ಶಾಲಾ – ಕಾಲೇಜು ಬಳಿ ಜಂಕ್​ಫುಡ್​ ಮಾರಾಟಕ್ಕೆ ಬ್ರೇಕ್!

0
161

ನವದೆಹಲಿ : ಶಾಲಾ-ಕಾಲೇಜು ವಿದ್ಯಾರ್ಥಿಗಳಿಗೆ ಜಂಕ್ ಫುಡ್​ಗಳೆಂದ್ರೆ ಪಂಚಪ್ರಾಣ. ಹಾಗಾಗಿ ಶಾಲಾ-ಕಾಲೇಜುಗಳ ಹತ್ರ ಎಲ್ಲೆಲ್ಲೂ ನೋಡಿದ್ರೂ ಜಂಕ್​ಫುಡ್ ಸ್ಟಾಲ್​ಗಳದ್ದೇ ಹಾವಳಿ. ಆದ್ರೆ, ಸದ್ಯದಲ್ಲೇ ಈ ಸ್ಟಾಲ್​ಗಳಿಗೆ ಬೀಗ ಬೀಳುವ ಸಾಧ್ಯತೆ ಇದೆ.
ಭಾರತೀಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರ ಶಾಲಾ -ಕಾಲೇಜುಗಳ ಬಳಿ ಕುರುಕಲು ತಿಂಡಿಗಳ ಮಾರಾಟ ನಿಷೇಧಿಸುವ ಕುರಿತು ಕರಡು ನಿಯಮಾವಳಿಯನ್ನು ಜಾರಿಗೆ ತಂದಿವೆ. ಈ ಪ್ರಕಾರ ಶಾಲಾ ಕ್ಯಾಂಪಸ್ಸಿನ 50 ಮೀಟರ್ ಸುತ್ತಮುತ್ತ ಜಂಕ್​ಫುಡ್​ಗಳನ್ನು ಮಾರುವಂತಿಲ್ಲ. ಅಲ್ಲದೆ ಜಂಕ್​ಫುಡ್​​​ನಿಂದಾಗುವ ಸಮಸ್ಯೆಗಳ ಬಗ್ಗೆ ವಿದ್ಯಾರ್ಥಿಗಳಲ್ಲಿ ಅರಿವು ಮೂಡಿಸುವ ಕಾರ್ಯ ಮಾಡ್ಬೇಕು. ಶಾಲಾ-ಕಾಲೇಜುಗಳ ಕ್ಯಾಂಟಿನ್​ಗಳಲ್ಲಿ ಜಂಕ್​ಫುಡ್ ಅಪಾಯದ ಬಗ್ಗೆ ಜಾಹಿರಾತು ಹಾಕ್ಬೇಕು ಅಂತ ಕರಡು ನಿಯಮದಲ್ಲಿದೆ.

LEAVE A REPLY

Please enter your comment!
Please enter your name here