ್ರೆ ಆ ಒಂದು ದೇಶದ ವಿಚಾರದಲ್ಲಿ ಮಾತ್ರ ಅವರು ವಿಚಿತ್ರವಾದ ನಿರ್ಧಾರವನ್ನ ತೆಗೆದುಕೊಂಡು ಬಿಟ್ಟಿದ್ರು. ಅವ್ರು ತೆಗೆದುಕೊಂಡಿದ್ದ ವಿಚಿತ್ರ ನಿಯಮದ ಪ್ರಕಾರ, ಆ ದೇಶ ಸ್ವಾತಂತ್ರ್ಯಗೊಂಡರೂ ಕೂಡ ಬ್ರಿಟಿಷರ ಸಾಂವಿಧಾನಿಕ ಆಳ್ವಿಕೆಯ ಭಾಗವಾಗಿ ,ಕಾರ್ಯ ನಿರ್ವಹಿಸಬೇಕಾದ ಪರಿಸ್ಥಿತಿ ನಿರ್ಮಾಣವಾಗಿತ್ತು. ಹೀಗಾಗಿ ಆ ದೇಶ 1966 ರಲ್ಲೇ ಸ್ವಾತಂತ್ಯ ಪಡೆದ್ರೂ ಬ್ರಿಟಿಷರ ಅಧೀನದಲ್ಲೇ ಸುಮಾರು 55 ವರ್ಷಗಳ ಕಾಲ ಕಾರ್ಯ ನಿರ್ವಹಿಸಬೇಕಾದ ಪರಿಸ್ಥಿತಿ ಹೊಂದಿತ್ತು. ಹೀಗಾಗಿ ಆ ದೇಶ ಈಗ ತನ್ನ ಸಾಂಸ್ಕೃತಿಕ ಅಸ್ಮಿತೆ ಕಳೆದುಕೊಳ್ಳುವ ಹಂತಕ್ಕೆ ಬಂದು ತಲುಪಿದೆ.. ಇದನ್ನ ಅರಿತಿದ್ದ ಅಲ್ಲಿನ ಕೆಲ ರಾಜಕಾರಣಿಗಳ ಹೋರಾಟದಿಂದಾಗಿ ಅದೀಗ ಬ್ರಿಟನ್​ನಿಂದ ಸಂಪೂರ್ಣವಾದ ಗಣರಾಜ್ಯವಾಗಿ ಹೊರಬಂದಿದೆ.. ಹೀಗೆ ಸಂಪೂರ್ಣವಾಗಿ ಗಣರಾಜ್ಯ ಪಡೆದ ಆ ರಾಷ್ಟ್ರದ ಹೆಸರು ಬಾರ್ಬಡೋಸ್​.

ಈ ಬಾರ್ಬಡೋಸ್​ ರಾಷ್ಟ್ರ ಕೆರೆಬಿಯನ್​ ದ್ವೀಪ ಸಮೂಹದಲ್ಲಿರುವ ಪುಟ್ಟ ರಾಷ್ಟ್ರ.. ಇಲ್ಲಿಗೆ ಬ್ರಿಟಿಷರು ಕಾಲಿಡೋದಕ್ಕೂ ಮುಂಚೆ ಇದು ಸಂಪೂರ್ಣವಾಗಿ ಬುಡಕಟ್ಟು ದೇಶವಾಗಿತ್ತು. ಅಲ್ಲಿ ತಮ್ಮ ಬುಡಕಟ್ಟು ಸಂಸ್ಕೃತಿಯನ್ನ ಕಟ್ಟಿದ್ದ ಆ ಜನಕ್ಕೆ ನಿಜವಾದ ಅಪಾಯ ಬಂದಿದ್ದು ಅಂದ್ರೆ ಅದು 14 ಮೇ 1625ರಲ್ಲಿ. ಹೌದು, ಅವತ್ತು ಮೊದಲ ಬಾರಿಗೆ ಈ ಬ್ರಿಟಿಷರು ಬಾರ್ಬಡೋಸ್​ಗೆ ಕಾಲಿಟ್ಟು ಅಲ್ಲಿ ತಮ್ಮ ಶೋಷಣೆಯ ಪರ್ವವನ್ನ ಹಾಗು ಅಲ್ಲಿನ ಸಂಸ್ಕೃತಿಯನ್ನ ನಾಶ ಮಾಡುವ ಕೆಲಸಕ್ಕೆ ಮುಂದಾಗ್ತಾರೆ. ಅಲ್ಲಿಂದ 1966ರವರೆಗೆ ತಮ್ಮ ಆಡಳಿತವನ್ನ ಮುಂದುವರೆಸಿದ್ದ ಬ್ರಿಟಿಷರು ಬಳಿಕ ಬಾರ್ಬಡೋಸ್​ಗೆ ಸ್ವಾತಂತ್ರ್ಯ ಘೋಷಣೆ ಮಾಡ್ತಾರೆ. ಆದ್ರೆ ಇದು ಕೇವಲ ಕಾಟಾಚಾರದ ಸ್ವಾತಂತ್ರ್ಯವಾಗಿತ್ತು ಅನ್ನೋದ್ರಲ್ಲಿ ಯಾವುದೇ ಅನುಮಾನವಿರಲಿಲ್ಲ. ಯಾಕಂದ್ರೆ ಬಾರ್ಬಡೋಸ್​ ಸ್ವಾತಂತ್ರ್ಯವನ್ನ ಪಡೆದರೂ ಮತ್ತೆ ಬ್ರಿಟಿಷರ ಅಧೀನದಲ್ಲೇ ಆಡಳಿತ ನಡೆಸೋ ಹಾಗೆ ಪರಿಸ್ಥಿತಿ ನಿರ್ಮಾಣವಾಗಿತ್ತು. ಯಾಕಂದ್ರೆ ಇಲ್ಲಿ ಬ್ರಿಟಿಷರು ಬಾರ್ಬಡೋಸ್ ಸಾಂವಿಧಾನಿಕ ಗಣರಾಜ್ಯವನ್ನ ನೀಡ್ತಾರೆ.

ಇದೇನು ಸ್ವಾತಂತ್ರ್ಯ ಸಿಕ್ಕಿದ ಮೇಲೆ ಅವರಿಗೆ ಬೇಕಾದ ಹಾಗೆ ದೇಶವನ್ನ ನಡೆಸಬಹುದಿತ್ತಲ್ಲ ಅನ್ನೋ ಅನುಮಾನ ಎಲ್ರಿಗೂ ಕಾಡುತ್ತೆ. ಆದ್ರೆ ಬ್ರಿಟಿಷರು ಬಾರ್ಬಡೋಸ್​ಗೆ ಸ್ವಾತಂತ್ರ್ಯವನ್ನ ಘೋಷಣೆ ಮಾಡುವಾಗ ಬಾರ್ಬಡೋಸ್​ ಹಾಗು ಬ್ರಿಟಿಷರ ನಡುವೆ ವೆಸ್ಟ್​​ಮಿನ್​ಸ್ಟರ್​ ಸಿಸ್ಟಮ್​ಗೆ ಒಂದು ಅಗ್ರಿಮೆಂಟ್​ ಮಾಡಲಾಗಿತ್ತು.. ಅದರ ಪ್ರಕಾರ ಬಾರ್ಬಾಡೋಸ್​ನಲ್ಲಿ ಅಲ್ಲಿನ ಜನರಿಗೆ ಬೇಕಾದ ದೇಶವನ್ನ ಕಟ್ಟಬಹುದು, ಆದ್ರೆ​ ಪಾರ್ಲಿಮೆಂಟ್​ ಸಿಸ್ಟಮ್​ ಅಡಿಯಲ್ಲಿ ಹಾಗು ಬ್ರಿಟಿಷ್​​ ಕಾಮನ್​ವೆಲ್ತ್​ ಅಡಿಯಲ್ಲಿ ಇರಬೇಕಾಗಿತ್ತು. ಇದರ ಪ್ರಕಾರ, 54 ಕಾಮನ್​​​​​ವೆಲ್ತ್​ ರಾಷ್ಟ್ರಗಳ ಆಂತರಿಕ ಸರ್ಕಾರಗಳಲ್ಲಿ ಇದು ಕೂಡ ಒಂದಾಗಬೇಕಿತ್ತು. ಇದ್ರಿಂದ ಈ ರಾಷ್ಟ್ರದಲ್ಲಿ ನಡೆಯೋ ಎಲ್ಲಾ ಬೆಳವಣಿಗೆಗಳು ಹಾಗು ಹೊಸ ಯೋಜನೆಗಳನ್ನ ಬ್ರಿಟಿಷ್ ವ್ಯವಸ್ಥೆಯೊಂದಿಗೆ ಚರ್ಚೆ ಮಾಡಿ ಜಾರಿಗೆ ತರಬೇಕಾದ ಅನಿವಾರ್ಯತೆ ಕೂಡ ಇತ್ತು. ಆದ್ರೆ ಈಗ ಬಾರ್ಬಾಡೋಸ್​ ಉದಯದಿಂದ ಇವೆಲ್ಲದಕ್ಕೂ ಬ್ರೇಕ್​ ಬಿದ್ದಿದೆ.

LEAVE A REPLY

Please enter your comment!
Please enter your name here

- Advertisment -

Most Popular

Recent Comments