ಹೊಸದಿಲ್ಲಿ: ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಜನವರಿ 31 ಹಾಗೂ ಫೆಬ್ರವರಿ 1 ರಂದು ದೇಶಾದ್ಯಂತ ಬ್ಯಾಂಕ್ ಮುಷ್ಕರ ನಡೆಸಲು ಬ್ಯಾಂಕ್ ಯೂನಿಯನ್ ಹಾಗೂ ವಿವಿಧ ಸಂಘಟನೆಗಳು ನಿರ್ಧರಿಸಿದೆ.
ವೇತನ ಪರಿಷ್ಕರಣೆ ಸೇರಿದಂತೆ ಸಿಬ್ಬಂದಿ ಕಲ್ಯಾಣ ನಿಧಿಯ ಹಂಚಿಕೆ, ಮೂಲ ವೇತನದೊಡನೆ ವಿಶೇಷ ವೇತನ ವಿಲೀನಕ್ಕೆ ಬೇಡಿಕೆ ಇಟ್ಟಿದ್ದಾರೆ. ಅಲ್ಲದೆ ಬ್ಯಾಂಕ್ ವಹಿವಾಟನ್ನು ವಾರಕ್ಕೆ 5 ದಿನಗಳಿಗೆ ಮಿತಿಗೊಳಿಸುವ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಅಖಿಲ ಭಾರತ ರಾಷ್ಟ್ರೀಕೃತ ಬ್ಯಾಂಕ್ ಅಧಿಕಾರಿಗಳ ಫೆಡರೇಷನ್ ಮುಷ್ಕರಕ್ಕೆ ಕರೆ ನೀಡಿದೆ.
ಮುಷ್ಕರ ಹಿನ್ನಲೆ ಎರಡು ದಿನ ಎಸ್ಬಿಐ, ಕರ್ಣಾಟಕ ಬ್ಯಾಂಕ್, ಧನಲಕ್ಷ್ಮಿ ಬ್ಯಾಂಕ್, ಫೆಡರಲ್ ಬ್ಯಾಂಕ್, ಕೋಟಕ್ ಹಾಗೂ ಕೆನರಾ ಸೇರಿದಂತೆ 40 ಬ್ಯಾಂಕ್ಗಳ ಸೇವೆ ಸ್ಥಗಿತಗೊಳ್ಳಲಿದೆ.